'ದರ ಏರಿಕೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಯುಪಿಸಿಎಲ್ ಉತ್ಪಾದನೆ ಸ್ಥಗಿತ'
ಪಡುಬಿದ್ರಿ: ಬಿಜೆಪಿ ಆಡಳಿತಾವಧಿಯಲ್ಲಿ ಸ್ಥಾಪನೆಯಾದ ಎಲ್ಲೂರು ಬಳಿಯ ಯುಪಿಸಿಎಲ್ ವಿದ್ಯುತ್ ದರ ಏರಿಸುವಂತೆ ಪ್ರಸ್ತಾವನೆ ಕಳಿಸಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ತಿರಸ್ಕರಿಸಿದ್ದಕ್ಕಾಗಿ ಯಂತ್ರ ಸ್ಥಗಿತದ ನೆಪವೊಡ್ಡಿ ವಿದ್ಯುತ್ ಉತ್ಪಾದನೆಯನ್ನೇ ನಿಲ್ಲಿಸಿದೆ ಎಂದು ಉಡುಪಿ- ಚಿಕ್ಕಮಗಳೂರು ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಆರೋಪಿಸಿದ್ದಾರೆ. ಭಾನುವಾರ ಹೆಜಮಾಡಿ ಬಿಲ್ಲವ ಮಂದಿರ ಸಭಾಗೃಹದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು 2009ರಲ್ಲಿ ಸ್ಥಾಪನೆಯಾದ ಯುಪಿಸಿಎಲ್ ಯಂತ್ರ ಇಷ್ಟು ಬೇಗ ಹಾಳಾಗಿದ್ದು ಹೇಗೆ? ಎಂದು ಪ್ರಶ್ನಿಸಿದರು. ತನ್ನ ಮೇಲೆ ಎದುರಾಳಿಗಳು ಮಾಡುವ ಟೀಕೆಗೆ ಉತ್ತರಿಸುವ ಗೋಜಿಗೆ ಹೋಗಲಾರೆ ಎಂದ ಹೆಗ್ಡೆ, ನಾನು ಅಪೇಕ್ಷಿಸಿದ ಎಲ್ಲ ಕೆಲಸಗಳು ಆಗಿದ್ದರಿಂದ ಈ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಲು ಅವಕಾಶ ಇರಲಿಲ್ಲ. ಆದಾಗ್ಯೂ ಖಾಸಗಿ ಸದಸ್ಯರ ಬಿಲ್ನಲ್ಲಿ, ಸಂವಿಧಾನ ತಿದ್ದುಪಡಿ ಕುರಿತು, ರಸ್ತೆ ಬದಿ ವ್ಯಾಪಾರಿಗಳ ಪರ್ಯಾಯ ವ್ಯವಸ್ಥೆ ಇತ್ಯಾದಿ ಪ್ರಶ್ನೆ ಹಾಗೂ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ ಎಂದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

