ಪ್ರಯಾಣಿಕರಿಗೆ ಹಲ್ಲೆ ನಡೆಸಿ ತಂಡದಿಂದ ವಾಹನಕ್ಕೆ ಬೆಂಕಿ
ಬಂಟ್ವಾಳ: ಅಪಘಾತದ ನೆಪವೊಡ್ಡಿ ತಂಡವೊಂದು ಸುಮೋ ವಾಹನವನ್ನು ಅಡ್ಡಗಟ್ಟಿ ಅದರಲ್ಲಿ ಪಯಣಿಸುತ್ತಿದ್ದ ನಾಲ್ವರಿಗೆ ಹಲ್ಲೆ ನಡೆಸಿ ಸುಮೋಗೆ ಬೆಂಕಿ ಹಚ್ಚಿದ ಘಟನೆ ಶನಿವಾರ ರಾತ್ರಿ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಟಾಟಾಸುಮೋ ಚಾಲಕ ಇರ್ಫಾನ್ (21), ಅಸ್ಬಾನ್, ಅಫ್ರೀದ್ ಹಾಗೂ ಲತೀಫ ಎಂದು ಗುರುತಿಸಲಾಗಿದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ವಿವರ: ಇರ್ಫಾನ್ ಮತ್ತಿತರ ಮೂವರು ಮಾಣಿ ಕಡೆಗೆ ರಾತ್ರಿ 9.30ರ ವೇಳೆಗೆ ತೆರಳುತ್ತಿದ್ದ ವೇಳೆ ದಾಸಕೋಡಿ ಎಂಬಲ್ಲಿ ಎದುರಿನಿಂದ ಅಡ್ಡಾದಿಡ್ಡಿ ಬಂದ ಪಿಕಪ್ ವಾಹನ ಸುಮೋದ ಒಂದು ಪಾರ್ಶ್ವಕ್ಕೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಪಿಕಪ್ನಿಂದ ಇಳಿದ ನಾಲ್ವರು ಸುಮೋದಲ್ಲಿ ಪಯಣಿಸುತ್ತಿದ್ದವರನ್ನು ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇದರಿಂದ ಹೆದರಿ ಗುಡ್ಡ ಪ್ರದೇಶಕ್ಕೆ ಓಡಿಹೋಗಿದ್ದೆವು. ಬಳಿಕ ಆ ಯುವಕರು ನಮ್ಮ ವಾಹನವನ್ನು ಮಾಣಿಯತ್ತ ಚಲಾಯಿಸಿಕೊಂಡು ಹೋಗಿದ್ದು, ತಡರಾತ್ರಿ ತನ್ನ ತಂದೆ ಸ್ಥಳಕ್ಕೆ ಬಂದು ನೋಡಿದಾಗ ನಮ್ಮ ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು ಎಂದು ಇರ್ಫಾನ್ ಬಂಟ್ವಾಳ ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ತಡರಾತ್ರಿಯೇ ಸುಮೋವನ್ನು ಘಟನಾ ಸ್ಥಳದಿಂದ ತೆರವುಗೊಳಿಸಿದ್ದು, ಬೆಂಕಿಗಾಹುತಿಯಾಗಿರುವ ವಾಹನವನ್ನು ಠಾಣೆಯ ಮುಂದೆ ಇರಿಸಿದ್ದಾರೆ.
ಸುಮೋದಲ್ಲಿ ದನಸಾಗಾಟ..?: ಸುಮೋದಲ್ಲಿ ದನ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ. ಸುಮೋವನ್ನೂ ದನ ಸಹಿತ ಸಾಗಿಸಿ ಯುವಕರು ಅದನ್ನು ಬೇರೊಂದು ಪ್ರದೇಶದಲ್ಲಿ ಬಿಟ್ಟು, ಬಳಿಕ ಸುಮೋವನ್ನು ದಾಸಕೋಡಿಗೆ ತಂದು ಬೆಂಕಿಹಚ್ಚಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಅಕ್ರಮ ದನ ಸಾಗಾಟದ ಬಗ್ಗೆ ಯಾರೂ ದೂರು ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

