ಗೋಕಳವು ಇಸ್ಲಾಂ ವಿರೋಧಿ:ಮುಸ್ಲಿಂ ಮುತೈದ ಮಹಾಝ್
ಮಂಗಳೂರು: ಗೋವು ಕಳ್ಳತನ ಧರ್ಮ ವಿರೋಧಿ. ಎಲ್ಲ ಮುಸ್ಲಿಮರು ಕಟುವಾಗಿ ವಿರೋಧಿಸಬೇಕು. ಶೀಘ್ರದಲ್ಲಿ ಈ ಕುರಿತು ಎಲ್ಲ ಜಮಾತ್‌ಗಳಿಗೂ ನಿರ್ದೇಶನ ನೀಡುವುದಾಗಿ ಮುಸ್ಲಿಂ ಮತ್ತೈದ ಮಹಾಝ್ ರಾಜ್ಯಾಧ್ಯಕ್ಷ ಮಸೂದ್ ಅಬ್ದುಲ್ ಖಾದರ್ ಹೇಳಿದ್ದಾರೆ. ತನಿಕೋಡು ಎನ್‌ಕೌಂಟರ್‌ಗೆ ಬಲಿಯಾದ ಕೃಷ್ಣಾಪುರದ ಕಬೀರ್‌ನ ಕುಟುಂಬಕ್ಕೆ 1 ಲಕ್ಷ ನೀಡಿದ ಬಳಿಕ ಸುದ್ದಿಗಾರರ ಜತೆಮಾತನಾಡಿದರು. ಶಾಸಕ ಮೊಯ್ದಿನ್ ಬಾವ ಇದ್ದರು. ಎಲ್ಲ ಧರ್ಮಗಳು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಎಲ್ಲವನ್ನು ಮಾನವೀಯ ನೆಲೆಯಲ್ಲಿನೋಡಬೇಕು. ಕದ್ದು ತಂದ ದನದ ಮಾಂಸವನ್ನು ತಿನ್ನುವುದನು ಇಸ್ಲಾಂ ವಿರೋಧಿಸುತ್ತದೆ. ಗೋಕಳ್ಳರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೆತ್ತಿಕೊಳ್ಳಬೇಕು ಎಂದರು
ಅವಭೃತದ ವೇಳೆ ಸಾವು : ಪರಿಹಾರಕ್ಕೆ ಮನವಿ
ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನದ ಸಂದರ್ಭದಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ಮತ್ತು ರಾಜ್ಯ ಸರ್ಕಾರದಿಂದ ತಲಾ ರು. 2 ಲಕ್ಷ ಪರಿಹಾರ ನೀಡುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಏ.19ರಂದು ವೀರಮಂಗಳ ಕುಮಾರಧಾರಾ ನದಿಯಲ್ಲಿ ದೇವರ ಅವಭ್ರತ ಸ್ನಾನದ ಸಂದರ್ಭದಲ್ಲಿ ತನ್ನ ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವಾಗ ನೀರಿಗಿಳಿದು ಅತನನ್ನು ರಕ್ಷಿಸಿದ ಬಳಿಕ ನೀರ ಸೆಳೆತಕ್ಕೆ ಸಿಲುಕಿ ಜೀವ ಕಳೆದುಕಗೊಂಡಿರುವ ಅಜಿತ್ ಮತ್ತು ಮಹೇಶ್ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಹಾಗೂ ಇವರಿಬ್ಬರ ಅಗಲಿಕೆಯಿಂದ ಚೇತರಿಸಿಕೊಳ್ಳದ ಕುಟುಂಬಕ್ಕೆ ರು. 2 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಮುಖ್ಯಮಂತ್ರಿಯವರನ್ನು ವಿನಂತಿಸಿದ್ದಾರೆ. ಮೃತ ಅಜಿತ್ ಕುಟುಂಬ ತೀರಾ ಬಡತನದಿಂದ ಕೂಡಿದ್ದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಈ ಕುಟುಂಬಕ್ಕೆ ಸ್ವಂತ ಸೂರು ಒದಗಿಸುವಂತೆ ಮತ್ತು ಅಜಿತ್ ಅವರ ಇಬ್ಬರು ಸಹೋದರಿಯರ ವಿದ್ಯಾಭ್ಯಾಸದ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸುವಂತೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

