ಪರ್ಸ್ ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ
ವಿಟ್ಲ : ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಕಾಶಿಮಠ ಕೊಪ್ಪಳದ ಚಂದ್ರಹಾಸ ಅವರಿಗೆ ಇತ್ತೀಚೆಗೆ ರಾತ್ರಿ ಪರ್ಸ್ ಬಿದ್ದುಸಿಕ್ಕಿದೆ. ಆ ಪರ್ಸ್ನಲ್ಲಿ 2 ಚಿನ್ನದ ಬಳೆ, ಕರಿಮಣಿಸರ, ಪೆಂಡೆಂಟ್ ಮತ್ತು ರು. 270 ನಗದು ಇತ್ತು. ಚಂದ್ರಹಾಸ ಮತ್ತು ಅವರ ಅಣ್ಣ ವಿಜಯ ಕುಮಾರ್ ವಿಟ್ಲ ಪೊಲೀಸ್ ಠಾಣೆಗೆ ಅದನ್ನು ಒಪ್ಪಿಸಿದರು. ಚಂದ್ರಹಾಸ ಅವರು ಬೆಲೆಬಾಳುವ ಆಭರಣವನ್ನು ಪ್ರಾಮಾಣಿಕತೆಯಿಂದ ಹಿಂದಿರುಗಿಸಿದ್ದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಕೃತಕ ಕಾಲು ಜೋಡಣೆ
ಮಂಗಳೂರು: ಲಯನ್ಸ್ ಕ್ಲಬ್ ಇಂಟರ್ನ್ಯಾಶನಲ್ ಮತ್ತು ದ.ಕ. ಅಂಗವಿಕಲರ ಫೆಡರೇಶನ್ ವತಿಯಿಂದ ಮಾ. 15 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಕೃತಕ ಕಾಲು ಜೋಡಣೆ ಶಿಬಿರ ನಡೆಯಲಿದೆ. ಅಗತ್ಯವಿರುವ ದೈಹಿಕ ನ್ಯೂನತೆಯುಳ್ಳ ವ್ಯಕ್ತಿಗಳು ಸೌಲಭ್ಯ ಪಡೆದುಕೊಳ್ಳಬಹುದು ಎಂದು ಫೆಡರೇಶನ್ ಅಧ್ಯಕ್ಷ ದಿನೇಶ್ ಶೆಟ್ಟಿ ಪ್ರಕಟಣೆ ತಿಳಿಸಿದ್ದಾರೆ.
ಇಂದು ಉಪನ್ಯಾಸ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಕನಕದಾಸ ಸಂಶೋಧನಾ ಕೇಂದ್ರ ವತಿಯಿಂದ ಮಾ. 11 ರಂದು ಹಳೆ ಸೆನೆಟ್ ಸಭಾಂಗಣದಲ್ಲಿ 'ಕನಕ ಸ್ಮೃತಿ' ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಸಾಮುದಾಯಿಕ ಪಾಲ್ಗೊಳ್ಳುವಿಕೆ ಕಾರ್ಯಕ್ರಮದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕನಕ ಸ್ಮರಣಿಕೆ ಹಾಗೂ ರು. 3 ಸಾವಿರ ನಗದು ನೀಡಿ ಗೌರವಿಸಲಾಗುವುದು. ನಂತರ ಕನಕ ಕೀರ್ತನ ಪ್ರಸ್ತುತಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಶವ ವಿಲೇಗೆ ಸೂಚನೆ
ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ವಾರಸುದಾರರಿಲ್ಲ ಸರಳ(21), ಅಚ್ಚುತ ಪ್ರಭು(40) ಹಾಗೂ ಸೇಸಮ್ಮ(68) ಅನಾಥ ಶವಗಳಿದ್ದು, ಸಂಬಂಧಪಟ್ಟವರು 3 ದಿನದೊಳಗೆ ಸಂಪರ್ಕಿಸಿ ವಿಲೇವಾರಿ ಮಾಡುವಂತೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ.
ಪ್ರತಿಭಟನೆ ಮುಂದೂಡಿಕೆ
ಮಂಗಳೂರು: ಅಖಿಲ ಭಾರತ ಟ್ರೇಡ್ ಯೂನಿಯನ್(ಎಐಟಿಯುಸಿ) ನೇತೃತ್ವದಲ್ಲಿ ಮಾ. 11 ರಂದು ಬೆಳಗ್ಗೆ 10 ಗಂಟೆಗೆ ಕಂಕನಾಡಿ ಬಸ್ ನಿಲ್ದಾಣದಿಂದ ಕಾರ್ಮಿಕ ಭವಿಷ್ಯನಿಧಿ ಕಚೇರಿಯವರೆಗೆ ಆಯೋಜಿಸಿದ್ದ ಭವಿಷ್ಯನಿಧಿ ಚಲೋ ಕಾರ್ಯಕ್ರಮ ಲೋಕಸಭೆ ಚುನಾವಣೆ ಪ್ರಕಟಗೊಂಡು ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸೈನಿಕ ಮಂಡಳಿ ಪುನಾರಚನೆ
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಸೈನಿಕ ಮಂಡಳಿಯನ್ನು ಪುರ್ನರಚಿಸಬೇಕಾಗಿದ್ದು, ಉಪಾಧ್ಯಕ್ಷರ ಸ್ಥಾನಕ್ಕೆ ಆಸಕ್ತಿಯುಳ್ಳ ಓರ್ವ ಮಾಜಿ ಸೈನ್ಯಾಧಿಕಾರಿ ಹಾಗೂ ಅಧಿಕಾರೇತರ ಸದಸ್ಯರಾಗಿ ನೇಮಕಾತಿಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಅರ್ಹ ಮಾಜಿ ಸೈನಿಕರು ಮಾ. 15 ರೊಳಗೆ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ, ಉರ್ವಸ್ಟೋರ್, ಮಂಗಳೂರು ಇಲ್ಲಿಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಶಿಶಿಕ್ಷು ತರಬೇತಿ
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಇಚ್ಚಿಸುವ 18 ರಿಂದ 26 ವರ್ಷ ವಯೋವುತಿಯ ಎಸ್ಎಸ್ಎಲ್ಸಿ, ಐ.ಟಿ.ಐ.ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪಾಸಾ (ಪಿಎಎಸ್ಎಎ) ವೃತ್ತಿಗೆ ಪಿಯುಸಿಯೊಂದಿಗೆ ಕಂಪ್ಯೂಟರ್ ಅಪರೇಟರ್ ಪ್ರೊಗ್ರಾಮಿಂಗ್ ಅಸಿಸ್ಟೆಂಟನಲ್ಲಿ ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳು ಮೂಲ ದಾಖಲಾತಿಯೊಂದಿಗೆ ಮಾ. 28 ರಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ನೇರ ಸಂದರ್ಶಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ 0824-2212251 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಕಾಲಾವಧಿ ಉತ್ಸವ
ವಿಟ್ಲ: ಅಳಿಕೆ ಗ್ರಾಮದ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಮಾ.13ರಂದು ಕಾಲಾವಧಿ ಉತ್ಸವ ಮತ್ತು ಮಾ.14ರಂದು ಭೂತಬಲಿ ಉತ್ಸವ ನಡೆಯಲಿದೆ. 13ರಂದು ಯಕ್ಷವೇದಿಕೆ ಪಡಿಬಾಗಿಲು ಅವರಿಂದ ತಾಳಮದ್ದಳೆ, 12.30ಕ್ಕೆ ಬಲಿವಾಡು ಕೂಟ, ಮಹಾಪೂಜೆ, ಸಂಜೆ ದೀಪಾರಾಧನೆ, ನಾಮಸಂಕೀರ್ತನೆ, ಉತ್ಸವ ಬಲಿ ನೆರವೇರಲಿದೆ. 14ರಂದು ಬೆಳಗ್ಗೆ ಭೂತಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

