ಅನ್ಯ ರಸ್ತೆಗೆ ತೇಪೆ ಹಾಕಲೆಂದು ತಂದ ಜಲ್ಲಿ ಹಿಂದಕ್ಕೆ ಕಳುಹಿಸಿದ ನಾಗರಿಕರು
ಉಪ್ಪಿನಂಗಡಿ: ಕೊಕ್ಕಡ ಜೋಡುಮಾರ್ಗದಿಂದ ಪೇಟೆವರೆಗಿನ ರಸ್ತೆಗೆ ತೇಪೆ ಕಾರ್ಯ ಮಾಡಲಿಕ್ಕಾಗಿ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರಿಂದ ದೊರೆತ ರು. 4 ಲಕ್ಷ ಅನುದಾನದ ಕಾಮಗಾರಿಗಾಗಿ ತರಿಸಲಾದ ಒಂದು ಲೋಡು ಜಲ್ಲಿಯನ್ನು ಕೊಕ್ಕಡ ಆಟೋ ಚಾಲಕ ಸಂಘದವರು ತಮ್ಮ ಆಕ್ಷೇಪ ವ್ಯಕ್ತ ಪಡಿಸಿ ಜಲ್ಲಿಯನ್ನು ಹಿಂತಿರುಗುವಂತೆ ಮಾಡಿದ ಘಟನೆ ಬುಧವಾರ ನಡೆದಿದೆ.
ಎರಡು ತಿಂಗಳ ಹಿಂದೆ ಕೊಕ್ಕಡ ಪಟ್ರಮೆ ಜಿ.ಪಂ. ರಸ್ತೆಯಲ್ಲಿ ಪ್ರೌಢಶಾಲಾ ಸಮೀಪ 250 ಮೀಟರ್ನಷ್ಟು ದೂರ ಜಿಪಂನ ವತಿಯಿಂದ ಹೊಸ ಡಾಂಬರೀಕರಣಕ್ಕಾಗಿ ಹಳೆಯ ಡಾಂಬರನ್ನು ಕಿತ್ತು ಹಾಕಲಾಗಿದ್ದು, ಬಳಿಕ ಡಾಂಬರೀಕರಣವೂ ಆಗದೇ ರಸ್ತೆ ಸಂಚಾರಕ್ಕೆ ಅಯೋಗ್ಯವಾದಂತಾಗಿದೆ. ಯಾವುದೋ ರಾಜಕೀಯದ ಲೆಕ್ಕಾಚಾರದಲ್ಲಿ ರಸ್ತೆಯನ್ನು ಇದೇ ಸ್ಥಿತಿಯಲ್ಲಿ ಮುಂದುವರೆಸಲಾಗುತ್ತಿದ್ದು, ಇದರಿಂದಾಗಿ ನಾಗರಿಕರು ಅತೀವ ಬವಣೆಗೆ ತುತ್ತಾಗುತ್ತಿದ್ದಾರೆ. ಈ ಅತೀ ಕೆಟ್ಟು ಹೋಗಿರುವ ರಸ್ತೆಯತ್ತ ಯಾರೂ ಗಮನಹರಿಸದೇ ಬೇರೆಡೆ ಡಾಂಬರೀಕರಣ, ತೇಪೆ ಹಚ್ಚುವ ಕಾರ್ಯಗಳು ನಡೆಯುತ್ತಿರುವ ಬಗ್ಗೆ ನಾಗರಿಕರ ಅಸಮಾಧಾನ ಬುಧವಾರ ಸ್ಫೋಟಗೊಂಡಂತಾಗಿದೆ. ಅಲ್ಲಿ ಗಮನಿಸಲಾಗದವರು ಬೇರೆಲ್ಲೂ ಗಮನಿಸುವ ಅಗತ್ಯತೆ ಇಲ್ಲ ಎಂಬ ನಿಲುವು ತಾಳಿದ ನಾಗರಿಕರ , ಇದೇ ಕಾರಣಕ್ಕೆ ಬೇರೆಡೆ ತೇಪೆ ಕಾರ್ಯಕ್ಕಾಗಿ ತಂದ ಜಲ್ಲಿಯನ್ನು ಇಳಿಸಲು ಬಿಡದೇ ಮತ್ತೆ ಹಿಂದಕ್ಕೆ ಕಳುಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

