ಕಾಂಗ್ರೆಸ್ ಬಜರಂಗದಳ ಮೆಗಾಫೈಟ್
ಮಂಗಳೂರು: ನೆಹರು ಮೈದಾನದಲ್ಲಿ ಸುವರ್ಣ ಸುದ್ದಿವಾಹಿನಿ ಮೆಗಾ ಫೈಟ್ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಹಿಂದು ಸಂಘಟನೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಸ್ಫೋಟಗೊಂಡು ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ವೇದಿಕೆಯಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ, ಕ್ಯಾ.ಗಣೇಶ್ ಕಾರ್ಣಿಕ್, ಯಾದವ ಶೆಟ್ಟಿ, ಆಪ್ ಅಭ್ಯರ್ಥಿ ವಾಸುದೇವ ರಾವ್ಗೆ ಪ್ರಶ್ನೆ ಕೇಳುತ್ತಿದ್ದರು.
ಎಸ್ಡಿಪಿಐ ಪಕ್ಷದ ಪ್ರತಿನಿಧಿ, ಸಚಿವ ರಮಾನಾಥ ರೈ ಅವರಿಗೆ ಕೇಳಿದ ಪ್ರಶ್ನೆಯೇ ಗಲಾಟೆಗೆ ಕಾರಣವಾಯಿತು. 'ಕಲ್ಲಡ್ಕ ಪ್ರಭಾಕರ ಭಟ್ಟರ ನಡುವೆ ಫೈಟ್, ಕಾಂಗ್ರೆಸ್ ಸರ್ಕಾರ ಬಂದರೆ ಬಂಧಿಸುವುದಾಗಿ ಭರವಸೆ ಕೊಟ್ಟಿರಿ. ಇನ್ನೂ ಬಂಧಿಸಿಲ್ಲ ಏಕೆ ನಿಮಗೆ ಸಾಮರ್ಥ್ಯ ಇಲ್ಲವೇ' ಎಂದು ಪ್ರಶ್ನಿಸಿದರು.
ಎಸ್ಡಿಪಿಐ ಕಾರ್ಯಕರ್ತರ ಹಿಂಭಾಗದಲ್ಲಿಯೇ ವಿಶ್ವಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ನಿಂತು ಜೈ ಮೋದಿ ಎಂದು ಜೈಕಾರ ಕೂಗುತ್ತಿದ್ದರು. ವಿಹಿಂಪ ಕಾರ್ಯಾಧ್ಯಕ್ಷ ಜಗದೀಶ ಶೇಣವ, ಬಿಜೆಪಿ ಮುಖಂಡ ಶ್ರೀಕರ ಪ್ರಭು ಜತೆಯಲ್ಲಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಜೈ ಪೂಜಾರಿ ಎಂದು ಘೋಷಣೆ ಕೂಗುತ್ತಿದ್ದರು. ಎಸ್ಡಿಪಿಐ ಕಾರ್ಯಕರ್ತನನ್ನು ಕುಳ್ಳಿರಿಸಲು ಬಜರಂಗದಳ ಕಾರ್ಯಕರ್ತರು ಮುಂದಾದರು.
ಆಗ ತಟ್ಟನೆ ಮೇಲೆದ್ದ ಕಾಂಗ್ರೆಸ್ ಬೆಂಬಲಿಗರು ಬಜರಂಗದಳ ಕಾರ್ಯಕರ್ತರ ಬಳಿ ಬಂದು ವಾಗ್ವಾದಕ್ಕೆ ನಿಂತರು. ಕಾರ್ಪೊರೇಟರ್ ಪ್ರವೀಣ್ಚಂದ್ರ ಆಳ್ವ ಬಜರಂಗದಳದ ಪುನೀತ್ ಕೊಟ್ಟಾರಿ ನಡುವೆ ಹೊಯ್ಕೈ ನಡೆಯಿತು. ಬಳಿಕ ಪರಸ್ಪರ ಕುರ್ಚಿಗಳನ್ನು ಎಸೆದರು. ಪಾಂಡೇಶ್ವರ ಸಬ್ಇನ್ಸ್ಪೆಕ್ಟರ್ ಅನಂತ ಮುರ್ಡೇಶ್ವರ ತಲೆ ಮೇಲೂ ಕುರ್ಚಿ ಬಿತ್ತು.
ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಡಿಸಿಪಿ ಜಗದೀಶ್, ಎಸಿಪಿ ಪವನ್ ನಿಜ್ಜೂರು ನೇತೃತ್ವದ ಪೊಲೀಸರು ಕಡೆಗೂ ಗಲಾಟೆ ನಿಯಂತ್ರಿಸಿದರು. ಕಾರ್ಯಕ್ರಮ ನಡೆಸುವಂತೆ ಅನುಮತಿ ನೀಡಲು ಸಂಘಟಕರು ಪರಿ ಪರಿಯಾಗಿ ಕೇಳಿದರು ಪೊಲೀಸರು ಅನುಮತಿ ನೀಡಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

