ದಕ್ಷಿಣ ಕನ್ನಡ

ಪಜಿರೋಡಿ ರಸ್ತೆ ಕಾಮಗಾರಿ ಅನುದಾನ ಸ್ಥಳಾಂತರ; ಆಕ್ಷೇಪ

Published On :

ಪುತ್ತೂರು: ಜಿಲ್ಲಾ ಪಂಚಾಯಿತಿ ವಿಶೇಷ ಘಟಕ ಯೋಜನೆಯಡಿ ನರಿಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿಗೋಡು ಗ್ರಾಮದ ಪಜಿರೋಡಿ ಪರಿಶಿಷ್ಟ ಜಾತಿಯ ಕಾಲನಿ  ರಸ್ತೆ ಅಭಿವೃದ್ಧಿಗಾಗಿ ಮಂಜೂರಾಗಿರುವ ಅನುದಾನವನ್ನು ಓಟಿನ ರಾಜಕೀಯಕ್ಕೋಸ್ಕರ ಪಾಣಂಬು ಪಂಚಾಯಿತಿ ರಸ್ತೆಗೆ ಹಸ್ತಾಂತರಿಸುವ ಹುನ್ನಾರ ನಡೆಸಲಾಗಿದೆ. ಈ ಅನುದಾನವನ್ನು ಪಜಿರೋಡಿ ಕಾಲೋನಿ ರಸ್ತೆಗೆ ಬಳಸದಿದ್ದಲ್ಲಿ ದಲಿತ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪಿ. ಕೇಶವ ಎಚ್ಚರಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಜಿರೋಡಿ ಕಾಲನಿ ರಸ್ತೆ ಕಾಂಕ್ರೀಟ್‌ಕರಣಕ್ಕೆ ಮಂಜೂರಾದ ಅನುದಾನವನ್ನು ಕಾಲನಿಯ ರಸ್ತೆ ಕಾಮಗಾರಿಗೆ ಬಳಸಬೇಕು. ಕಾಮಗಾರಿ ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.
ಕಾಮಗಾರಿ ಕೂಡಲೇ ಆರಂಭಿಸದಿದ್ದಲ್ಲಿ ಅಥವಾ ಈ ಅನುದಾನವನ್ನು ರಾಜಕೀಯ ಒತ್ತಡಕ್ಕೆ ಮಣಿದು ಪಾಣಂಬು ಪಂಚಾಯಿತಿ ರಸ್ತೆಗೆ ಹಸ್ತಾಂತರಿಸುವ ಕೆಲಸ ನಡೆದಲ್ಲಿ ಕಾಲನಿಯ ಪರಿಶಿಷ್ಟರು ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುವರು ಎಂದು ಎಚ್ಚರಿಸಿದರು.
ಪಾಣಂಬು ವ್ಯಾಪ್ತಿಯಲ್ಲಿ ಕೇವಲ 3 ಪರಿಶಿಷ್ಟ ಕುಟುಂಬಗಳಿದ್ದರೂ ಅಲ್ಲಿನ ರಸ್ತೆ ಅಭಿವೃದ್ಧಿ ಕೆಲಸ ಮಾಡುವುದು ಬೇಡ ಎಂದು ನಾವು ಕೇಳುತ್ತಿಲ್ಲ ಎಂದ ಅವರು ಕಾಲನಿ ರಸ್ತೆಗೆ ಮಂಜೂರಾದ ಅನುದಾನ ಬದಲಾವಣೆಗೊಳಿಸುವ ಹುನ್ನಾರ ಖಂಡಿಸುವುದಾಗಿ ಹೇಳಿದರು.
ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಸೂರಪ್ಪ ಹತ್ಯಡ್ಕ, ಪುತ್ತೂರು ತಾಲೂಕು ಸಂಚಾಲಕ ಚೇತನ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ದೇವಪ್ಪ ನರಿಮೊಗ್ರು, ದಲಿತ ಸಂಘಟನೆ ಮುಖಂಡರಾದ ದೇವಪ್ಪ ಎಸ್.ಪಿ ಪಜಿರೋಡಿ, ಯುವರಾಜ್ ಪಜಿರೋಡಿ, ಕಾಂತಪ್ಪ ಪಜಿರೋಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.