ದಕ್ಷಿಣ ಕನ್ನಡ

3ನೇ ಹಂತದ ಜೆಟ್ಟಿ ವಿಸ್ತರಣೆ ವಿವಾದ: ವರದಿಗೆ 6 ಮಂದಿಯ ತಂಡ ರಚನೆ

Published On :

ಮಂಗಳೂರು: ಮಂಗಳೂರಿನ ಹಳೆ ಬಂದರಿನಲ್ಲಿ ಮೂರನೇ ಹಂತದ ಮೀನುಗಾರಿಕಾ ಜೆಟ್ಟಿ ವಿಸ್ತರಣೆ ವಿವಾದಕ್ಕೆ ಸಂಬಂಧಿಸಿ 6 ಮಂದಿಯ ತಂಡ ರಚಿಸಿ ವರದಿ ನೀಡುವಂತೆ ದೆಹಲಿಯ ಹಸಿರು ಪೀಠ ಕೇಂದ್ರ ಪರಿಸರ ಇಲಾಖೆಗೆ ಸೂಚನೆ ನೀಡಿದೆ. ಮೂರನೇ ಹಂತದ ಜೆಟ್ಟಿ ವಿಸ್ತರಣೆಗೆ ಸ್ಥಳೀಯ ಅಲ್ಬುಕರ್ಕ್ ಟೈಲ್ಸ್ ಸಂಸ್ಥೆ ತಡೆಯಾಜ್ಞೆ ತಂದಿತ್ತು. ಜೆಟ್ಟಿ ವಿಸ್ತರಣೆಯಾದರೆ ಮಲಿನ ನೀರು ಪರಿಸರಕ್ಕೆ ಬಂದು ತೊಂದರೆಯಾಗುತ್ತದೆ ಎಂದು ಸಂಸ್ಥೆ ವಾದ ಮುಂದೊಡ್ಡಿತ್ತು. ಈ ಕಾರಣಕ್ಕೆ ಹಸಿರು ಪೀಠ ತಾತ್ಕಾಲಿಕ ತಡೆ ನೀಡಿತ್ತು. ಇದರಿಂದ ಜೆಟ್ಟಿ ವಿಸ್ತರಣೆ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಮಂಗಳೂರು ವಿವಿಯ ಪ್ರೊ. ಶಂಕರ್, ಫಿಶರೀಸ್ ಕಾಲೇಜಿನ ಪ್ರೊ. ರಾಮಚಂದ್ರ ಭಟ್, ಅಹ್ಮದಾಬಾದ್ನ ಭೂಗರ್ಭ ವಿಜ್ಞಾನ ಸಂಸ್ಥೆ, ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಕರಾವಳಿ ನಿಯಂತ್ರಣ ವಲಯ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಆ ಬಳಿಕ ಜು.9ರೊಳಗೆ ಹಸಿರು ಪೀಠಕ್ಕೆ ವರದಿ ಸಲ್ಲಿಸಲಿದೆ. 3ನೇ ಹಂತದ ಜೆಟ್ಟಿ ವಿಸ್ತರಣೆಗೆ 2011ರಲ್ಲಿ ರು. 57.60 ಕೋಟಿ ಮಂಜೂರಾಗಿತ್ತು. ಬೆಂಗರೆಯಲ್ಲಿ 400 ಮೀಟರ್ ಜೆಟ್ಟಿ ನಿರ್ಮಾಣ ಪೂರ್ಣಗೊಂಡಿದ್ದರೆ, ಹೊಯ್ಗೆ ಬಜಾರ್ನಲ್ಲಿ 450 ಮೀಟರ್ ಜೆಟ್ಟಿ ನಿರ್ಮಾಣ ಬಾಕಿ ಉಳಿದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.