ದಕ್ಷಿಣ ಕನ್ನಡ

ಅಹಿಂಸಾ ಹೋರಾಟದಿಂದ ಸ್ವಾತಂತ್ರ್ಯ ದೊರಕಿದ್ದಲ್ಲ: ತೇಜಸ್ವಿನಿ ರಮೇಶ್

Published On :

ಬಂಟ್ವಾಳ:  ಅಹಿಂಸಾ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿಲ್ಲ, ಇದು ದೊಡ್ಡ ಸುಳ್ಳು ಎನ್ನುವ ಮೂಲಕ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಭಾನುವಾರ ಬಿ.ಸಿ. ರೋಡ್‌ನ ರಂಗೋಲಿ ಸಭಾಂಗಣದಲ್ಲಿ ಆಯೋಜಿಸಲಾದ ಬೃಹತ್ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬ್ರಿಟಿಷರ ಕೋವಿಗಳಿಗೆ ಎದೆಕೊಟ್ಟ, ಪ್ರಾಣವನ್ನೇ ಬಲಿಕೊಟ್ಟ ದೇಶಪ್ರೇಮಿ ಮಹಾತ್ಮರ ಹೆಸರುಗಳನ್ನು ಭಾರತದ ಚರಿತ್ರೆಯಲ್ಲಿ ದಾಖಲಿಸಿಲ್ಲ. ಇದರ ಹಿಂದೆಯೂ ಷಡ್ಯಂತ್ರ ಅಡಗಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆಗೆ ಅವರ ರಾಜಕೀಯ ಲೆಕ್ಕಾಚಾರ ಹಾಗೂ ಮೂರ್ಖತನದ ಪರಮಾವಧಿಯೇ ಕಾರಣ ಎಂದರು.
ಐಷಾರಾಮಿ ಹೊಟೇಲ್‌ಗಳಲ್ಲಿ ಹೆಂಡ ಕುಡಿದುಕೊಂಡು ಮೀಟಿಂಗ್ ನಡೆಸುವ ಇವರು ಅನುಸರಿಸುತ್ತಿರುವುದು ಗಾಂಧಿ ಮಾರ್ಗವೇ. ಸಂಘ ಪರಿವಾರದವರು ನಿಜವಾದ ಗಾಂಧಿ ಮಾರ್ಗದಲ್ಲಿ ನಡೆಯುತ್ತಿದ್ದರೂ ಅವರನ್ನು ಭಯೋತ್ಪಾದಕರು ಎಂದು ಚಿತ್ರಿಸಲಾಗುತ್ತಿದೆ ಎಂದರು.
ದೇವಸ್ಥಾನದ ಜಮೀನಿಗೆ ಕಣ್ಣು ಹಾಕಬೇಡಿ:   ಸಚಿವ ಯು.ಟಿ. ಖಾದರ್‌ರ ಹೆಸರು ಉಲ್ಲೇಖಿಸಿ ಮಾತನಾಡಿದ ತೇಜಸ್ವಿನಿ, ಕುಕ್ಕೆ ಸುಬ್ರಹ್ಮಣ್ಯದ ಜಮೀನು ಹಗರಣ ನಡೆಸಿರುವ ನಿಮಗೆ ಈ ದೇಶದ ಬಗ್ಗೆ ಶ್ರದ್ಧೆ, ಪ್ರೀತಿ ಇದ್ದರೆ ಎಂಡೋಸಲ್ಫಾನ್ ಸಂತ್ರಸ್ತರ ಬಗ್ಗೆ ಕಾಳಜಿ ವಹಿಸಿ. ಅದನ್ನು ಬಿಟ್ಟು ವಿಕಲಚೇತನರ ಹೆಸರು ಹೇಳಿ ದೇವಸ್ಥಾನದ ಜಮೀನಿಗೆ ಕಣ್ಣುಹಾಕಬೇಡಿ ಎಂದು ಹೇಳಿದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಸಮಾರೋಪ ಭಾಷಣ ಮಾಡಿ, ಮಹಿಳೆಯರ ಕಣ್ಣೀರು ಕಾಂಗ್ರೆಸ್ ಪಕ್ಷಕ್ಕೆ ಶಾಪವಾಗಲಿದೆ ಎಂದರು. ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ. ಆನಂದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್ ಮಾತನಾಡಿದರು.
ಪಕ್ಷದ ಪ್ರಮುಖರಾದ ರುಕ್ಮಯ ಪೂಜಾರಿ, ಉಳಿಪಾಡಿಗುತ್ತು ರಾಜೇಶ್ ನಾಯಕ್, ಬಬಿತಾ ಕೋಟ್ಯಾನ್, ಶೈಲಜಾ ಭಟ್ ಮತ್ತಿತರರು ಇದ್ದರು. ಜಿ.ಪಂ. ಸದಸ್ಯೆ ನಳಿನಿ ಶೆಟ್ಟಿ ಸ್ವಾಗತಿಸಿದರು. ಕಮಲಾಕ್ಷಿ ವಂದಿಸಿದರು. ಮಣಿಮಾಲಾ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.