ದಾವಣಗೆರೆ

ಗದ್ದೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ: ಅರೇಹಳ್ಳಿ ವ್ಯಕ್ತಿ ಸಾವು

Published On :

ದಾವಣಗೆರೆ: ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಮೃತಪಟ್ಟಿರುವ ಘಟನೆ ಚನ್ನಗಿರಿ ತಾ. ಅರೇಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಕೇಜ್‌ವ್ಹೀಲ್ ಅಳವಡಿಸಿಕೊಂಡು ಗದ್ದೆಯಲ್ಲಿ ರೊಳ್ಳೆ ಹೊಡೆಯಲು ಹೋಗಿದ್ದ ವೇಳೆ ಬದುವನ್ನು ಹತ್ತಿಸಲು ಹೋಗಿದ್ದಾಗ ಅಜಾಗರೂಕತೆಯಿಂದ ಕ್ಲಚ್ ಒತ್ತಿದ್ದರಿಂದ ಏಕಾಏಕಿ ಆತನ ಮೇಲೆ ಬಿದ್ದ ಪರಿಣಾಮ ಎಂಜಿನ್ ಕೆಳಗೆ ಸಿಕ್ಕಿ ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಅರೇಹಳ್ಳಿ ಗ್ರಾಮದ ವಾಸಿ ವೀರೇಶ (27) ಮೃತ ಯುವಕ. ಟ್ರ್ಯಾಕ್ಟರ್‌ಗೆ ಕೇಜ್‌ವ್ಹೀಲ್ ಹಾಕಿಕೊಂಡು ಗದ್ದೆಯಲ್ಲಿ ರೊಳ್ಳೆ ಹೊಡೆದು, ಟ್ರ್ಯಾಕ್ಟರ್ ಎಂಜಿನ್‌ನ್ನು ಆತ ಅಜಾಗರೂಕತೆಯಿಂದ ಗದ್ದೆಯ ಬದುವನ್ನು ಹತ್ತಿಸಲು ಹೋದಾಗ ಅನಾಹುತ ಸಂಭವಿಸಿದೆ. ಮೃತನ ತಂದೆ ಈ. ಶೇಖರಪ್ಪ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೂಜಾಟ: ಬಂಧನ
ದಾವಣಗೆರೆ ತಾ. ಕ್ಯಾತನಹಳ್ಲಿ ಗ್ರಾಮದ ಹೊರ ಭಾಗದ ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 11 ಮಂದಿ ಆರೋಪಿಗಳನ್ನು ಬಂಧಿಸಿ, 21,700 ನಗದು ಹಾಗೂ ಇಸ್ಪೀಟ್ ಎಲೆಗಳನ್ನು ಮಾಯಕೊಂಡ ಪೊಲೀಸರು ಜಪ್ತು ಮಾಡಿದ್ದಾರೆ.
ಏಳುಕೋಟಿ, ಗಣೇಶ, ಪರಶುರಾಮ, ಕರಿಬಸಪ್ಪ, ಸದಾಶಿವಪ್ಪ, ಕಮಲಾನಾಯ್ಕ, ಓಂಕಾರಪ್ಪ, ರವಿ, ಹುಲಿಯಪ್ಪ, ರುದ್ರೇಶ, ರೇವಣ್ಣ ಬಂಧಿತ ಆರೋಪಿಗಳು. ಎಸ್‌ಐ ಡಿ. ಸುರೇಶ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಆರಂಭಿಸಿದ್ದಾರೆ.
ಹರಪನಹಳ್ಳಿ ತಾ. ಅರಸೀಕೆರೆ ಗ್ರಾಮದ ಕೆರೆಯ ಅಂಗಳದ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್ ಜೂಜಾಡುತ್ತಿದ್ದ 6 ಜನ ಆರೋಪಿಗಳನ್ನು ಬಂಧಿಸಿ, 1200 ನಗದು, 2 ಮೊಬೈಲ್ ಹಾಗೂ 4 ಬೈಕ್‌ಗಳನ್ನು ಅರಸೀಕೆರೆ ಪೊಲೀಸರು ಜಪ್ತು ಮಾಡಿದ್ದಾರೆ. ಜೋಗಪ್ಪರ ಪಂಚಪ್ಪ, ಟಿ. ಮಜಿದ್ ಸಾಬ್, ಹುಲಿಯಪ್ಪರ ಮಂಡಪ್ಪ, ಗಿಡ್‌ಡವರ ಹಾಲಪ್ಪ, ಅಜ್ಜಪ್ಪರ ಹಾಲೇಶ, ಕೆ. ರಾಜಾಸಾಬ್ ಬಂಧಿತ ಆರೋಪಿಗಳು. ಹರಪನಹಳ್ಳಿ ಸಿಪಿಐ ಮಹಾಂತೇಶ ಇ. ಸಜ್ಜನ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.
ಮಟ್ಕಾ; ಆರೋಪಿ ವಶ
ದಾವಣಗೆರೆ ಹಳೆ ಪಿ.ಬಿ. ರಸ್ತೆಯ ನೋಬಲ್ ತಾಡಪಾಲ್ ಬಳಿ ಸಾರ್ವಜನಿಕರಿಗೆ ಇಲ್ಲಸಲ್ಲದ್ದನ್ನು ಹೇಳಿ, ಮೋಸ ಮಾಡುತ್ತಾ ಮಟ್ಕಾ ಚೀಟಿ ಬರೆಯುತ್ತಿದ್ದ ಆರೋಪಿಯನ್ನು ಬಂಧಿಸಿ, 4830 ನಗದು, ಮೊಬೈಲ್ ಹ್ಯಾಂಡ್‌ಸೆಟ್, ಮಟ್ಕಾ ಚೀಟಿಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ನಗರದ ಆನೆಕೊಂಡ ಪೇಟೆ ವಾಸಿ ಎಚ್.ಎಸ್. ಮೋಹನ ಬಂಧಿತ ಆರೋಪಿಯಾಗಿದ್ದಾನೆ. ಪ್ರರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.