ದಕ್ಷಿಣ ಕನ್ನಡ

ವೇಗದ ಬೈಕ್ ಚಲಾಯಿಸುವ ಹುಚ್ಚಾಟಕ್ಕೆ ವಿದ್ಯಾರ್ಥಿ ಬಲಿ

Published On :

ಮಂಗಳೂರು: ಅತಿ ವೇಗದ ಬೈಕ್ ಚಲಾಯಿಸುವ ಹುಚ್ಚಾಟಕ್ಕೆ ವೈದ್ಯಕೀಯ ವಿದ್ಯಾರ್ಥಿ ಧಾರುಣವಾಗಿ ಮೃತಪಟ್ಟಿದ್ದಾನೆ. ತಣ್ಣೀರುಬಾವಿ ಬಳಿ ಭಾನುವಾರ ಬೆಳಗ್ಗಿನ ಜಾವ ಬೈಕ್‌ನ ಗರಿಷ್ಠ ಮಿತಿಯನ್ನು ಮುಟ್ಟಬೇಕು ಎಂಬ ಉದ್ದೇಶದಿಂದ ಅತ್ಯಂತ ವೇಗವಾಗಿ ಚಲಾಯಿಸಿದ್ದು, ನಿಯಂತ್ರಣ ತಪ್ಪಿ ಮರಕ್ಕೆ ಬೈಕ್‌ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ದೇಹದಿಂದ ಸಂಪೂರ್ಣವಾಗಿ ತಲೆ ಬೇರ್ಪಟ್ಟು ಕೆಲವು ಅಡಿಗಳ ದೂರದಲ್ಲಿ ಬಿದ್ದಿದೆ.
ಮೃತಪಟ್ಟ ವಿದ್ಯಾರ್ಥಿ ರೋಹಿತ್ (23) ಕೇರಳ ಮೂಲದವರು. ನಗರದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ಕಮಿಷನರ್ ಆರ್. ಹಿತೇಂದ್ರ, ಅಪರಾಧ ವಿಭಾಗ ಡಿಸಿಪಿ ವಿಷ್ಣುವರ್ಧನ್ ಸ್ಥಳಕ್ಕೆ ಭೇಟಿ ನೀಡಿದರು.
ಕೊಲೆ ವದಂತಿ: ಆರಂಭದಲ್ಲಿ ಯುವಕನನ್ನು ಕೊಲೆ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ದೇಹ ಬಿದ್ದ ರೀತಿ, ಮೂಳೆಗಳಲ್ಲ ಮುರಿದಿರುವುದು, ಬೈಕ್ ಬಿದ್ದಿರುವುದು ಅಪಘಾತಕ್ಕೆ ಪುಷ್ಟಿ ನೀಡಿತು. ಮಿತಿ ಮೀರಿದ ವೇಗದಲ್ಲಿ ಬೈಕ್ ಚಲಾಯಿಸಿದ ಪರಿಣಾಮ ಮರಕ್ಕೆ ಬೈಕ್ ಡಿಕ್ಕಿಯಾಗಿದೆ. ಆದ್ದರಿಂದಲೇ ದೇಹದಿಂದ ತಲೆ ತುಂಡಾಗಿದೆ ಎಂದು ಪಣಂಬೂರು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ತಣ್ಣೀರುಬಾವಿ, ಪಣಂಬೂರು ಪರಿಸರದಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಹುಚ್ಚು ಹೆಚ್ಚಿದ್ದು, ಅನೇಕ ವಿದ್ಯಾರ್ಥಿಗಳು ಈ ಭಾಗದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.