ವಿಕಲಚೇತನರಿಗೆ ಕಾಯ್ದಿರಿಸಿದ ಜಾಗ ನಸೀಮಾ ಟ್ರಸ್ಟ್ಗೆ: ಯು.ಟಿ. ಖಾದರ್
ಮಂಗಳೂರು: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಸೀಮಾ ಟ್ರಸ್ಟ್ಗೆ ಅರ್ಹವಾಗಿಯೇ ಜಾಗ ಲಭಿಸಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲ ಟ್ರಸ್ಟ್ಗೆ ಜಾಗ ಮಂಜೂರು ಆಗಿರಲೇ ಇಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಸೀಮಾ ಟ್ರಸ್ಟ್ಗಾಗಿ ಬಿಡಿಎ ಸೈಟ್ ಅಲಾಟ್ಮೆಂಟ್ಗೆ ದೈಹಿಕ ಅಶಕ್ತ ಮತ್ತು ಬುದ್ಧಿಮಾಂದ್ಯರ ಶ್ರೇಯೋಭಿವೃದ್ಧಿ ವಿಭಾಗದಡಿ ಸಹೋದರ ಅರ್ಜಿ ಸಲ್ಲಿಸಿದ್ದರು. ಬನಶಂಕರಿ 6ನೇ ಹಂತದಲ್ಲಿ ಜಾಗ ಲಭಿಸಿತ್ತು. ಕುಕ್ಕೆಸುಬ್ರಹ್ಮಣ್ಯ ದೇಗುಲದವರು ಜಾಗ ಬೇಕೆಂದು ಅರ್ಜಿ ಸಲ್ಲಿಸಿದ್ದು, ಅವರು ಸರಿಯಾದ ವಿಭಾಗದಲ್ಲಿ ಅರ್ಜಿ ಸಲ್ಲಿಸದೆ ತಪ್ಪು ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ಸಿಗಲಿಲ್ಲ. ಬಿಡಿಎ ಆಯುಕ್ತರು ದೇವಸ್ಥಾನ ಮೇಲೆ ಭಯ ಭಕ್ತಿ ಉಳ್ಳವರು, ಅವರು ತಪ್ಪು ಮಾಡುವ ಸಾಧ್ಯತೆಯೇ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಸೀಮಾ ಟ್ರಸ್ಟ್ನಿಂದ ತಪ್ಪಾಗಿದ್ದರೆ ಜಾಗ ವಾಪಸ್ ಕೊಡವುದಾಗಿ ಹೇಳಿದ್ದೆ. ಆದರೆ ವಿಕಲಚೇತನರ ವಿಭಾಗದಲ್ಲಿ ದೇಗುಲದ ಟ್ರಸ್ಟ್ಗೆ ಜಾಗ ಸಿಗಲು ಸಾಧ್ಯವೇ ಇಲ್ಲ. ನಸೀಮಾ ಟ್ರಸ್ಟ್ಗೆ ಕಾನೂನು ಬದ್ಧವಾಗಿಯೇ ಜಾಗ ಲಭಿಸಿದೆ. ದೇವರ ಮೇಲೆ ನಮಗೆ ಭಕ್ತಿ ಇದೆ. ನಮ್ಮ ಹಿರಿಯರ ಜಾಗದಲ್ಲಿದ್ದ ಹಿಂದೂಗಳ ನಾಗ ಮೂರ್ತಿಗಳ ಜೀರ್ಣೋದ್ಧಾರಕ್ಕಾಗಿ ಜಾಗವನ್ನೇ ನೀಡಿದ್ದೆವು. ಅವರು ಆಗ ನಮ್ಮನ್ನು ಗೌರವಸಿದ್ದರು ಎಂದು ಖಾದರ್ ಹೇಳಿದರು.
'ಆರೋಪ ಮಾಡುತ್ತಿರುವ ಬಿಜೆಪಿ ಸಂಸದರು ಒಮ್ಮೆ ಸಂಸದನಾಗಿ ಸೈಟ್ ಪಡೆದುಕೊಂಡಿದ್ದಾರೆ. ಆದರೆ ನಾನು 3 ಬಾರಿ ಶಾಸಕನಾದರೂ ಸೈಟ್ ಸಿಕ್ಕಿಲ್ಲ. ಸೈಟ್ ಹೊಡೆಯೋದು ಬಿಜೆಪಿಗರ ಬುದ್ಧಿ, ಆದರೆ ನಾವು ಜಾಗ ಕೊಡುವವರು' ಎಂದು ಖಾದರ್ ವಿಶ್ಲೇಷಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಆರೋಪ ಪೂರ್ವಯೋಜಿತ. ಆರೋಗ್ಯ ಸಚಿವ ಯು.ಟಿ.ಖಾದರ್ಗೂ ಟ್ರಸ್ಟ್ಗೂ ಏನೂ ಸಂಬಂಧ ಇಲ್ಲ. ಇದರ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡುತ್ತಿದ್ದೇವೆ ಎಂದರು.
ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

