ಮಾರ್ಷಲ್ ಆರ್ಟ್ ತರಬೇತಿಗೆ ಡಿಸಿ ಕರೆ
ದಾವಣಗೆರೆ: ಅಪರಾಧ ಪ್ರಕರಣ ತಡೆಗಟ್ಟುವ ಹಿನ್ನೆಲೆಯಲ್ಲಿ, ಆತ್ಮರಕ್ಷಣೆಗಾಗಿ ಪ್ರತಿಯೊಬ್ಬರೂ ಕರಾಟೆ, ಮಾರ್ಷಲ್ ಆರ್ಟ್ಗಳ ತರಬೇತಿ ಪಡೆದುಕೊಳ್ಳುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಕರೆ ನೀಡಿದ್ದಾರೆ.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿನದ 24 ಗಂಟೆ ಪೊಲೀಸರಿಂದಲೇ ರಕ್ಷಣೆ ನೀಡಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ಆತ್ಮರಕ್ಷಣೆ ಕಲೆಯೂ ನಮಗೆ ಗೊತ್ತಿರಬೇಕು ಎಂದರು.
ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ: ಪ್ರಸ್ತುತ ದಿನಮಾನಗಳಲ್ಲಿ ಕಳ್ಳತನ, ಸುಲಿಗೆ, ದರೋಡೆ, ಅತ್ಯಾಚಾರ, ಕೊಲೆ, ಹಲ್ಲೆ ಪ್ರಕರಣ ಹೆಚ್ಚುತ್ತಿವೆ. ಅವುಗಳನ್ನು ತಡೆಗಟ್ಟಲು ಆತ್ಮರಕ್ಷಣೆಗಾಗಿ ಕರಾಟೆ, ಮಾರ್ಷಲ್ ಆರ್ಟ್ಗಳ ತರಬೇತಿ ಹೊಂದುವುದು ಸಹಕಾರಿ. ಮಹಿಳೆಯರು ಸಹ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇಂತಹ ಕಲೆಗಳು ಪೂರಕವಾಗುತ್ತದೆ ಎಂದು ಅವರು ತಿಳಿಸಿದರು.
ಠಾಣೆಯಲ್ಲಿ ಹೆಲ್ಪ್ ಡೆಸ್ಕ್: ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಲಾಭೂರಾಮ್ ಮಾತನಾಡಿ, ಮಹಿಳಾ ಜಾಗೃತಿಗೆ ಹಲವಾರು ಕಾರ್ಯಕ್ರಮ ಸಂಘಟಿಸುತ್ತಿದ್ದು, ಸಮಸ್ಯೆ, ತೊಂದರೆ, ಅನಾಹುತ ಯಾವ ರೀತಿ ನಿಭಾಯಿಸಬೇಕು ಎಂಬ ಬಗ್ಗೆ ಅರಿಯಬೇಕು. ಮಹಿಳಾ ಸಮಸ್ಯೆ ಕುರಿತಂತೆ ಎಲ್ಲಾ ಠಾಣೆಯಲ್ಲೂ ಹೆಲ್ಪ್ ಡೆಸ್ಕ್ ಸ್ಥಾಪಿಸಿದೆ. ಮಹಿಳಾ ಸಿಬ್ಬಂದಿಯೇ ಅದನ್ನು ನಿರ್ವಹಿಸುತ್ತಾರೆ. ಮಹಿಳೆಯರು ತಮಗಿರುವ ಸಮಸ್ಯೆ ಕುರಿತು ಹೆಲ್ಪ್ ಡೆಸ್ಕ್ ಗಮನಕ್ಕೆ ತಂದು, ದೂರು ದಾಖಲಿಸಬಹುದು ಎಂದರು.
ಶಿಕ್ಷೆಗೆ ಗುರಿಪಡಿಸಲಾಗುವುದು: ಕಾಣೆಯಾದ ಮಕ್ಕಳು, ಹೆಣ್ಣು ಮಕ್ಕಳ ಪತ್ತೆಗಾಗಿ ರಾಜ್ಯದ 9 ಜಿಲ್ಲೆಗಳಲ್ಲಿ ಆಂಟಿ ವುಮೆಟ್ ಟ್ರಾಫಿಕಿಂಗ್ ರಚಿಸಲಾಗಿದೆ. ಇಂದಿನ ದಿನಮಾನಗಳಲ್ಲಿ ಅತ್ಯಾಚಾರ, ದೌರ್ಜನ್ಯ, ಶೋಷಣೆ ಪ್ರಕರಣ ಹೆಚ್ಚುತ್ತಿದ್ದು, ಪ್ರಕರಣದ ಆರೋಪಿಗಳನ್ನು ಬಂಧಿಸಿ, ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಡಿ.18ರಂದು ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆದಿದ್ದು, 43 ದಿನಗಳ ನಂತರ ಆಕೆ ದೂರು ದಾಖಲಿಸಿದರು. ತಡವಾದರೂ ಆರೋಪಿಗಳನ್ನೂ ಬಂಧಿಸುವಲ್ಲಿ ಇಲಾಖೆ ಯಶಸ್ವಿಯಾಗಿದೆ ಎಂದು ಅವರು ವಿವರಿಸಿದರು.
ಕಿರುತೆರೆ ಕಲಾವಿದ ಮಂಡ್ಯ ರವಿಪ್ರಸಾದ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

