ದಕ್ಷಿಣ ಕನ್ನಡ

ರಾಜಕೀಯ ಒತ್ತಡಕ್ಕೆ ಮಣಿಯೆ ದಕ್ಷಿಣಕನ್ನಡ ಎಸ್ಪಿ ಡಾ.ಶರಣಪ್ಪ

Published On :

ಮಂಗಳೂರು: ಕಾನೂನೇ ಅಂತಿಮ, ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ. ವರ್ಗಾವಣೆಗೆ ಸದಾ ಸಿದ್ಧನಿದ್ದೇನೆ ಎಂದು ಎಸ್‌ಪಿ ಡಾ.ಶರಣಪ್ಪ ಎಸ್.ಡಿ. ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಗ್ರಾಮಾಂತರ ಎಸ್‌ಪಿಯಾಗಿ ಶಂತನು ಸಿನ್ಹಾ ಅವರಿಂದ ಅಧಿಕಾರ ಸ್ವೀಕರಿಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ನನಗೂ ಅನಿರೀಕ್ಷಿತವಾಗಿ ವರ್ಗವಾಗಿದೆ. ದಕ್ಷ ಎಸ್‌ಪಿ ಶಂತನು ಸಿನ್ಹಾಗೂ ಅನಿರೀಕ್ಷಿತವಾಗಿ ವರ್ಗವಾಗಿದೆ. ನಾನು ಕಾನೂನು ಪ್ರಕಾರ ಕೆಲಸ ಮಾಡುತ್ತೇವೆ, ಅಗತ್ಯ ಬಿದ್ದರೆ ವರ್ಗಾವಣೆಗೂ ಸಿದ್ಧ ಎಂದರು. ಪೊಲೀಸಿಂಗ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ತಂತ್ರಜ್ಞಾನ ಸಹಿತವಾಗಿ ಮಾಡುತ್ತೇನೆ. ಜನಸ್ಪಂದನ ಸಭೆ, ನೊಂದವರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಜನ ಮತ್ತು ಪೊಲೀಸ್ ಅಂತರ ಕಡಿಮೆ ಮಾಡಲು ಮತ್ತು ಜನರಿಗೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಹೆಚ್ಚಲು ಶ್ರಮಿಸುತ್ತೇನೆ. ಅಪರಾಧ ಪ್ರಕರಣಗಳ ಬಗ್ಗೆ ಪುನರ್ ಪರಿಶೀಲನೆ ಮಾಡುತ್ತೇವೆ. ಅಪರಾಧ ತಡೆಗಟ್ಟಲು ಸೂಕ್ತ ತಂಡಗಳನ್ನು ಕಟ್ಟಿ ಶೀಘ್ರ ಉತ್ತಮ ಫಲಿತಾಂಶ ನೀಡುತ್ತೇವೆ.
ನಾನಿದ್ದ ಗುಲ್ಬರ್ಗಕ್ಕಿಂತ ದಕ್ಷಿಣಕನ್ನಡ ಜಿಲ್ಲೆ ಬೇರೆಯಾಗಿದೆ. ಸಾಗರದಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದಾಗ ನಕ್ಸಲ್ ಕಾರ್ಯಾಚರಣೆ ಅನುಭವ ಇದೆ. ಸರಿಯಾದ ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ಶಾಂತಿಯಿಂದ ಮತದಾನ ನಡೆಯಲು ಬೇಕಾದ ಎಲ್ಲ ಬಂದೋಬಸ್ತ್ ಮಾಡುತ್ತೇನೆ. 2009ರ ಐಪಿಎಸ್ ಬ್ಯಾಚ್. ತಮಿಳುನಾಡು ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿ ದಿಲ್ಲಿಯ ಕೃಷಿ ವಿವಯಲ್ಲಿ ಪಿಎಚ್‌ಡಿ ಪದವಿ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.