ದಕ್ಷಿಣ ಕನ್ನಡ

ಬಡ ಸಾಹಿತಿಗಳ ಪುಸ್ತಕ ಕೊಂಡು ಪ್ರೋತ್ಸಾಹಿಸಿ: ಪುನರೂರು

Published On :

ಮಂಗಳೂರು: ಸಾಹಿತಿಗಳಿಗೆ ಸರಸ್ವತಿಯ ದಯೆ ಇರುತ್ತದೆ ಹೊರತು ಲಕ್ಷ್ಮಿಯದ್ದಲ್ಲ. ಆದ್ದರಿಂದ ಅವರು ಬರೆದ ಪುಸ್ತಕವನ್ನು ಕೊಂಡು ಕೊಂಡಾಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಭಾನುವಾರ ಚಿತ್ತ ಪಬ್ಲಿಕೇಷನ್ ವತಿಯಿಂದ ಶಾರದ ವಿದ್ಯಾಲಯದಲ್ಲಿ ನಡೆದ 21 ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳ ಗುರುದೇವ ಮಠದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಆಧ್ಯಾತ್ಮ ಚಿಂತಕ ತೀರ್ಥರಾಮ ವಳಲಂಬೆ, ಡಾ. ಜನಾರ್ದನ ಭಟ್, ಮುದ್ದು ಮೂಡುಬೆಳ್ಳೆ, ವಿ.ಬಿ. ಅರ್ತಿಕಜೆ, ಮಹೇಶ್ ಮೂರ್ತಿ ಇದ್ದರು.
ಬಿಡುಗಡೆಗೊಂಡ ಪುಸ್ತಕಗಳು: ವಿಜಯನಾಥ ಹೆಗ್ಡೆ- ಪತ್ರಾವಳಿ, ಬೆ.ಗೋ. ರಮೇಶ್- ದಿಗಂತದಾಜೆಯ ಜಗತ್ತು, ಕನ್ನಡ ಸಾಹಿತ್ಯ ದಿಗ್ಗಜರು. ಜಗನ್ನಾಥ ರಾವ್ ಬಹುಳೆ- ರಾಜ್‌ಕುಮಾರ್ ನಡೆದ ಹಾದಿಯಲ್ಲಿ.., ಪರಮೇಶ್ವರ ಹೆಗಡೆ- ಬಂಧನವೇ ದುಃಖ-ಸ್ವತಂತ್ರವೇ ಸುಖ, ಸೋಲು ಗೆಲುವಿನ ಮೊದಲ ಮೆಟ್ಟಿಲು, ಪ್ರತಿಯೊಂದು ಆತ್ಮವೂ ನಕ್ಷತ್ರ. ನಾಗರಾಜ್ ಉಳ್ಳಾಲ್- ಸತ್ಯವಾದ ಭವಿಷ್ಯವಾಣಿಗಳು, ನಮ್ಮ ಮನೆಯ ವಾಸ್ತು. ಬಿ.ಆರ್. ಸುಹಾಸ್- ಭೋಜ ಪ್ರಬಂಧ, ಜೈನ ಕಥೆಗಳು, ಸುಭಾಷಿತ ಮಣಿಮಾಲಾ, ಶೃಂಗಾರ ವಿಲಾಸ. ಎಂ.ಬಿ. ಕಾಮತ್- ಅಪೂರ್ವ ಸಂತ ಶಿರ್ಡಿ ಸಾಯಿ. ಬೈರಕೂರು ವೆಂಕಟೇಶ್- ಮಕ್ಕಳಿಗಾಗಿ ಉಪನಿಷತ್ ಕಥೆಗಳು, ಶಿರಡಿ ಕಥೆಗಳು. ಕೆ.ಎನ್. ಪರಾಂಜಪೆ- ಅನನ್ಯ ಸಾಧಕರು. ನಾಗೇಂದ್ರ ದೊಡ್ಡಮನಿ- ಪ್ರಾಚೀನ ಭಾರತದ ವೈಭವ. ನಾರಾಯಣ ರಾವ್- ಹರಿದಾಸರ ಕೀರ್ತನೆಗಳು, ಡಾ. ಮಹಾಬಲೇಶ್ವರ ರಾವ್- ಶಕುನದ ಹಕ್ಕಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.