ಬಿರುಸಿನ ಮತದಾನ
ಕ.ಪ್ರ.ವಾರ್ತೆ ಹರಿಹರ ಮಾ 7
ನಗರಸಭೆ 31 ವಾರ್ಡ್ಗಳಿಗೆ ಗುರುವಾರ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು ಶೇ.69.94ರಷ್ಟು ಮತದಾನ ನಡೆದಿದೆ.
ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತ 21,244 ಪುರುಷ ಮತದಾರರು ಹಾಗೂ 20,272 ಮಹಿಳಾ ಮತದಾರರು ಸೇರಿದಂತೆ 41,516 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದರು.
ಪತ್ರಕರ್ತರೊಂದಿಗೆ ಜಗಳ: ಬಿಇಒ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿದ್ದ ವಾರ್ಡ್ ನಂ.9 ಬೂತ್ ನಂ.18ರಲ್ಲಿ ಮತದಾನಕ್ಕೆ ಆಗಮಿಸುವ ಅಭ್ಯರ್ಥಿಗಳ ವಿವರಗಳನ್ನು ಪರಿಶೀಲಿಸದೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂಬ ಸುದ್ದಿ ಆಧರಿಸಿ ಸ್ಥಳಕ್ಕೆ ತೆರಳಿದ ಪತ್ರಕರ್ತರೊಂದಿಗೆ ಜಗಳಕ್ಕೆ ಇಳಿದ ಪ್ರಮುಖ ಪಕ್ಷದ ಪೋಲಿಂಗ್ ಏಜೆಂಟ್ ಕ್ಯಾಮರಾ ಕಿತ್ತು ನೆಲಕ್ಕೆ ಎಸೆದು ಸ್ಥಳದಿಂದ ಪರಾರಿಯಾದ ಘಟನೆ ಮಧ್ಯಾಹ್ನ 2- 35ರ ಸುಮಾರಿಗೆ ನಡೆಯಿತು.
ಕೆಲವು ವಾರ್ಡ್ಗಳಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರೇ ನಾಪತ್ತೆಯಾಗಿವೆ. ಇವುಗಳ ಮಧ್ಯೆ ಮತದಾನ ಕೇಂದ್ರದಲ್ಲಿಯೇ ಅಭ್ಯರ್ಥಿಗಳು ಮತ ಯಾಚಿಸುತ್ತಿದ್ದದ್ದು ಕಂಡು ಬಂದಿದೆ.
ನಿಗಧಿತ ಸುತ್ತಳತೆಯೊಳಗೆ ಆಗಮಿಸಿ ಮತ ಯಾಚಿಸುವವರನ್ನು ಹೊರ ಹಾಕಲು ಪೊಲೀಸರು ಹರಸಾಹಸ ಪಡುತ್ತಿದ್ದದ್ದು ಕಂಡು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

