ದಕ್ಷಿಣ ಕನ್ನಡ

ಬೆಳ್ತಂಗಡಿ: ಇಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Published On :

ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್‌ನ ಬೆಳ್ತಂಗಡಿ ತಾಲೂಕು ಘಟಕದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಸೋಮವಾರ ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಕೊಕ್ಕಡದ ವಿದ್ವಾಂಸ ಶ್ರೀ ಅನಂತ ಪದ್ಮನಾಭ ಶಾಸ್ತ್ರೀ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಬೆಳಗ್ಗೆ 10 ಗಂಟೆಗೆ ವಿದ್ವಾಂಸ ರಾಮನಾಥ ಗೋರೆ ಉದ್ಘಾಟಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಸಮ್ಮೇಳನ ಸಂಚಿಕೆ ಬಿಡುಗಡೆಗೊಳಿಸಿ ಆಶಯ ಭಾಷಣ ಮಾಡಲಿದ್ದಾರೆ. ತಾಲೂಕು ಘಟಕದ ಅಧ್ಯಕ್ಷ ಡಾ.ಬಿ. ಯಶೋವರ್ಮ ಪ್ರಸ್ತಾವಿಸಲಿದ್ದಾರೆ.
11.30ಕ್ಕೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಬಗ್ಗೆ ಸಂಸ್ಮರಣೆಯನ್ನು ಡಾ. ಕೃಷ್ಣಾನಂದ ಪಿ.ಎಂ. ಮಾಡಲಿದ್ದಾರೆ. ಬಾಲಚಂದ್ರ ದಾಮ್ಲೆ ಮತ್ತು ಬಳಗದವರು ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬಳಿಕ ನಡೆಯುವ ಗೋಷ್ಠಿಯಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಡಾ. ಕೇಶವ ಹೆಗಡೆ ಕೊರ್ಸೆ ಅಭಿವೃದ್ಧಿ ಮತ್ತು ಪರಿಸರ- ಪ್ರಸ್ತುತ ಸವಾಲುಗಳು ಎಂಬ ವಿಚಾರವನ್ನು ಮಂಡನೆ ಮಾಡಲಿದ್ದಾರೆ. ಭೋಜನ ವಿರಾಮದ ಬಳಿಕ ಜಿತು ನಿಡ್ಲೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಬಾಬಾ ಉಜಿರೆ, ಸದಾನಂದ ನಾರಾವಿ, ಬಾ ರೆಖ್ಯ, ಗೌತಮಿ ಭಂಡಾರ್‌ಕರ್ ಕಾಶಿಬೆಟ್ಟು, ದಿನಕರ ಹೆಗ್ಡೆ ಬಡಗಕಾರಂದೂರು, ವಸಂತಿ ಟಿ.ನಿಡ್ಲೆ, ವಿಷ್ಣುಗೋಖಲೆ, ಜಯಂತ ಗುಪ್ತ ನಿಟ್ಟಡೆ, ರಮೇಶ್ ಬಿ. ಶಿಶಿಲ, ಚಂದ್ರಹಾಸ ಬಳೆಂಜ, ಅನಿಶ್, ರಶ್ಮಿ ಎನ್. ಭಾಗವಹಿಸಲಿದ್ದಾರೆ.
ಅಪರಾಹ್ನ 3.15 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಮತ್ತು ಹರಿಕಥಾ ಸಾಹಿತ್ಯದ ಲಕ್ಷ್ಮಣದಾಸ್ ವೇಲಣ್ಕರ್, ಶಿಕ್ಷಣ ಕ್ಷೇತ್ರದ ಲಿಯೋ ಡಿ' ಸೋಜ ಕೊಕ್ಕಡ, ಮಹಿಳಾ ಸಾಧಕಿ ಆನಂದಿ ಟೀಚರ್, ಜ್ಯೋತಿಷ್ಯ ಶಾಸ್ತ್ರ, ವೇದ ಪಂಡಿತ ಕಂಬಳಿ ರಾಮಕೃಷ್ಣ ಖಾಡಿಲ್ಕರ್, ನಾಟಿವೈದ್ಯೆ ರುಕ್ಮಿಣಿ ಬದ್ರಿಜಾಲು, ಜಾನಪದ ಕಲಾವಿದ ನಾರ್ಣ ನಲ್ಕೆ, ಸರ್ಕಾರಿ ಸೇವೆಯಲ್ಲಿ ದುಡಿದ ಶಂಭುಶರ್ಮ, ಸಮಾಜ ಸೇವಕ ಹಸನಬ್ಬ ಗೇರುಕಟ್ಟೆ ಇವರನ್ನು ಸನ್ಮಾನಿಸಲಾಗುವುದು.
ಡಾ. ಪ್ರಭಾಕರ ಶಿಶಿಲ ಸಮಾರೋಪ ಭಾಷಣ ಮಾಡಲಿದ್ದಾರೆ. ಸಂಜೆ 5 ಗಂಟೆಯಿಂದ ಮಹಿಳಾ ಯಕ್ಷಗಾನ ತಂಡ ಮುಂಡಾಜೆ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.