ದಾವಣಗೆರೆ

ಇಂದು ಹೊನ್ನಾಳಿಯಲ್ಲಿ ಗಂಗಾಮತಸ್ಥ ಸಮಾವೇಶ

Published On :

ಹೊನ್ನಾಳಿ: ತಾಲೂಕು ಗಂಗಾಮತಸ್ಥ (ಬೆಸ್ತರ) ಸಮಾಜದಿಂದ ಹೊನ್ನಾಳಿಯಲ್ಲಿ 17ರಂದು ತಾಲೂಕು ಗಂಗಾಮತಸ್ಥ ಸಮಾವೇಶ ಹಾಗೂ ನಿಜಶರಣ ಅಂಬಿಗರ ಜೌಡಯ್ಯ ಜಯಂತ್ಯುತ್ಸವ ಸಮಾರಂಭವನ್ನು ಸ್ಥಳೀಯ ಎಂಬಿಎಂಸಿ ಮುಂಭಾಗದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಕೆ.ಪಿ. ರಾಜಪ್ಪ ಕುಳಗಟ್ಟೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದ ಸಾನ್ನಿಧ್ಯವನ್ನು ಶಾಂತಮುನಿ ಸ್ವಾಮಿ ಹಾಗೂ ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಮಾರಂಭ ಉದ್ಘಾಟಿಸಲಿದ್ದು, ತಾಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ಕೆ.ಪಿ. ರಾಜಪ್ಪ ಕುಳಗಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದ ಜಿ.ಎಂ. ಸಿದ್ದೇಶ್ವರ, ಶರಣಪ್ಪ ತಳವಾರ್, ರಾಮಪ್ಪ ಅರಸೀಕೆರೆ, ಪುಟ್ಟರಂಗಸ್ವಾಮಿ, ಬಿ.ಕೆಂಚಪ್ಪ, ಚನ್ನಪ್ಪ ಕುಂದೂರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಹರಪನಹಳ್ಳಿಯ ಮಾರುತಿ ಶಾಲಿಮನೆ ಮಾಗಾನಹಳ್ಳಿ ಉಪನ್ಯಾಸ ನೀಡಲಿದ್ದು, ತಾಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಫಲವನಹಳ್ಳಿಯ ಎಂ. ಮಲ್ಲಪ್ಪ, ರಾಜ್ಯ ಪ್ರಶಸ್ತಿ ವಿಜೇತ ಮಹೇಶ್ ಆರುಂಡಿ, ಪ್ರತಿಭಾ ಪರೀಕ್ಷೆ ವಿಜ್ಞಾನ ವಿಭಾಗ ರಾಜ್ಯ ಮಟ್ಟದ ಪ್ರಥಮ ರ್ಯಾಂಕ್ ವಿಜೇತ ಡಿ.ಎಂ. ರಾಘವೇಂದ್ರ ದರ್ಶನ್ ಹೊನ್ನಾಳಿ ಅವರನ್ನು ಸನ್ಮಾನಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.