ದಕ್ಷಿಣ ಕನ್ನಡ

ನನ್ನ ಅಣತಿಯಂತೆ ನಡೆದರೆ ಪಕ್ಷ ಮತ್ತೆ ಅಧಿಕಾರಕ್ಕೇರುವುದು ನಿಶ್ಚಿತ: ದೇವೇಗೌಡ ಖಚಿತ ನುಡಿ

Published On :

ಬೆಳ್ತಂಗಡಿ: 'ಮಕ್ಕಳು ರಾಜಕೀಯವಾಗಿ ನನ್ನ ಮಾತಿನಂತೆ ನಡೆದುಕೊಂಡರೆ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೇರುವುದು ನಿಶ್ಚಿತ ಮತ್ತು ಕುಮಾರ ಮತ್ತೆ ಮುಖ್ಯಮಂತ್ರಿಯಾಗುವುದೂ ಖಚಿತ'
ಇದು ಮಾಜಿ ಪ್ರಧಾನಿ ದೇವೇಗೌಡ ಅವರ ದೃಢವಾದ, ಆತ್ಮವಿಶ್ವಾಸದ ಮಾತು.
ಧರ್ಮಸ್ಥಳದ ಶಾಂತಿವನದಲ್ಲಿ ಗುರುವಾರ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ರಾಜಕೀಯದ ಗುರಿಗಳನ್ನು ತೆರೆದಿಟ್ಟರು.
ತಾನು ಹಲವಾರು ಮಂದಿಗೆ ರಾಜಕೀಯದ ಓಂ ನಾಮ ಕಲಿಸಿದ್ದೇನೆ. ಅವರಿಂದು ನನಗೆ ದ್ರೋಹ ಬಗೆದು ದೊಡ್ಡ ಮನುಷ್ಯರಾಗಿದ್ದಾರೆ. ಆದರೆ ನನಗೆ ವಿಶ್ವಾಸವಿದೆ, ಇನ್ನು ಅಲ್ಪಕಾಲದಲ್ಲಿಯೇ ಪಕ್ಷ ಎದ್ದು ನಿಲ್ಲಲಿದೆ. ನನಗೆ ಇನ್ನು ಪ್ರಧಾನಮಂತ್ರಿಯಾಗಲೀ, ಮುಖ್ಯಮಂತ್ರಿಯಾಗಲೀ ಆಗಬೇಕೆಂಬ ಹಂಬಲವಿಲ್ಲ. ಇವೆರಡು ಸ್ಥಾನಗಳು ತನ್ನಿಂತಾನೇ ಬಂದದ್ದು. ಅಲ್ಪಾವಧಿಯ ಸ್ಥಾನಗಳು ಇವಾಗಿದ್ದರೂ ಗೌರವಯುತವಾಗಿಯೇ ಇದರಿಂದ ನಿರ್ಗಮಿಸಿದ್ದೇನೆ ಎಂದರು.
ಕುಮಾರಗೆ ಉನ್ನತ ಯೋಗ: ರಾಜ್ಯದಲ್ಲಿ ಕುಮಾರನಿಗೆ ಉನ್ನತ ಸ್ಥಾನಕ್ಕೇರುವ ಯೋಗವಿದೆ ಎಂದು ವಿಶ್ವಾಸದಿಂದ ಹೇಳಿದ ದೇವೇಗೌಡರು, ಆದರೆ ಅದು ಕುಮಾರ ತನ್ನ ಮಾತಿನಂತೆ ನಡೆದರೆ ಮಾತ್ರ ಎಂದು ಒತ್ತಿ ಹೇಳಿದರು. ಪಕ್ಷ ಇಂದು ಈ ಸ್ಥಿತಿಗೆ ತಲುಪಿರುವುದು ನನ್ನ ಮಾತಿಗೆ ಬೆಲೆ ಕೊಡದೆ ಇರುವುದರಿಂದ ಎಂದು ಮಾಜಿ ಪ್ರಧಾನಿ ನೋವು ವ್ಯಕ್ತಪಡಿಸಿದರು.
ಮೈತ್ರಿ ಮರೆಯಲಾರದ ನೋವು: ಅಂದು ತನ್ನ ವಿರೋಧವಿದ್ದರೂ ಕುಮಾರ ಬಿಜೆಪಿಯೊಂದಿಗೆ ಸೇರಿದ್ದು ತನಗೆ ಮರೆಯಲಾರದ ದುಃಖದ ಘಟನೆ. ಬೇರೆ ಪಕ್ಷ ಕಟ್ಟುವ ಯೋಚನೆ ತನಗಿಲ್ಲ. ಜೆಡಿಎಸ್‌ನ್ನು ಮತ್ತೆ ಪ್ರಬಲವಾಗಿ ಎದ್ದು ನಿಲ್ಲಿಸಲಿದ್ದೇನೆ. ಇದಕ್ಕಾಗಿ ಎಲ್ಲ ಧನಾತ್ಮಕ ರೂಪುರೇಷೆ ಸಿದ್ಧವಾಗಿದೆ. ತನಗೆ ವಯಸ್ಸಾಗಿರಬಹದು ಆದರೆ ಹೋರಾಟ ಮಾಡಲು ಸಿದ್ಧವಾಗಿದ್ದೇನೆ ಎಂದು 82ರ ಹರೆಯದ ದೇವೇಗೌಡ ವಿವರಿಸಿದರು.
ವ್ಯಕ್ತಿನಿಷ್ಠೆಗೆ ಮೋದಿ ಉದಾಹರಣೆ: ಹಿಂದೆ ಒಂದು ಪಕ್ಷವು ಪಕ್ಷದ ಹೆಸರಿನಲ್ಲಿನ ಪ್ರಚಾರದಿಂದ ಅಧಿಕಾರಕ್ಕೆ ಬರುತ್ತಿತ್ತು. ಆದರೆ ಈಗ ವ್ಯಕ್ತಿಯ ಹೆಸರಿನಲ್ಲಿ ಪಕ್ಷ ಆಡಳಿತ ನಡೆಸುವಂತಾಗಿದೆ. ಇದಕ್ಕೆ ಮೋದಿ ಉದಾಹರಣೆ ಎಂದರು.
ಮಾತುಕತೆ ವೇಳೆ, ಎಲ್ಲೂ ರಾಜಕೀಯ ನಿವೃತ್ತಿಯ ಮಾತು ಬರಲಿಲ್ಲ. ಆಧ್ಯಾತ್ಮಿಕ, ಧಾರ್ಮಿಕ ಜ್ಞಾನವೂ ಅವರ ಮಾತಿನಲ್ಲಿ ಬರುತ್ತಿತ್ತು. ದೇವೆಗೌಡ ಧರ್ಮಸ್ಥಳದ ಶಾಂತಿವನದಲ್ಲಿ ಜು.23ರಿಂದ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದು. ಜು.3ರಂದು ನಿರ್ಗಮಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.