ಚಿನ್ನಾಭರಣ ದುರುಪಯೋಗ: ಅರ್ಚಕ ವಿರುದ್ಧ ಪ್ರಕರಣ ದಾಖಲು
ಪಡುಬಿದ್ರಿ: ಇಲ್ಲಿನ ಉಚ್ಚಿಲದ ಮಹಾಲಿಂಗೇಶ್ವರ ದೇವಾಲಯದಲ್ಲಿ ಅನುವಂಶಿಕ ಅರ್ಚಕರೊಬ್ಬರು ದೇವಳಕ್ಕೆ ಸೇರಿದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣಗಳನ್ನು ದುರುಪಯೋಗಪಡಿಸಿದ ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.
ದೇವಸ್ಥಾನ ಭಕ್ತರು ನೀಡಿದ ದೂರಿನಂತೆ ಹಿಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ನಾಗೇಂದ್ರ ಸಾರ್ವಜನಿಕರು ಹಾಗೂ ಅನುವಂಶಿಕ ಮೊಕ್ತೇಸರರ ಸಮಕ್ಷಮ ದೇವಳದ ಭದ್ರತಾ ಕೊಠಡಿ ತೆರೆದು ದೇವಳದ ಚಿನ್ನ ಹಾಗೂ ಬೆಳ್ಳಿ ಸೊತ್ತುಗಳ ರಿಜಿಸ್ಟರ್ನೊಂದಿಗೆ ಪರಿಶೀಲನೆ ಮಾಡಿದರು. ಈ ಸಂದರ್ಭ 868.800 ಗ್ರಾಂ. ತೂಕದ ರು. 25 ಲಕ್ಷ ಮೌಲ್ಯದ 35 ಬಗೆಯ ಆಭರಣಗಳು ಕಾಣೆಯಾಗಿರುವುದು ಪತ್ತೆಯಾಗಿದೆ. ಅದೇ ರೀತಿ ಬೆಳ್ಳಿಯ ಸೊತ್ತುಗಳ ರಿಜಿಸ್ಟರ್ನಲ್ಲಿ ದಾಖಲಿಸಲಾದ ಕೆಲವು ಸೊತ್ತುಗಳು ಹಾಗೂ ಇತ್ತೀಚಿಗೆ ದಾನಿಗಳು ನೀಡಿದ 14 ಬೆಳ್ಳಿಯ ಕಳಸಗಳು ಹಾಗೂ ಎರಡು ಬೆಳ್ಳಿಯ ಹರಿವಾಣಗಳು ಕಾಣೆಯಾಗಿವೆ. ಇವುಗಳನ್ನು ದೇವಳದ ಅರ್ಚಕ ಯು. ಗಣೇಶ್ ಭಟ್ ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ಇಲಾಖೆಯ ಸ.ಆಯುಕ್ತ ನಾಗೇಂದ್ರ ನೀಡಿರುವ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

