ದಶಕದಲ್ಲಿ ನಂ.1 ರೋಗ ಮಾನಸಿಕ: ನ್ಯಾಯಮೂರ್ತಿ ಕುಮಾರ್ ಆತಂಕ
ಮಂಗಳೂರು: ಅಮೆರಿಕಾ, ಜಪಾನ್ನಂಥ ರಾಷ್ಟ್ರಗಳ ಜನತೆ ಹೆಚ್ಚಿನ ಪ್ರಮಾಣದಲ್ಲಿ ಮನೋರೋಗದಿಂದ ಬಳಲುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಇನ್ನು ದಶಕದಲ್ಲಿ ನಂಬರ್ ಒನ್ ರೋಗ 'ಮಾನಸಿಕ ಕಾಯಿಲೆ' ಆಗಲಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷ ಎನ್.ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿಶ್ವಸಂಸ್ಥೆ ಸಮೀಕ್ಷೆ ಪ್ರಕಾರ ಮನಸ್ಸಿನ ಕಾಯಿಲೆ ಪ್ರತ್ಯೊಬ್ಬನಿಗೂ ಇದೆ. ವಿಶ್ವಾದ್ಯಂತ ಶೇ.10 ಮಂದಿಗೆ ಮಾನಸಿಕ ಕಾಯಿಲೆ ಇದೆ, ಶೇ.1 ಮಂದಿ ತೀವ್ರತರ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಮೆರಿಕಾ, ಜಪಾನ್ನಲ್ಲಿ ಶೇ.20ರಿಂದ ಶೇ.25ರಷ್ಟು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮುಂದೆ ಪ್ರಪಂಚದಲ್ಲೇ ಮಾನಸಿಕ ಕಾಯಿಲೆ ಉಲ್ಬಣಗೊಳ್ಳುವ ಅಪಾಯ ಇದೆ. ಆದ್ದರಿಂದ ಇದನ್ನು ಸವಾಲಾಗಿ ಸ್ವೀಕರಿಸಿ ಸಮಾಜ ಹಾಗೂ ದೇಶದ ಸ್ವಾಸ್ಥ ಉಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಎಲ್ಲರಿಗೂ ಮಾನಸಿಕ: ಜಗತ್ತಿನಲ್ಲಿ 8 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಅದಕ್ಕೆ ಮನೋರೋಗ ಕಾರಣ. ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇ.86 ಬಡವರು, ಮಧ್ಯಮ ವರ್ಗದವರು. ಆಧುನಿಕ ಜೀವನಶೈಲಿ, ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಂಡು ಮನೋರೋಗಿಗಳಾಗುತ್ತಿದ್ದಾರೆ. ವಿಶ್ವಸಂಸ್ಥೆ ವರದಿ ಪ್ರಕಾರ, ಜಗತ್ತಿನಲ್ಲಿ ಮಾನಸಿಕಕ್ಕೆ ಒಳಗಾಗದವರು ಯಾರೂ ಇಲ್ಲ. ಒಂದಿಲ್ಲೊಂದು ಮಾನಸಿಕತೆಯಲ್ಲಿ ಎಲ್ಲರೂ ಬಳಲುತ್ತಿದ್ದಾರೆ. ಐ.ಟಿ./ಬಿ.ಟಿ.ಯಲ್ಲಿ ಪ್ರಥಮದಲ್ಲಿರುವ ಬೆಂಗಳೂರು ಮನೋರೋಗದಲ್ಲೂ ಪ್ರಥಮದಲ್ಲಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ವಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ನಗರ ಪೊಲೀಸ್ ಆಯುಕ್ತ ಹಿತೇಂದ್ರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಎಸ್ಪಿ ಡಾ.ಶರಣಪ್ಪ, ಕೆಎಂಸಿ ಡೀನ್ ಡಾ.ವೆಂಕಟ್ರಾಯ ಪ್ರಭು, ಎಸ್ಡಿಎಂ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಬಿ.ಕೆ.ರವೀಂದ್ರ, ಮಂಗಳೂರು ವಕೀಲರ ಸಂಘ ಅಧ್ಯಕ್ಷ ಅಶೋಕ್ ಆರಿಗ, ವೆನ್ಲಾಕ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜೇಶ್ವರಿದೇವಿ, ರಾಜ್ಯ ಮಾನಸಿಕ ಆರೋಗ್ಯ ಕಾರ್ಯದರ್ಶಿ ಡಾ.ಚಂದ್ರಶೇಖರ್ ಇದ್ದರು.
ಇದಕ್ಕೂ ಮೊದಲು ಅರಿವು ಮೂಡಿಸುವ ಜಾಥಾ ನಗರದ ಮೂರು ಕಡೆಗಳಿಂದ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

