ಧಾರವಾಡ ಕ್ಷೇತ್ರದಲ್ಲಿ ಗೆಲವು ನಂದೆ...
ಧಾರವಾಡ: ಈ ಚುನಾವಣೆದಾಗ ನನ್ನ ಬೆನ್ನ ಹತ್ತಾವ್ರು ಯಾರು ಇಲ್ಲ. ಗ್ಯಾರಂಟಿ ನನಗ ಗೆಲವು...
-ಹೀಗೆಂದು ಅತೀ ವಿಶ್ವಾಸ ವ್ಯಕ್ತಪಡಿಸಿದವರು ಧಾರವಾಡ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ತವನಪ್ಪ ಅಷ್ಟಗಿ.
1994ರಿಂದ ರಾಜಕೀಯ ಮಾಡುತ್ತಿದ್ದು ಜಿಪಂ ಸದಸ್ಯರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಧಾರವಾಡ ಕ್ಷೇತ್ರಕ್ಕೆ ಕೆಜೆಪಿಯಿಂದ ಸ್ಪರ್ಧಿಸಿದ್ದು, ಚುನಾವಣೆ ಎದುರಿಸುವ ಉತ್ಸಾಹ ಹಾಗೂ ಹುರುಪಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹತ್ತಾರು ಸಾಧನೆ ಹಾಗೂ ಕ್ಷೇತ್ರದಲ್ಲಿ ಇಷ್ಟು ವರ್ಷ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ನನ್ನ ಗೆಲವಿಗೆ ಸಾಕ್ಷಿಯಾಗಲಿವೆ ಎಂದರು.
ಕ್ಷೇತ್ರದ ಮತದಾರರು ನನ್ನ ಪ್ರಾಮಾಣಿಕ ಸೇವೆ ಗುರುತಿಸಿ ಪ್ರೋತ್ಸಾಹಿಸಿ, ಆಯ್ಕೆ ಮಾಡಿದರೆ ಧಾರವಾಡ ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸುತ್ತೇನೆ. ಕ್ಷೇತ್ರದ ಕಲ್ಲೆ, ಕಬ್ಬೂರು, ಯಾದವಾಡ ಸೇರಿದಂತೆ ಅನೇಕ ಗ್ರಾಮಗಳನ್ನೂ ಸುವರ್ಣ ಗ್ರಾಮ ಸೌಲಭ್ಯದಡಿ ಬರಬೇಕಿದೆ. ಸಾಕಷ್ಟು ಗ್ರಾಮಗಳಿಗೆ ಸರಿಯಾದ ಸಂಪರ್ಕ ರಸ್ತೆಗಳಿಲ್ಲ. ಒಟ್ಟಿನಲ್ಲಿ ಕ್ಷೇತ್ರವು ಇನ್ನೂ ಸಾಕಷ್ಟು ಅಭಿವೃದ್ಧಿ ಕಾಣಬೇಕಿದ್ದು, ಮತದಾರರು ಆಶೀರ್ವಾದ ಮಾಡಬೇಕಷ್ಟೇ ಎಂದರು.
ಗೋಷ್ಠಿಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪರಮೇಶ್ವರ ದಂಡಿನ, ಮುಖಂಡರಾದ ಚಿದಾನಂದ ಸಾಧನಿ, ಮಹಾದೇವಪ್ಪ ಸವದತ್ತಿ, ಬಸವರಾಜ ಕುಂದಗೋಳ, ನ್ಯಾಯವಾದಿ ಶೇಖರ ಕವಳಿ, ಎಂ.ಎಂ. ಹಿರೇಮಠ, ಸುರೇಶಬಾಬು ತಳವಾರ ಇತರರು ಇದ್ದರು.
ಬೆದರಿಕೆ ಕರೆ
ನನಗೆ ಟಿಕೆಟ್ ಪಕ್ಕಾ ಆದ ನಂತರ ಕ್ಷೇತ್ರದ ವಿವಿಧೆಡೆಯಿಂದ ನಮ್ಮ ಕಾರ್ಯಕರ್ತರಿಗೆ ಹಾಗೂ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಆ ಕರೆಗಳು ಯಾರಿಂದ ಬರುತ್ತಿವೆ ಎಂದು ಗೊತ್ತಾಗುತ್ತಿಲ್ಲ. ಈ ಕುರಿತು ಪೊಲೀಸರಿಗೆ ದೂರು ನೀಡುವ ಚಿಂತನೆಯೂ ಇದೆ.
- ತವನಪ್ಪ ಅಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

