ಮುಗಿಯಿತು ಮತದಾನ, ಫಲಿತಾಂಶಕ್ಕಿನ್ನು 2 ದಿನ
ಕ.ಪ್ರ.ವಾರ್ತೆ ದಾವಣಗೆರೆ ಮಾ.7
ದಾವಣಗೆರೆ ಪಾಲಿಕೆ ಸೇರಿದಂತೆ ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ ಶೇ.74.43ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಮಾಹಿತಿ ನೀಡಿದರು.
ನಗರದ ಡಿಆರ್ಆರ್ ಪಾಲಿಟೆಕ್ನಿಕ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಶೇ.64ರಷ್ಟು, ಹರಿಹರ ನಗರಸಭೆಗೆ ಶೇ.69.94, ಹರಪನಹಳ್ಳಿ ಪುರಸಭೆಗೆ ಶೇ.75.24, ಹೊನ್ನಾಳಿ ಪಪಂಗೆ ಶೇ.81.79, ಚನ್ನಗಿರಿ ಪಪಂಗೆ 78.18 ಹಾಗೂ ಜಗಳೂರು ಪಪಂಗೆ ಶೇ.78.93 ಮತದಾನವಾಗಿದೆ ಎಂದು ಹೇಳಿದರು.
ಕೈ ಕೊಟ್ಟ ಯಂತ್ರಗಳು: ಜಿಲ್ಲೆಯಲ್ಲಿ 50 ಹೆಚ್ಚುವರಿ ಮತಗಟ್ಟೆಗಳೂ ಸೇರಿದಂತೆ 518 ಮತಗಟ್ಟೆಗಳಲ್ಲಿ ಅತ್ಯಂತ ಶಾಂತಿ, ಸುವ್ಯವಸ್ಥಿತವಾಗಿ ಚುನಾವಣೆ ನಡೆಯಿತು. ಸುಮಾರು 8 ಮತಗಟ್ಟೆಗಳಲ್ಲಿ ಚುನಾವಣೆ ಪ್ರಕ್ರಿಯೆಯು ಆರಂಭವಾಗುವ ಸಂದರ್ಭದಲ್ಲಿ 7- 8 ಕಡೆ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟಿದ್ದರಿಂದ ಸುಮಾರು 15- 20 ನಿಮಿಷ ತಡವಾಗಿ ಮತ ಚಲಾವಣೆ ಪ್ರಕ್ರಿಯೆಯು ಆರಂಭಗೊಂಡಿದೆ ಎಂದು ಅವರು ವಿವರಿಸಿದರು.
ದಾವಣಗೆರೆ ಭಾರತ್ ಕಾಲೋನಿಯಲ್ಲಿ 25- 30 ನಿಮಿಷ ಇವಿಎಂ ಕೈಕೊಟ್ಟಿದ್ದರಿಂದ ಮತದಾನ ತಡವಾಗಿ ಆರಂಭಗೊಂಡಿತು. ಸಿದ್ಧಗಂಗಾ ಶಾಲೆಯಲ್ಲೂ 15 ನಿಮಿಷ ತಡವಾಗಿ ಆರಂಭಗೊಂಡಿತು. ಮತಗಟ್ಟೆ ಸಂಖ್ಯೆ 47ರ ಹನುಮಂತ ನಗರ, ಮತಗಟ್ಟೆ ಸಂಖ್ಯೆ 277ರ ದುರ್ಗಾಂಬಿಕಾ ವಸತಿ ಸೇರಿದಂತೆ ಕೆಲ ಕಡೆ ವಿದ್ಯುನ್ಮಾನ ಮತಯಂತ್ರ ಕೈಕೊಟ್ಟಿದ್ದರಿಂದ ತಕ್ಷಣ ಸರಿಪಡಿಸಿ, ಚುನಾವಣೆಗೆ ಅನುವು ಮಾಡಲಾಯಿತು ಎಂದರು.
ಕೆಲವು ವಾರ್ಡ್ಗಳಲ್ಲಿ ಕೊನೇ ಕ್ಷಣದಲ್ಲಿ ಮತದಾರರು ಬಂದ ಕಾರಣ ಮತದಾನ ಪ್ರಕ್ರಿಯೆಗೆ ಪೂರ್ಣಗೊಳಿಸಲು ತಡವಾಯಿತು.
ಹಣ ಜಪ್ತಿ: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಾಭೂರಾಂ ಮಾತನಾಡಿ, ಚನ್ನಗಿರಿ ಪಪಂ ವ್ಯಾಪ್ತಿಯ 7ನೇ ವಾರ್ಡ್ನಲ್ಲಿ 11 ಸಾವಿರ ಹಣ ಅಭ್ಯರ್ಥಿಯ ಬೆಂಬಲಿಗರ ಬಳಿ ದೊರೆತಿದೆ.
ಆತನ ವಿರುದ್ಧ ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ. ದಾವಣಗೆರೆ ವಿದ್ಯಾನಗರ ಠಾಣೆ ವ್ಯಾಪ್ತಿಯ ಕುಂದುವಾಡ ಹಾಗೂ ಮತ್ತೊಂದು ಕಡೆ ಅಕ್ರಮ ಮದ್ಯ ಜಪ್ತು ಮಾಡಲಾಗಿದೆ ಎಂದರು.
ಹರಿಹರ ನಗರಸಭೆ ಚುನಾವಣೆ ಸಂದರ್ಭದಲ್ಲಿ ಎರಡು ಪಕ್ಷದವರ ಮಾತಿನ ಚಕಮಕಿ ನಡೆದಿದ್ದು, ತಕ್ಷಣ ಪೊಲೀಸರು ತೆರಳಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಇದನ್ನು ಹೊರತುಪಡಿಸಿದೆ, ಬೇರಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಜಿಲ್ಲೆಯ ಯಾವುದೇ ಸೂಕ್ಷ್ಮ, ಅತಿ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲೂ ಯಾವುದೇ ಅಹಿತಕರ ಘಟನೆಯೂ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲಾ ಚುನಾವಣಾ ವೀಕ್ಷಕ ಎಸ್.ಎಂ. ಪನಾಲಿ, ಪಾಲಿಕೆ ಆಯುಕ್ತ ಬಿ. ಭೀಮಪ್ಪ, ಉಪ ಆಯುಕ್ತ ರವೀಂದ್ರ ಮಲ್ಲಾಪುರ, ಮುಖ್ಯ ಲೆಕ್ಕಾಧಿಕಾರಿ ಸೋಮನಾಥ, ಜಿಪಂ ಅಧಿಕಾರಿ ಜೆ.ಟಿ. ರಾಮಕೃಷ್ಣ, ನಗರ ಡಿಎಸ್ಪಿ ಡಾ. ಶಿವಕುಮಾರ ಗುಣಾರೆ, ಪ್ರೊಬೇಷನರಿ ಎಎಸ್ಪಿ ಡಾ. ರಾಜು ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

