ದಾವಣಗೆರೆ

ನವೋದಯ ಪರೀಕ್ಷೆಗೆ 2876 ವಿದ್ಯಾರ್ಥಿಗಳು

Published On :

ಹರಪನಹಳ್ಳಿ: 2013-14ನೇ ಸಾಲಿನ ನವೋದಯ ಜವಾಹರ ಲಾಲ್ ವಿದ್ಯಾಲಯ ಭಾನುವಾರ ಪ್ರವೇಶ ಪರೀಕ್ಷೆ ನಡೆಯಿತು.
ಪಟ್ಟಣದ ಎಡಿಬಿ ಕಾಲೇಜ್‌ನಲ್ಲಿ-3, ಬಾಲಕಿಯ ಪ್ರೌಢ ಶಾಲೆ-1, ಸರ್ಕಾರಿ ಕಾಲೇಜ್-1, ಕೆಸಿಎ ಪ್ರೌಢ ಶಾಲೆ-1, ಉಜ್ಜಯನಿ ಕಾಲೇಜ್-2, ಹೆಚ್‌ಪಿಎಸ್ ಕಾಲೇಜ್-2, ಟಿಎಂಎಇ ಪ್ರೌಢ ಶಾಲೆ-1 ಸೇರಿ ಒಟ್ಟು 11 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಪರೀಕ್ಷೆಗಾಗಿ 3118 ಮಕ್ಕಳು ಹೆಸರು ನೋಂದಾವಣೆ ಮಾಡಿದ್ದರು.
ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದ  ಒಟ್ಟು 2876 ವಿದ್ಯಾರ್ಥಿಗಳು  ಪರೀಕ್ಷೆ ಬರೆದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್. ಜತ್ತಿ ಕನ್ನಡ ಪ್ರಭದೊಂದಿಗೆ ಮಾತನಾಡಿ,  ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ವರ್ಷ ಹೆಚ್ಚಿನ ಮಕ್ಕಳು ಹರಪನಹಳ್ಳಿ ತಾಲೂಕಿನಿಂದ ಸ್ಪರ್ಧಿಸಿರುತ್ತಾರೆ. ಕಳೆದ ವರ್ಷವೂ ಸಹ 27 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದರು. ಈ ವರ್ಷವೂ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ಆಯ್ಕೆಯಾಗುವ ನಿರೀಕ್ಷೆ ಹೊಂದಲಾಗಿದೆ  ಎಂದು ಅವರು ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು, ಬಿಇಒ ವೀರಣ್ಣ ಜತ್ತಿ, ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಕ್ಷಣ ಸಂಯೋಜಕರಾದ ಇಸ್ಮಾಯಿಲ್ ಎಲಿಗಾರ್, ಎಂ.ಆರ್. ಮಂಜುನಾಥ್ ನಾಯ್ಕ, ಬಿಆರ್‌ಸಿ ಗಳಾದ ಜಯಮಾಲತೇಶ್, ಎಂ. ರಮೇಶ್, ವೇದಮೂರ್ತಿ, ಉಪಪ್ರಚಾರ್ಯ ಸಿದ್ದಪ್ಪ ಹಾಗೂ ಇಲಾಖೆಯ ಸಿಬ್ಬಂದಿಗಳು ಪರೀಕ್ಷಾ ಜವಬ್ದಾರಿ ವಹಿಸಿಕೊಂಡಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.