ಕುಂದಗೋಳ: ಕಾಂಗ್ರೆಸ್ ಕಾರ್ಯಾಲಯ ಉದ್ಘಾಟನೆ
ಕುಂದಗೋಳ: ತಾಲೂಕು ಕಾಂಗ್ರೆಸ್ ಕಾರ್ಯಾಲಯವನ್ನು ಪಟ್ಟಣದ ಶಿವಾಜಿ ನಗರದಲ್ಲಿರುವ ಕೊಕಾಟೆಯವರ ಕಟ್ಟಡದಲ್ಲಿ ಜಿಲ್ಲಾ ಅಧ್ಯಕ್ಷ, ಮಾಜಿ ಶಾಸಕ ಸಿ.ಎಸ್. ಶಿವಳ್ಳಿ ಮತ್ತು ಮುಖಂಡರಾದ ಈಶ್ವರಪ್ಪ ಕೊಕಾಟೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೆಂಕನಗೌಡ ಹಿರೇಗೌಡ್ರ, ರವಿರಾಜ ಬಸ್ತಿ, ಕೇಶವ ಯಾದವ, ಸಿ.ಜಿ. ಪಾಟೀಲ, ವಿರೂಪಾಕ್ಷಗೌಡ ರಂಗನಗೌಡ್ರ, ವಿಶ್ವನಾಥ ಕೂಬಿಹಾಳ, ಗುರುಸಿದ್ದಯ್ಯ ಹಿರೇಮಠ, ವಸಂತ ಸಿಂಧೆ, ಈರಮ್ಮ ಬಾರಕೇರ್, ರೇಣುಕಾ ಕಳ್ಳಿಮನಿ, ದಯಾನಂದ ಕುಂದೂರ, ಶಿವಾಜಿ ಗಾಯಕವಾಡ, ಅಪ್ಪಣ್ಣ ಹಿರೇಗೌಡ್ರ, ಸುಭಾಸ್ ಗೌಡಪ್ಪನವರ, ತಮ್ಮನಗೌಡ ಪಾಟೀಲ, ಮುದಕಣ್ಣ ಹುರಳಿ, ಶಂಕರಾವ್, ಮಾರುತಿ ಕೌರಾಯಿ, ಬಾಳಕೃಷ್ಣ, ಪವಾರ, ಬಸವರಾಜ ಶಿರಸಂಗಿ ಮತ್ತು ತಾಲೂಕಿನ ಕಾರ್ಯಕರ್ತರು ಉಪಸ್ಥಿತರಿದ್ದರು.
ದ್ಯಾಮನಗೌಡ ನೇಮಕ
ನವಲಗುಂದ: ಸ್ಥಳೀಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ದ್ಯಾಮನಗೌಡ ಪಾಟೀಲ ಅವರನ್ನು ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದು ತಾಲೂಕಾಧ್ಯಕ್ಷ ಶಂಕರಣ್ಣ ಅವರಾದಿ ತಿಳಿಸಿದ್ದಾರೆ.
ಹುಬ್ಬಳ್ಳಿ: ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ
ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆಗೈದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷ್ನರೇಟ್ನ ಡಿಸಿಪಿ ಶ್ರೀನಾಥ ಜೋಶಿ, ರಾಜ್ಯ ಗುಪ್ತಚರ ಇಲಾಖೆ ಡಿವೈಎಸ್ಪಿ ಡಾ.ಸಂಜೀವ ಪಾಟೀಲ ಸೇರಿದಂತೆ ಅವಳಿ ನಗರದ 8 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರಸಕ್ತ ವರ್ಷ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೋಮವಾರ ಪ್ರಕಟಿಸಿರುವ 2012ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ರಾಜ್ಯದ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿನ 121 ಅಧಿಕಾರಿ, ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಗ್ರಾಮೀಣ ಸೇರಿದಂತೆ ಹು-ಧಾ ನಗರದ ಒಟ್ಟು 8 ಜನರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಕಟಿತ ಪಟ್ಟಿಯಲ್ಲಿ ಹು-ಧಾ ಕಮೀಷ್ನರೇಟ್ನ ಡಿಸಿಪಿ ಶ್ರೀನಾಥ ಜೋಶಿ, ರಾಜ್ಯ ಗುಪ್ತಚರ ಇಲಾಖೆ ಡಿವೈಎಸ್ಪಿ ಡಾ.ಸಂಜೀವ ಪಾಟೀಲ, ಹು-ಧಾ ನಗರ ವಿಶೇಷ ವಿಭಾಗದ ಪೊಲೀಸ್ ನಿರೀಕ್ಷಕ ಸಂಗಣ್ಣ ವಿ. ತುಂಬಗಿ, ಗುಪ್ತಚರ ಇಲಾಖೆ ಧಾರವಾಡ ವಿಭಾಗದ ಇನ್ಸ್ಪೆಕ್ಟರ್ ಬಸವೇಶ್ವರ, ಸಿಸಿಆರ್ಬಿಯ ಮಹಿಳಾ ಪೇದೆ ಮಂಜುಳಾ ಪರಕಾಳಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಜೆಪಿ ಯುವ ಘಟಕ ಅಧ್ಯಕ್ಷರಾಗಿ ದೇಶನೂರ
ಧಾರವಾಡ: ಕರ್ನಾಟಕ ಜನತಾ ಪಕ್ಷದ ಧಾರವಾಡ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಉಪ್ಪಿನಬೆಟಗೇರಿ ಗ್ರಾಮದ ಶಿವಾನಂದ ದೇಶನೂರ ನೇಮಕಗೊಂಡಿದ್ದಾರೆ. ಕೆಜೆಪಿ ಪಕ್ಷದ ಪ್ರದಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ ಅವರು ದೇಶನೂರ ಅವರ ಈ ನೇಮಕ ಆದೇಶವನ್ನು ನೀಡಿದ್ದಾರೆ.
ಜಂದಿಸಾಬ ಅಸುಂಡಿ ನಿಧನ
ಅಣ್ಣಿಗೇರಿ: ಸ್ಥಳೀಯ ಮುಸ್ಲಿಂ ಸಮಾಜ ಮುಖಂಡ, ವರ್ತಕರಾದ ಜಂದಿಸಾಬ ಇಮಾಮಸಾಬ ಅಸುಂಡಿ (76) ಭಾನುವಾರ ಮಧ್ಯಾಹ್ನ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.
ನಿಂಬಣ್ಣವರ ಪ್ರಚಾರ
ಕಲಘಟಗಿ: ಪಟ್ಟಣದಲ್ಲಿ ಇಂದು ಕೆಜೆಪಿ ಅಭ್ಯರ್ಥಿ ಸಿ.ಎಂ. ನಿಂಬಣ್ಣವರ ತಮ್ಮ ನೂರಾರು ಜನ ಬೆಂಬಲಿಗರೊಂದಿಗೆ ಮತದಾರರ ಮನೆಗೆ ತೆರಳಿ ಮತಯಾಚನೆ ಮಾಡಿದರು. ತಾಲೂಕು ಕೆಜೆಪಿಯ ಸದಾನಂದ ಚಿಂತಾಮಣಿ, ನಿಂಗಪ್ಪ ಸುತಗಟ್ಟಿ, ಜಿಲ್ಲಾ ಮಹಿಳಾ ಕೆಜೆಪಿ ಪ್ರಧಾನ ಕಾರ್ಯದರ್ಶಿ ಗೀತಾ ಮರಲಿಂಗಣ್ಣವರ, ಶಕುಂತಲಾ ನಾಡಗೌಡರ, ವಕೀಲರ ಸಂಘದ ಅಧ್ಯಕ್ಷ ಮಂಜುನಾಥ ಚೌದರಿ, ನ್ಯಾಯವಾದಿಗಳಾದ ಎಸ್.ಟಿ. ತೆಗ್ಗಿಹಳ್ಳಿ, ವಿ.ಬಿ. ಶಿವನಗೌಡರ, ಮಂಜುನಾಥ ಕಂಪ್ಲಿ, ರಾಘು ಉಡುಪಿ, ಶಂಕರಗೌಡ ಪಾಟೀಲ, ಕೆ.ಬಿ. ಗುಡಿಹಾಳ, ಸಿ.ಎಸ್. ಚಂದೂಕರ, ಗಿರೀಶ ರೆಡ್ಡಿ, ಬಸವಣ್ಣಯ್ಯ ಹಿರೇಮಠ, ಶೇಖಪ್ಪ ಹುಲಗೂರ, ಎಂ.ಎಫ್. ಜಾವೂರ, ಚಂದ್ರಗೌಡ ಪಾಟೀಲ, ಪರಶುರಾಮ ರಜಪೂತ, ಯಲ್ಲಾರಿ ಶಿಂಧೆ ಕಡ್ಲಾಸ್ಕರ ಪಾಲ್ಗೊಂಡಿದ್ದರು.
ಹುಸಿ ಕರೆ: ಅಧಿಕಾರಿಗಳ ದಾಳಿ
ಧಾರವಾಡ: ಮತದಾರರಿಗೆ ಸೀರೆ, ಮದ್ಯ ಹಾಗೂ ಇನ್ನಿತರೆ ವಸ್ತುಗಳನ್ನು ಹಂಚಲಾಗುತ್ತಿದೆ ಎನ್ನುವ ಸುಳ್ಳು ದೂರವಾಣಿ ಕರೆಯ ಮೇರೆಗೆ ನಗರದ ಹೊರವಲಯದಲ್ಲಿರುವ ಕಾಂಗ್ರೆಸ್ ಮುಖಂಡರೊಬ್ಬರ ಡೈರಿ ಪರಿಶೀಲನೆ ನಡೆಸಿದ ಪೊಲೀಸರು ಹಾಗೂ ಚುನಾವಣಾ ವೀಕ್ಷಕರು ಖಾಲಿ ಕೈಯಲ್ಲಿ ಮರಳಿದ ಘಟನೆ ಭಾನುವಾರ ನಡೆದಿದೆ. ಈ ಕುರಿತಾಗಿ ಪೊಲೀಸರಿಗೆ ಮಧ್ಯಾಹ್ನ ದೂರವಾಣಿ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾಗಿರಿ ಪೊಲೀಸರು ಹಾಗೂ ಚುನಾವಣಾ ವೀಕ್ಷಕರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಡೈರಿಯ ಸಂಪೂರ್ಣ ಪ್ರದೇಶವನ್ನು ಹಾಗೂ ಡೈರಿಗೆ ಬರುತ್ತಿರುವ ಎಲ್ಲ ವಾಹನಗಳನ್ನು ತಪಾಸನೆಗೆ ಒಳಪಡಿಸಲಾಯಿತು. ಅಂತಹ ಯಾವುದೇ ವಸ್ತುಗಳು ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೆ ದಾಳಿ ಸಂದರ್ಭದಲ್ಲಿ ಕಂಡು ಬರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

