ಬಿಜೆಪಿಯಿಂದ ನಳಿನ್, ಎನ್ಸಿಪಿಯಿಂದ ಸುಪ್ರೀತ್ ಕುಮಾರ್ ನಾಮಪತ್ರ ಸಲ್ಲಿಕೆ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಸ್ಥಾನಕ್ಕೆ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿಯಿಂದ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ಸಿಪಿ) ಅಭ್ಯರ್ಥಿಯಾಗಿ ಸುಪ್ರೀತ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಎರಡನೇ ದಿನ ಒಟ್ಟು 2 ನಾಮಪತ್ರ ಸಲ್ಲಿಕೆಯಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ 3 ನಾಮಪತ್ರ ಸಲ್ಲಿಸಿದರು. ಸುಪ್ರೀತ್ ಕುಮಾರ್ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ಸಿಂಹ ನಾಯಕ್, ಪ್ರಚಾರ ಸಮಿತಿ ಅಧ್ಯಕ್ಷ ರುಕ್ಮಯ ಪೂಜಾರಿ, ಶಾಸಕರಾದ ಅಂಗಾರ, ಮೋನಪ್ಪ ಭಂಡಾರಿ ಜತೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಇಬ್ರಾಹಿಂಗೆ ನಾಮಪತ್ರ ಸಲ್ಲಿಸಿದರು. ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ವೆಚ್ಚ ವೀಕ್ಷಕ ಶಾಂತೇಶ್ವರ ಸ್ವಾಮಿ ಇದ್ದರು.
ಸುಪ್ರೀತ್ 2ನೇ ಬಾರಿ ಯಶಸ್ವಿ: ಎನ್ಸಿಪಿ ಅಭ್ಯರ್ಥಿ ಸುಪ್ರೀತ್ ಕುಮಾರ್ ಮಧ್ಯಾಹ್ನ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದರು. ಆದರೆ ಸೂಕ್ತ ಅಫಿದವಿತ್ ಸಲ್ಲಿಸದಿರುವುದು, ಸಹಿಯಲ್ಲಿನ ವ್ಯತ್ಯಾಸದಿಂದ ನಾಮಪತ್ರ ಸ್ವೀಕರಿಸಲು ಜಿಲ್ಲಾ ಚುನಾವಣಾಧಿಕಾರಿ ನಿರಾಕರಿಸಿದರು. ಸಂಜೆ ವ್ಯತ್ಯಾಸ ಸರಿಪಡಿಸಿಕೊಂಡು ಸುಪ್ರೀತ್ ಕುಮಾರ್ ಮತ್ತೆ ನಾಮಪತ್ರ ಸಲ್ಲಿಸಿದರು.
ಎನ್ಸಿಪಿ ಬಿ ಫಾರಂ ಇಲ್ಲದೆ ನಾಮಪತ್ರ
ಎನ್ಸಿಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಪ್ರೀತ್ ಕುಮಾರ್, ತನಗೆ ಗೆಲವಿನ ವಿಶ್ವಾಸವಿದೆ. ತನ್ನದೇ ಬಳಗ ತನ್ನ ಚುನಾವಣೆ ಪ್ರಚಾರಕ್ಕೆ ನೆರವಾಗುತ್ತಾರೆ. ಎನ್ಸಿಪಿ ರಾಜ್ಯ ಅಧ್ಯಕ್ಷ ಮಹೇಂದ್ರ ಗೌಡ ಪ್ರಚಾರಕ್ಕೆ ಬರಲಿದ್ದಾರೆ. ತನಗೆ ಇನ್ನೂ 'ಬಿ' ಫಾರ್ಮ್ ಸಿಕ್ಕಿಲ್ಲ. ಆದರೂ ನಾಮಪತ್ರ ಸಲ್ಲಿಸಿದ್ದೇನೆ. ಶೀಘ್ರ 'ಬಿ' ಫಾರ್ಮ್ ಸಿಗಲಿದೆ ಎಂದರು. 2008ರಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಯುನಿಂದ ಸ್ಪರ್ಧಿಸಿ 745 ಮತ, 2009ರಲ್ಲಿ ಎನ್ಸಿಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ 1,600 ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.
ಅನರ್ಹ: 2008 ವಿಧಾನಸಭೆ ಚುನಾವಣೆಯ ಖರ್ಚು ಲೆಕ್ಕ ನೀಡದ ಕಾರಣಕ್ಕೆ 2013ರಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಎನ್ಸಿಪಿಯಿಂದ ಕಣಕ್ಕಿಳಿದರೂ ಚುನಾವಣೆ ಆಯೋಗ ಸ್ಪರ್ಧೆಯಿಂದ ಇವರನ್ನು ಅನರ್ಹಗೊಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

