ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಳ: ವಿಷಾದ
ಕಪ್ರ ವಾರ್ತೆ, ದಾವಣಗೆರೆ, ಮಾ.16
ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತವರನ್ನು ಪೂಜಿಸುವ ಎಂಬ ಮಾತನ್ನು ಜೀವನದಲ್ಲಿ ನೆನಪಿನಲ್ಲಿಟ್ಟುಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆ ಮಾಡಲು ಯುವ ಜನಾಂಗ ಶ್ರಮಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಎಂ. ಪದ್ಮನಾಭ ಪೈ ಕರೆ ನೀಡಿದರು.
ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ಮಾತಾ ಪಿತೃ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ವೃದ್ಧಾಶ್ರಮ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಹೊಣೆಗಾರಿಕೆ ಯುವ ಜನಾಂಗ, ಇಂದಿಮ ಮಕ್ಕಳ ಮೇಲಿದೆ ಎಂದರು.
ಪಾಲಕರನ್ನು ಗೌರವದಿಂದ ಕಾಣಬೇಕು: ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕಾದರೆ, ಮಕ್ಕಳು ತಮ್ಮ ಪಾಲಕರನ್ನು ಗೌರವದಿಂದ ಕಾಣಬೇಕು. ಹೆತ್ತವರನ್ನು ಗೌರವಿಸುವ ಮನೋಭಾವನೆ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ತಂದೆ, ತಾಯಿ ಮಹತ್ವ, ಹೆತ್ತವರ ತ್ಯಾಗವನ್ನು ಪ್ರತಿ ಮಗುವಿಗೂ ಎಳೆ ವಯಸ್ಸಿನಲ್ಲಿ ಮನವರಿಕೆ ಮಾಡಿಕೊಡುವ ಕೆಲಸವನ್ನು ಈಶ್ವರಮ್ಮ ಶಾಲೆ ಮಾಡುತ್ತಿರುವುದು ಅನುಕರಣೀಯ ಎಂದು ಅವರು ಶ್ಲಾಘಿಸಿದರು.
ಅಪರೂಪದ ಸಂಪ್ರದಾಯ: ಮಾತಾ ಪಿತೃ ವಂದನಾ ಎಂಬುದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ. ದೇವರನ್ನು ತಂದೆ, ತಾಯಿಯೆಂದು ಭಾವಿಸುವುದು ಸಹಜ. ಆದರೆ, ಹೆತ್ತವರನ್ನೇ ದೇವರೆಂದು ಪೂಜಿಸಿ, ಗೌರವಿಸುವ ಮೂಲಕ ಭಾವನಾತ್ಮಕ ಬೆಸುಗೆ ಬೆಸೆಯುವ ಅಪರೂಪದ ಸಂಪ್ರದಾಯವನ್ನು ಈಶ್ವರಮ್ಮ ಶಾಲೆ ಹಿಂದಿನಿಂದಲೂ ಮಾಡುತ್ತಿದೆ ಎಂದರು.
ಪೂಜೆಯ ಭಾಗವಾಗಿ ದೇವರನ್ನು ಪೂಜಿಸುವಂತೆ ಪ್ರಾರ್ಥನೆ, ಸಂಕಲ್ಪ, ಪಾದಪೂಜೆ, ಪಾದಾಭಿವಂದನೆ, ಆರತೆ ಎಲ್ಲರೂ ಸಂಪ್ರದಾಯದಂತೆ ನಡೆದವು. ಎಲ್ಲಾ ಪಾಲಕರಿಗೂ ಶಾಲೆಯಿಂದ ಕೊಡುಗೆ ನೀಡಲಾಯಿತು. ಪಾಲಕರು ಮಕ್ಕಳಿಗೆ ಅಕ್ಷತೆ ಹಾಕಿ ಆಶೀರ್ವದಿಸಿದರು. ಹೆತ್ತವರ ಪೂಜೆಗಾಗಿ ಸಂಸ್ಕೃತದ ಆಯ್ದ ಮಂತ್ರಗಳು, ಮೂರು ಭಾವನಾತ್ಮಕ ಗೀತೆ ಬಳಸಿಕೊಂಡಿದ್ದು ವಿಶೇಷವಾಗಿತ್ತು. ಸಂಗೀತ ಶಿಕ್ಷಕಿ ಸಹನಾ, ವಿದ್ಯಾ ಹೆಗಡೆ ಹಾಡುಗಳಿಗೆ ಜೀವ ತುಂಬಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಬಿ.ಆರ್., ಶಾಂತಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸತ್ಯಸಾಯಿ ಸಂಸ್ಥೆಗಳ ರಾಜ್ಯ ಮಹಿಳಾ ಸೇವಾದಳಧ ಸಹ ಸಂಯೋಜಕಿ ಪ್ರಿಯಾ ಪೈ, ಈಶ್ವರಮ್ಮ ಟ್ರಸ್ಟ್ ಅಧ್ಯಕ್ಷ ಕೆ.ಆರ್. ಮಂಜುನಾಥ, ಶಾಲಾ ಕಾರ್ಯದರ್ಶಿ ಎ.ಆರ್. ಉಷಾ ರಂಗನಾಥ, ಖಜಾಂಚಿ ಕೆ.ಆರ್. ಸುಜಾತ ಕೃಷ್ಣ, ಸದಸ್ಯರಾದ ಬಿ.ಎನ್. ಸಾಯಿಪ್ರಸಾದ್, ಕಾಸಲ್ ಅರುಣಕುಮಾರ, ಪ್ರಾಚಾರ್ಯ ಕೆ.ಎಸ್. ಪ್ರಭುಕುಮಾರ, ಶ್ರೀದೇವಿ, ಕೆ.ವಿ. ಶ್ವೇತಾ ಇತರರು ಇದ್ದರು. ಶಿಕ್ಷಕ ಜಗನ್ನಾಥ ನಾಡಿಗೇರ್ ಪೂಜಾ ವಿಧಿ ವಿಧಾನ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

