ಲಿಂ. ಮಹಾಂತ ಶ್ರೀಗಳಿಗೆ ಶ್ರದ್ಧಾಂಜಲಿ
ಹರಪನಹಳ್ಳಿ: ಪಂಚಮಸಾಲಿ ಪೀಠದ ಸ್ಥಿರ ಪೀಠಾಧ್ಯಕ್ಷ ಲಿಂಗೈಕ್ಯ ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಗಳ ಆಶಯದಂತೆ ಪಂಚಮಸಾಲಿ ಜನಾಂಗ ಒಗ್ಗಟ್ಟಾಗಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಜೆ.ಕೆ. ಮಲ್ಲಿಕಾರ್ಜುನ ಹೇಳಿದ್ದಾರೆ.
ಪಟ್ಟಣದ ನವೋದಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಭಾನುವಾರ ಆಯೋಜಿಸಿದ್ದ ಮಹಾಂತ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವು ವರ್ಷಗಳ ಕಾಲ ಅನೇಕ ಬಡಜನರ ಬದುಕಿಗೆ ಬೆಳಕಾಗಿ ಮಹಾನ್ ತಪಸ್ವಿ ಎನಿಸಿಕೊಂಡರು.
ಲಿಂಗೈಕ್ಯ ಮಹಾಂತ ಶ್ರೀಗಳು ಹಾಗೂ ಚರಪೀಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಪಂಚಮಸಾಲಿ ಜನಾಂಗದ ಎರಡು ಕಣ್ಣಗಳಾಗಿದ್ದರು. ಆದರೆ, ಮಾಹಾಂತ ಶ್ರೀಗಳ ಅಗಲಿಕೆಯಿಂದ ಸಮಾಜದ ಬಾಂಧವರಿಗೆ ಅಘಾತ ಉಂಟುಮಾಡಿದೆ ಎಂದರು.
ಪಂಚಮಸಾಲಿ ಸಂಘದ ಗೌರವ ಅಧ್ಯಕ್ಷ ಅರುಂಡಿ ನಾಗರಾಜ ಮಾತನಾಡಿ, ಶತಮಾನಗಳಷ್ಟು ಪುರಾತನ ಇತಿಹಾಸ ಹೊಂದಿದ ಪಂಚಮಸಾಲಿ ಜನಾಂಗದ ಅಭಿವೃದ್ದಿಗೆ ಅವಿರತ ಶ್ರಮಿಸಿದವರು ಸ್ವಾಮೀಜಿ, ತನ್ನ ಕುಟುಂಬದ ಅಭಿವೃದ್ಧಿಗೆ ಗಮನ ಹರಿಸದೇ, ತನ್ನ ಜನಾಂಗ ಮಠದ ಅಭಿವೃದ್ಧಿಯೇ ನನ್ನ ಗುರಿಯೆಂದು ಹೋರಾಡಿ ಲಿಂಗೈಕ್ಯರಾದರು ಎಂದರು.
ನೌಕರರ ಸಂಘದ ಅಧ್ಯಕ್ಷ ವೀರಣ್ಣ, ಪಂಚಮಸಾಲಿ ಸಮಾಜದ ಮುಖಂಡ ಅಡವಿಹಳ್ಳಿ ವಿಶ್ವನಾಥ, ತಾಲೂಕು ಸಂಘದ ಕಾರ್ಯದರ್ಶಿ ಸಿದ್ದಲಿಂಗಪ್ಪ, ರಾಜ್ಯ ಘಟಕದ ಸದಸ್ಯ ಚನ್ನಬಸಪ್ಪ, ಎಂ.ಬಿ. ಪಾಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ, ಯುವ ಘಟಕ ಅಧ್ಯಕ್ಷ ಚನ್ನಬಸಪ್ಪ, ಮಹೀಳಾ ಘಟಕದ ಕಾರ್ಯದರ್ಶಿ ಲೀಲಾಲಿಂಗರಾಜ್, ವಕೀಲ ಬಸವರಾಜ, ಎಂ. ಭರಮಪ್ಪ, ಶಿವರಾಜ್, ಶಿವಾನಂದ, ಕೊಟ್ರೇಶ, ವಿಜಯ ದಿವಾಕರ, ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

