ಗ್ರೈಂಡರ್ಗೆ ಸಿಲುಕಿ ಬಾಲಕ ಗಾಯ
ವಿಟ್ಲ: ವಿಟ್ಲಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಹಿಟ್ಟು ರುಬ್ಬುವ ಗ್ರೈಂಡರ್ಗೆ ಸಿಲುಕಿ ಬಾಲಕ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ವಿಟ್ಲಪಡ್ನೂರು ಗ್ರಾಮದ ಕಡಂಬು ನಿವಾಸಿ 3ನೇ ತರಗತಿ ವಿದ್ಯಾರ್ಥಿ ಆಸೀಫ್ (7) ಗಾಯಗೊಂಡಿದ್ದು, ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯೊಳಗಿದ್ದ ಗ್ರೈಂಡರ್ ತಿರುಗುತಿದ್ದ ವೇಳೆ ಆಸೀಫ್ ಅದರತ್ತ ತೆರಳಿದಾಗ ಆತನ ಲುಂಗಿ ಗ್ರೈಂಡರ್ಗೆ ಸಿಲುಕಿತು. ಪರಿಣಾಮ ಬಾಲಕ ಗ್ರೈಂಡರ್ಗೆ ಸಿಕ್ಕಿಹಾಕಿಕೊಂಡಿದ್ದ. ಕೂಡಲೆ ಗಮನಿಸಿದ ಮನೆಯವರು ಆತನನ್ನು ರಕ್ಷಿಸಿ ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ.
ಧರ್ಮಸ್ಥಳ ಯಾತ್ರೆಗೆ ಬಂದ ಬಾಲಕಿ ನಾಪತ್ತೆ
ಬೆಳ್ತಂಗಡಿ: ಸೊರಬದಿಂದ ಧರ್ಮಸ್ಥಳಕ್ಕೆ ಯಾತ್ರಿಕಳಾಗಿ ಬಂದಿದ್ದ ಸವಿತಾ(16) ಮೇ 2ರಿಂದ ನಾಪತ್ತೆಯಾಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.ಸೊರಬ ತಾಲೂಕಿನ ಜಡೆ ಸುರುಳು ತಾಂಡಾದ ಭದ್ರಮ್ಮ ದಾಮಲಪ್ಪ ದಂಪತಿ ತಮ್ಮ ಮಗಳು ಸವಿತಾ ಜತೆ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಮಗಳನ್ನು ಒಂದೆಡೆ ಕೂರಿಸಿ ತಾವು ನದಿ ನೀರಿಗೆ ಸ್ನಾನಕ್ಕೆ ಹೋಗಿದ್ದು ಮರಳಿ ಬಂದು ನೋಡುವಾಗ ಆಕೆ ಇರಲಿಲ್ಲ. ದಪ್ಪ ಶರೀರ, ಮುಖದಲ್ಲಿ ಗುಳಿ ಇದ್ದು ಎಣ್ಣೆಗಪ್ಪು ಮೈ ಬಣ್ಣ ಹೊಂದಿದ್ದಾರೆ. ಹಣೆಯಲ್ಲಿ ಹಚ್ಚೆ ಇದ್ದು ದಪ್ಪಗೂದಲು ಹೊಂದಿದ್ದಾರೆ. ಲಂಬಾಣಿ ಕನ್ನಡ ಭಾಷೆ ಅರಿತಿದ್ದು ಹಳದಿ ಬಣ್ಣದ ಚೂಡಿದಾರ ಧರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

