ಮಾಸಿಕ ಸಹಾಯಧನಕ್ಕೆ ದೇವದಾಸಿಯರ ಮನವಿ
ಕಪ್ರ ವಾರ್ತೆ, ದಾವಣಗೆರೆ, ಮಾ.16
ದೇವದಾಸಿಯರ ಬಾಕಿ ಮಾಸಿಕ ಸಹಾಯಧನ ತಕ್ಷಣ ಬಿಡುಗಡೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.
ನಗರದ ನೂತನ ಡಿಸಿ ಕಚೇರಿ ಎದುರು ಪಿ.ಬಿ. ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ದೇವದಾಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿವರೆಗೂ ಘೋಷಣೆಗಳನ್ನು ಕೂಗುತ್ತಾ ತಲುಪಿದರು.
ಹಣ ಬಿಡುಗಡೆಗೆ ಒತ್ತಾಯ: ನಂತರ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ರೇಣುಕಮ್ಮ, ದೇವದಾಸಿಯರ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಈಗಿರುವ ಬ್ಯಾಂಕ್ಗಳಲ್ಲಿಯೇ ಖಾತೆಗಳನ್ನು ಮುಂದುವರಿಸಲು ಕ್ರಮ ಕೈಗೊಳ್ಳಬೇಕು. ಬಾಕಿ ಮಾಸಿಕ ಸಹಾಯಧನ ಕೂಡಲೇ ಬಿಡುಗಡೆ ಮಾಡಬೇಕು. ದೇವದಾಸಿಯರಿಗೆ ನೀಡುವ ಸಹಾಯಧನದ ಹಣವನ್ನು ಹಳೆ ಸಾಲಕ್ಕೆ ಜಮಾ ಮಾಡಿಕೊಳ್ಳದೆ, ರೈತರ ಸಾಲ ಮನ್ನಾ ಮಾದರಿಯಲ್ಲೇ ಮನ್ನಾ ಮಾಡುವಂತೆ ಒತ್ತಾಯಿಸಿದರು.
ಸರ್ಕಾರ ದೇವದಾಸಿ ಮಹಿಳೆಯರಿಗೆ ನೀಡುವ ಮಾಸಿಕ ಸಹಾಯಧನವನ್ನು 1500ಗಳಿಗೆ ಹೆಚ್ಚಿಸಬೇಕು. ವಯೋವುತಿ ಬೇಧವಿಲ್ಲದೆ, ಎಲ್ಲಾ ದೇವದಾಸಿ ಮಹಿಳೆಯರಿಗೂ ಮಾಸಿಕ ಸಹಾಯಧನ ನೀಡಬೇಕು. ನಿವೇಶನ ಸಹಿತವಾಗಿ 2 ಲಕ್ಷ ಮೌಲ್ಯದ ಮನೆ ಉಚಿತವಾಗಿ ದೇವದಾಸಿ ಮಹಿಳೆಯರಿಗೆ ವಿತರಿಸಬೇಕು. ದೇವದಾಸಿ ಮಹಿಳೆಯರ ಮದುವೆಗೆ 1 ಲಕ್ಷ ಪ್ರೋತ್ಸಾಹ ಧನ ನಿಗದಿಪಡಿಸಿ, ಅದರಲ್ಲಿ ಶೇ.50ರಷ್ಟು ಹಣವನ್ನು ಆ ಹೆಣ್ಣುಮಗಳ ಹೆಸರಿ ಬ್ಯಾಂಕ್ನಲ್ಲಿ 5 ವರ್ಷ ಠೇವಣಿ ಇಡಬೇಕು ಎಂದು ಆಗ್ರಹಿಸಿದರು.
ಎಸ್ಎಫ್ಐ ಮುಖಂಡ ಭರಮಪ್ಪ ಮಾತನಾಡಿ, ದೇವದಾಸಿ ಮಹಿಳೆಯರಿಗೆ ತಲಾ 2 ಎಕರೆ ಕೃಷಿ ಯೋಗ್ಯಭೂವು ನೀಡುವ ಮೂಲಕ ಅಂತಹ ಮಹಿಳೆಯರ ಬಾಳಿಗೆ ಆಸರೆ ಕಲ್ಪಿಸಬೇಕು. ಬಗರ್ಹುಕುಂ ಅರಣ್ಯ ಸಾಗುವಳಿ ನಿರತ ಬಡವರಿಗೆ ಫಾರಂ 35 ಸಲ್ಲಿಸಲು ಅವಕಾಶ ನೀಡಬೇಕು. ಹಕ್ಕುಪತ್ರವನ್ನು ವಿತರಿಸಬೇಕು.
ಭೂ ಬ್ಯಾಂಕ್ಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ತಕ್ಷಣವೇ ಕೈ ಬಿಡಬೇಕು. ದೇವದಾಸಿ ಮಹಿಳೆಯರ ಕುಟುಂಬಕ್ಕೆ ಅಂತ್ಯೋದಯ ಕಾರ್ಡ್ ವಿತರಿಸಬೇಕು ಎಂದರು.
ಪ್ರೋತ್ಸಾಹ ಧನ ನೀಡಿ: ಸಮೀಕ್ಷೆಯಿಂದ ಹೊರಗೆ ಉಳಿದ ದೇವದಾಸಿ ಮಹಿಳೆಯರನ್ನು ತಕ್ಷಣ ಸಮೀಕ್ಷೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಮುಂದಾಗಬೇಕು. ದೇವದಾಸಿ ಮಹಿಳಾ ಕುಟುಂಬ ಕಲ್ಯಾಣ ನಿಧಿ ಸ್ಥಾಪಿಸಿ, ಅದರಿಂದ ನೆರವಿನ ಹಸ್ತ ಚಾಚಬೇಕು. ದೇವದಾಸಿಯರ ಮಕ್ಕಳಿಗೆ ಆದ್ಯತೆ ಮೇರೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ತರಬೇಕು. ಹೋಬಳಿ ಕೇಂದ್ರಗಳಲ್ಲಿ ದೇವದಾಸಿಯರ ಸಾಮಾಜಿಕ, ಆರ್ಥಿಕ ಅಭಿವೃದ್ಧಿದಾಗಿ ವಿವಿಧೋದ್ದೇಶ ಸಹಕಾರ ಸಂಘಗಳ ಸ್ಥಾಪನೆಗೆ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.
ಸ್ವಯಂ ಉದ್ಯೋಗದ ಮೂಲಕ ಬದುಕನ್ನು ಕಟ್ಟಿಕೊಳ್ಳಲು ದೇವದಾಸಿ ಮಹಿಳೆಯರಿಗೆ ಕನಿಷ್ಠ 1 ಲಕ್ಷದ ವರೆಗೆ ಸಬ್ಸಿಡಿ ದರದಲ್ಲಿ ಸರ್ಕಾರವು ಸಾಲ ಯೋಜನೆ ಪ್ರಕಟಿಸಬೇಕು.
ದೇವದಾಸಿ ಮಹಿಳೆಯರ ಮಧ್ಯೆ ಕಾರ್ಯ ನಿರ್ವಹಿಸುವ ಸ್ವಯಂ ಸೇವಕಿಯರಿಗೆ ಮಾಸಿಕ 6 ಸಾವಿರ ಗೌರವಧನ, ವೇತನವನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿ. ದೇವದಾಸಿಯರ ಬದುಕನ್ನು ಹಸನಾಗಿಸಲು ಸರ್ಕಾರ ಆದ್ಯತೆ ಮೇಲೆ ಮುಂದಾಗಲಿ ಎಂದು ಆಗ್ರಹಿಸಿದರು.
ಸಂಘಟನೆಯ ಪದ್ಮಾವತಿ, ಅಂಜಿನಮ್ಮ, ಕೆಂಚಮ್ಮ, ಮೈಲಮ್ಮ, ಚೌಡಮ್ಮ ಗುತ್ತೂರು, ಆವರಗೆರೆ ಶಾರದಮ್ಮ, ಹುಲಿಗೆಮ್ಮ, ಸಾಕಮ್ಮ, ದ್ಯಾಮಕ್ಕ, ರೇಣುಕಾ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

