ದಾವಣಗೆರೆ

ಬಯಲಲ್ಲೇ ಪೂರ್ವ ಸಿದ್ಧತಾ ಪರೀಕ್ಷೆ: ಕಾರಣ ಕೇಳಿ ಶಾಲೆಗೆ ನೋಟಿಸ್

Published On :

ದಾವಣಗೆರೆ: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಗೆ ಪೂರ್ವ ಸಿದ್ಧತೆ ಪರೀಕ್ಷೆ ನಡೆಸುವ ಭರದಲ್ಲಿ ಮಕ್ಕಳನ್ನು ಶಾಲೆ ಪಕ್ಕದ ಬಯಲಿನಲ್ಲಿ ತಾಡುಪಾಲಿನ ಮೇಲೆ ಕೂಡಿಸುವ ಮೂಲಕ ಬಿಸಲಲ್ಲೇ ಮಕ್ಕಳನ್ನು ಕೂಡುವಂತೆ ಮಾಡಿದ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಗೆ ಹೊಂದಿಕೊಂಡಿರುವ, ಜಿಲ್ಲಾಧಿಕಾರಿ ನಿವಾಸದ ಸಮೀಪದಲ್ಲೇ ಇರುವ ಗುರುಕುಲ ವಸತಿ ವಿದ್ಯಾಲಯದಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಸುಡುವ ಬಿಸಿಲಿನಲ್ಲಿ ಪರೀಕ್ಷೆಗೆ ಕೂಡಿಸಿದ್ದ ಬಗ್ಗೆ ಸಾರ್ವಜನಿಕರು ಮಾಧ್ಯಮದವರ ಗಮನಕ್ಕೆ ತಂದರು.
ಶಾಲಾ ಕೊಠಡಿಗಳಲ್ಲಿ ಅಕ್ಕಪಕ್ಕ ಕೂಡಿಸಿದರೆ, ನಕಲು ಮಾಡುವ, ಮತ್ತೊಬ್ಬರಿಗೆ ಉತ್ತರ ಕೇಳುವ ಸಾಧ್ಯತೆಯಿಂದಾಗಿ ಪಕ್ಕದ ಜಾಗದಲ್ಲಿ ಪೂರ್ವ ಸಿದ್ದತಾ ಪರೀಕ್ಷೆ ನಡೆಸುತ್ತಿದ್ದೇವೆ. ಯಾವುದೇ ಮಗುವಿಗೂ ತೊಂದರೆಯಾಗಿಲ್ಲ ಎಂಬುದು ಶಾಲೆಯವರ ಹೇಳಿಕೆ.
ಡಿಡಿಪಿಐ ಅಕ್ರೋಶ: ಯಾವುದೇ ಶಾಲೆಯ ಮಕ್ಕಳಾದರೂ ಹೀಗೆ ಬಯಲಿನಲ್ಲಿ ಕೂಡಿಸಿ, ಪರೀಕ್ಷೆ ನಡೆಸುವುದು ಸರಿಯಲ್ಲ. ಬೆಳಿಗ್ಗೆ ನನಗೆ ವಿಷಯ ಗೊತ್ತಾಗುತ್ತಿದ್ದಂತೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪನವರಿಗೆ ಗುರುಕುಲ ಶಾಲೆಗೆ ಭೇಟಿ ನೀಡಿ, ಪರಿಶೀಲಿಸುವಂತೆ ಸೂಚಿಸಿದ್ದೇನೆ ಎಂದು ಚನ್ನಗಿರಿ ತಾಲೂಕು ಪ್ರವಾಸದಲ್ಲಿದ್ದ ಸಾಶಿಇ ಉಪ ನಿರ್ದೇಶಕ ಶಿವಕುಮಾರ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.