ನೇತ್ರಾಣಿಯಲ್ಲಿ ಮತ್ತೆ ಕಾಣಿಸಿದ ಹವಳದಂಡೆ: ಆರ್.ಕೆ. ಸಿಂಗ್
ಮಂಗಳೂರು: ರಾಜ್ಯ ಹೈಕೋರ್ಟ್ ನೌಕಾಪಡೆ ಶಸ್ತ್ರಾಭ್ಯಾಸಕ್ಕೆ ತಡೆ ನೀಡಿದ ಬಳಿಕ ಕಳೆದ 2 ವರ್ಷದಿಂದ ಹೊನ್ನಾವರದ ನೇತ್ರಾಣಿ ದ್ವೀಪದಲ್ಲಿ ಹವಳದಂಡೆ ಹೊಸದಾಗಿ ಕಾಣಿಸಿಕೊಳ್ಳುತ್ತಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಆರ್.ಕೆ. ಸಿಂಗ್ ಹೇಳಿದ್ದಾರೆ.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ 'ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನ-ದ್ವೀಪಗಳ ಜೀವವೈವಿಧ್ಯ' ವಿಚಾರದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ನೇತ್ರಾಣಿಯಲ್ಲಿ ಶಸ್ತ್ರಾಭ್ಯಾಸ ಮಾಡದಂತೆ 2012 ಡಿಸೆಂಬರ್ನಲ್ಲಿ ತಡೆಯಾಜ್ಞೆ ಬಂದಿದೆ. ಆ ನಂತರ ಅಲ್ಲಿ ನಿಸರ್ಗದಷ್ಟೇ ಸುಧಾರಣೆ ಕಂಡಿದೆ. ಸಿಎಂಎಫ್ಆರ್ಐ, ಕಾರವಾರ ವಿಜ್ಞಾನಿಗಳ ತಂಡ ನೇತ್ರಾಣಿಗೆ ತೆರಳಿ ವರದಿ ಮಾಡಿದ್ದು, ಅಲ್ಲಿ ಹವಳಸಾಲು ವೃದ್ಧಿಯಾಗಿದೆ ಎಂದರು.
ಸಚಿವ ರಮಾನಾಥ ರೈ ಮಾತನಾಡಿ, ದ್ವೀಪಗಳಲ್ಲಿರುವ ಜೀವವೈವಿಧ್ಯ ಅಪರೂಪದ್ದಾಗಿದ್ದು, ಕರಾವಳಿಯ ಅನೇಕ ದ್ವೀಪದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ ಎಂದರು. ಹಿರಿಯ ಮೀನುಗಾರಿಕಾ ಮುಖಂಡ ವಿಠಲ ಸುವರ್ಣ ಮಾತನಾಡಿ, ಸರ್ಕಾರ ಮೀನುಗಾರಿಕೆ ಮೇಲೆ ನಿಯಂತ್ರಣ ಹೇರುವ ಕೆಲಸ ಮಾಡಿಲ್ಲ. ಹಾಗಾಗಿ ಮುಂದೆ ಮೀನುಗಾರಿಕೆ ಮೇಲೆ ದೊಡ್ಡ ಹೊಡೆತ ಬೀಳಲಿದೆ. ವಾಣಿಜ್ಯೀಕರಣದಿಂದ ಮೀನು ಮರಿಯನ್ನೂ ಬಿಡದೆ ಮೀನುಗಾರಿಕೆ ನಡೆಸುತ್ತಾರೆ. ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ನಿಯಮಾವಳಿ ರಚಿಸಬೇಕು ಎಂದು ಆಗ್ರಹಿಸಿದರು. ಮೀನುಗಾರಿಕಾ ಕಾಲೇಜು ಉಪನ್ಯಾಸಕ ಡಾ.ಶಿವಾನಂದ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

