ದಕ್ಷಿಣ ಕನ್ನಡ

ಜಿಲ್ಲೆಯ ಮೊದಲ ಇಟ್ರೇಡಿಂಗ್ ಪುತ್ತೂರಿನಲ್ಲಿ ಶೀಘ್ರ ಆರಂಭ

Published On :

ಪುತ್ತೂರು: ಜಿಲ್ಲೆಯಲ್ಲೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಇ- ಟ್ರೇಡಿಂಗ್ ವ್ಯವಸ್ಥೆ ಮಾಡಲು ಪುತ್ತೂರು ಎಪಿಎಂಸಿ ಸಜ್ಜಾಗಿದ್ದು ಸದ್ಯದಲ್ಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈ ವ್ಯವಸ್ಥೆಗೆ ಬೇಕಾದ ಪೀಠೋಪಕರಣಗಳನ್ನು  ದರಪಟ್ಟಿ ಮೂಲಕ ಖರೀದಿ ಮಾಡಲು ಎಪಿಎಂಸಿ ಸಿದ್ಧತೆ ನಡೆಸಿದೆ.
ಕೃಷ್ಣಪ್ಪ ಶೆಟ್ಟಿ ಕಡಬ ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಇ-ಟ್ರೇಡಿಂಗ್‌ಗೆ ಬೇಕಾದ ಸಲಕರಣೆಗಳನ್ನು ದರಪಟ್ಟಿ ಮೂಲಕ ಖರೀದಿಸಲು ನಿರ್ಣಯಿಸಲಾಯಿತು.
ಇದೇ ಸಂದರ್ಭದಲ್ಲಿ ಎಪಿಎಂಸಿ ಯಾರ್ಡ್‌ಗಳಲ್ಲಿ ಹಣ್ಣು, ಹೂವು ಮತ್ತು ತರಕಾರಿ ಉತ್ಪನ್ನಗಳ ಮೌಲ್ಯದ ಮೇಲೆ ಪ್ರತಿ 100ಕ್ಕೆ  1 ಮಾರುಕಟ್ಟೆ ಶುಲ್ಕ ವಸೂಲಾತಿಗೆ ನಿರ್ಧರಿಸಲಾಗಿತ್ತು. ಇದೀಗ ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವಚ್ಛತೆ ಹಾಗೂ ಭದ್ರತೆ ಮತ್ತು ಇತರ ಮೂಲಭೂತ ಸೌಲಭ್ಯ ಒದಗಿಸಲು ಹಾಗೂ ನಿರ್ವಹಿಸಲು ಶೇ.1 ರಷ್ಟು ವಸೂಲು ಮಾಡುವ ಬಗ್ಗೆ ನಿರ್ಧರಿಸಲಾಯಿತು. ಮಳೆಗಾಲದ ಪೂರ್ವಭಾವಿಯಾಗಿ ಸುರಕ್ಷತೆಯ ದೃಷ್ಟಿಯಿಂದ ಪ್ರಾಂಗಣದಲ್ಲಿರುವ ಚರಂಡಿಗಳ ಹೂಳು ತೆಗೆದು ಸ್ವಚ್ಛಗೊಳಿಸಲು ಇದೇ ವೇಳೆ ನಿರ್ಧರಿಸಲಾಯಿತು.
ಸಭೆಯಲ್ಲಿ ಎಪಿಎಂಸಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ಸದಸ್ಯರಾದ ಸೀತಾರಾಮ ಗೌಡ, ಕೆ.ಎಸ್. ರಂಗನಾಥ್, ಗುರುನಾಥ ಗೌಡ, ತ್ರಿವೇಣಿ ಪೆರ್ವೋಡಿ, ಸಾಜ ರಾಧಾಕೃಷ್ಣ ಆಳ್ವ, ಸೋಮನಾಥ, ಕೃಷ್ಣ ನಾಯ್ಕ, ಪ್ರಮೋದ್ ಕೆ.ಎಸ್, ಅಬ್ದುಲ್ ಶಕೂರ್, ಮಹೇಶ್ ರೈ, ಮಾಣಿಕ್ಯರಾಜ್ ಪಡಿವಾಳ್, ಜ್ಯೋತಿ ಕೋಲ್ಪೆ ಹಾಗೂ ಪ್ರಬಾರ ಕಾರ್ಯದರ್ಶಿ ಅಗಸ್ಟಿನ್ ಡಿಸೋಜಾ, ಲೆಕ್ಕಿಗ ರಾಮಚಂದ್ರ, ಆಂತರಿಕ ಲೆಕ್ಕ ಪರಿಶೋಧಕಿ ಭಾರತಿ ಹಾಗೂ ಎಂಜಿನಿಯರ್ ಹಾಜಿಂ ಮಿರ್ಜಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.