ದಾವಣಗೆರೆ

ತತ್ವ- ಸಿದ್ಧಾಂತ ಬದಲಾಗಿ ಹಣದ ರಾಜಕಾರಣ: ಮಾದಾರ ಶ್ರೀ ವಿಷಾದ

Published On :

ಹರಪನಹಳ್ಳಿ: ಅಜ್ಞಾನದಲ್ಲಿ ಮುಳುಗಿರುವವರಿಗೆ ರಾಜಕೀಯ ಸೌಲಭ್ಯ ನೀಡಿದರೂ ಅವುಗಳ ಬಳಕೆ ಆಗುವುದಿಲ್ಲ. ಅದ್ದರಿಂದ ಮಾದಿಗ ಸಮಾಜ ಶಿಕ್ಷಣದ ಮೊರೆ ಹೋಗಲೇಬೇಕಾದ ಅನಿವಾರ್ಯತೆಯಿದೆ ಎಂದು ಚಿತ್ರದುರ್ಗ ಶ್ರೀಮಾದಾರ ಚನ್ನಯ್ಯ ಗುಗುಪೀಠದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಪುಣಬಗಟ್ಟ ಗ್ರಾಮದ ಶ್ರೀದುರ್ಗಾಂಭಿಕಾ ದೇವಾಲಯ ಆವರಣದಲ್ಲಿ ಬುಧುವಾರ ಹಮ್ಮಿಕೊಂಡಿದ್ದ ಸಮಾಜ ಸೇವಕಿ ಎಸ್.ಎನ್. ಹನುಮವ್ವ ಅವರ ನುಡಿ ನಮನ ಸಮಾರಂಭ ಹಾಗೂ ಪ್ರಚಲಿತ ರಾಜಕೀಯದಲ್ಲಿ ಮಾದಿಗ ಸಮಾಜದ ಸ್ಥಿತಿ- ಗತಿ  ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಕಡೆಗಾಣಿಸಲಾಗುತ್ತಿದೆ: ಇಂದು ತತ್ವ- ಸಿದ್ಧಾಂತದ ಬದಲಾಗಿ ಹಣ ರಾಜಕಾರಣ ನಡೆಯುತ್ತಿರುವುದರಿಂದ ಮಾದಿಗ ಸಮಾಜವನ್ನು ಕಡೆಗಾಣಿಸಲಾಗುತ್ತಿದೆ. ಮಾದಿಗ ಸಮಾಜವೂ ಕೂಡ ಶಕ್ತಿ ರಾಜಕಾರಣ ಮಾಡಬೇಕಾದರೆ ಉದ್ಯೋಗ ಹಿಡಿದು ದುಡಿಮೆ ಮಾಡಿಕೊಳ್ಳಬೇಕಿದೆ. ಮಾದಿಗರು ಕಂದಾಚಾರದಲ್ಲಿ ಮುಳುಗಿ ಹಬ್ಬಗಳನ್ನು ಅಚರಿಸಲು ಪೈಪೋಟಿ ನಡೆಸಿ ಸಾಲಗಾರರಾಗುವ ಬದಲು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಪೈಪೋಟಿ ನಡೆಸಿ ಎಂದು ಕರೆ ನೀಡಿದರು.
ಹಣ ಮಾಡುವ ದಂಧೆ: ಪ್ರಚಲಿತ ರಾಜಕೀಯದಲ್ಲಿ ಮಾದಿಗ ಸಮಾಜದ ಸ್ಥಿತಿ- ಗತಿ  ಕುರಿತ ಉಪನ್ಯಾಸ ನೀಡಿದ ಪ್ರೊ.ಟಿ. ರಾಜಪ್ಪ ಮಾತನಾಡಿ, ಹಣ ಮಾಡುವ ದಂಧೆ ಮಾಡಿಕೊಂಡ ಪರಿಣಾಮ ರಾಜಕೀಯ ರಂಗ ಕಲುಷಿತಗೊಂಡಿದ್ದು, ಇಲ್ಲಿ ಮಾದಿಗ ಸಮಾಜದ ಸ್ಥಿತಿ ಅಧೋಗತಿಗೆ ತಲುಪಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಮಂಜುನಾಥ್, ಉಪಾಧ್ಯಕ್ಷ ಆರ್. ಹನುಮಂತಪ್ಪ, ತಾ.ಪಂ ಮಾಜಿ ಉಪಾಧ್ಯಕ್ಷ ಎ.ಕೆ. ಜಯ್ಯಪ್ಪ, ಮಾದಿಗ ಸಮಾಜ ಸಂಘದ ತಾಲೂಕಾಧ್ಯಕ್ಷ ಕೆ.ಡಿ. ಮರಿಯಪ್ಪ ಮಾತನಾಡಿದರು.
ವಕೀಲ ಎಸ್. ನಿಂಗಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ಎ.ಕೆ. ರೇಣುಕಮ್ಮಜಯ್ಯಪ್ಪ ಅಧ್ಯಕ್ಷತೆವಹಿಸಿದ್ದರು.
ಗ್ರಾ.ಪಂ ಉಪಾಧ್ಯಕ್ಷೆ ಹಂಚಿನಮನೆ ಸುನಂದಮ್ಮ, ಪೋಸ್ಟ್ ಮಾಸ್ಟರ್ ಕೆ. ರಾಮಚಂದ್ರಪ್ಪ, ಮುಖಂಡರಾದ ಕಲ್ಲಹಳ್ಳಿ ಹನುಮಂತಪ್ಪ, ಎಸ್. ಬಸವರಾಜ್, ವಿರೂಪಾಕ್ಷಗೌಡ, ಕರಿಬಸಪ್ಪ, ವಕೀಲ ಟಿ. ಹನುಮಂತಪ್ಪ, ಕೆ.ಡಿ. ಅಂಜಿನಪ್ಪ, ಹಂಚಿನಮನೆ ಮಂಜಪ್ಪ, ಆರ್. ಧನರಾಜ್, ಕಬ್ಬಳ್ಳಿ ಮೈಲಪ್ಪ, ಹುಣಸ್ಸಿಹಳ್ಳಿ ಕೋಟ್ರಪ್ಪ, ಕಬ್ಬಳ್ಳಿ ಪರಸಪ್ಪ, ಅರಸನಾಳು ಮಾರುತಿ, ಎಸ್.ಎನ್. ಪ್ರಕಾಶ್, ಪಿ. ಮಹಾಂತೇಶ್, ಎಸ್.ಎನ್. ಸತೀಶ್‌ಕುಮಾರ್, ಟಿ. ಅಂಜಿನಪ್ಪ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.