ಕೇಂದ್ರದ ನೀತಿಗೆ ವಿರೋಧ 20ಕ್ಕೆ ಮುಷ್ಕರ
ದಾವಣಗೆರೆ: ನಾಲ್ಕು ವರ್ಷದಿಂದ ಅನೀತಿ, ಬೆಲೆ ಏರಿಕೆ ನೀತಿಗಳಿಂದ ಜನತೆ, ರೈತರು, ಕಾರ್ಮಿಕರ ಬದುಕಿಗೆ ಬರೆ ಹಾಕುತ್ತಾ ಬಂದ ಕೇಂದ್ರ ಸರ್ಕಾರಕ್ಕೆ ಫೆ.20ರಿಂದ 2 ದಿನ ರಾಷ್ಟ್ರವ್ಯಾಪಿ ಮುಷ್ಕರದ ಮೂಲಕ ಪ್ರಧಾನಿಗೆ ಸಂಕ ಷ್ಟಕೊಕಳಗಾದ ಜನರ ಉಸಿರಿನ ಬಿಸಿ ಮುಟ್ಟಿಸುವುದಾಗಿ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತ ಸುಬ್ಬರಾವ್ ಎಚ್ಚರಿಸಿದ್ದಾರೆ.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ(ಜೆಸಿಟಿಯು) ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದ ನೀತಿಗಳು ಜನತೆ, ರೈತರು, ಕಾರ್ಮಿಕರಿಗೆ ಮಾರಕವಾಗಿದ್ದು, ಕೇಂದ್ರಕ್ಕೆ ಚುರುಕು ಮುಟ್ಟಿಸಲು ದೇಶದ ಮೂಲೆ ಮೂಲೆಯಲ್ಲೂ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದರು.
ಕಿವಿಗೊಡದ ಕೇಂದ್ರ: ಗ್ರಾಮ ಮಟ್ಟದಿಂದ ದಿಲ್ಲಿವರೆಗೆ ವಿವಿಧ ಹಂತದ ಹೋರಾಟ ನಡೆಸಿದ್ದರೂ ಕೇಂದ್ರ ಕಿವಿಗೊಟ್ಟಿಲ್ಲ. 60 ಕೋಟಿ ಕಾರ್ಮಿಕರು, ರೈತರು, ಜನ ಸಾಮಾನ್ಯರ ಹೋರಾಟದ ಉಸಿರು ಇನ್ನೂ ಪ್ರಧಾನಿಗೆ ಮುಟ್ಟಿಲ್ಲ. ಫೆ.20ರಿಂದ ರಾಷ್ಟ್ರವ್ಯಾಪಿ ಹೋರಾಟದ ಮೂಲಕ ಪ್ರಧಾನಿಗೆ ಚುರುಕು ಮುಟ್ಟಿಸಲಾಗುವುದು ಎಂದು ಅವರು ಹೇಳಿದರು.
ಕಳೆದ 22 ವರ್ಷದಿಂದ ಸರ್ಕಾರ ರೂಪಿಸಿದ ಎಲ್ಲಾ ಯೋಜನೆಗಳೂ ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳಾಗಿವೆ. ಜನ ಸಾಮಾನ್ಯರ ಏಳಿಗೆ ಬಯಸದ ಕೇಂದ್ರವು ದೇಶವನ್ನೇ ವಿದೇಶೀಮಯ ಮಾಡಲು ಹೊರಟಿದೆ. ದೇಶ ವಾಸಿಗಳು ಇಂತಹದ್ದಕ್ಕೆ ಬೆಲೆ ಕೊಟ್ಟರೆ ಎಲ್ಲವೂ ಖಾಸಗಿಮಯವಾಗುವ ಮೂಲಕ ಮತ್ತೊಮ್ಮೆ ಗುಲಾಮಗಿರಿಯತ್ತ ದೇಶ ಹೋಗುವುದೂ ನಿಶ್ಚಿತ ಎಂದು ಅವರು ಎಚ್ಚರಿಸಿದರು.
ವ್ಯಾಪಾರಿಗಳು ಬೀದಿಗೆ: ವಿದೇಶೀ ನೇರ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಇಲ್ಲಿನ ಕೋಟ್ಯಂತರ ಚಿಲ್ಲರೆ ವ್ಯಾಪಾರಿಗಳು, ಅವಲಂಬಿತರನ್ನು ಬೀದಿಗೆ ತಂದು ನಿಲ್ಲಿಸುತ್ತಿದ್ದಾರೆ. ರು. 40 ಕೋಟಿಗೂ ಅಧಿಕ ಕಾರ್ಮಿಕರು ಕೇವಲ ರು. 4- 5 ಸಾವಿರ ವೇತನಕ್ಕೆ ದುಡಿಯುತ್ತಿದ್ದಾರೆ. ದೇಶ ದಿವಾಳಿ ಮಾಡಲು ಕೇಂದ್ರ ಮುಂದಾಗಿದ್ದು, ಇಂತಹ ದುಸ್ಥಿತಿ ತಂದೊಡ್ಡಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು ಎಂದು ಅವರು ಹೇಳಿದರು.
ಸಿಐಟಿಯು ಜಿಲ್ಲಾ ಮುಖಂಡ ಕೆ.ಎಲ್. ಭಟ್ ಮಾತನಾಡಿದರು. ಎಐಟಿಯುಸಿ ರಾಜ್ಯ ಕಾರ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಆರ್.ಎಸ್. ತಿಪ್ಪೇಸ್ವಾಮಿ, ಆನಂದರಾಜ, ಶ್ರೀನಿವಾಸಮೂರ್ತಿ, ಷಣ್ಮುಖಪ್ಪ, ದತ್ತಾತ್ರೇಯ, ಹನುಮಂತಪ್ಪ, ಶಾರದಮ್ಮ, ಎಚ್.ಕೆ. ವೆಂಕಟೇಶ, ಆವರಗೆರೆ ಚಂದ್ರು, ಆವರಗೆರೆ ವಾಸು, ಆವರಗೆರೆ ಎಚ್.ಜಿ. ಉಮೇಶ, ಇಪ್ಟಾ ಸಂಘಟನೆಯ ಐರಣಿ ಚಂದ್ರು ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

