ಧಾರವಾಡ

ಬಟ್ಟೆ ವ್ಯಾಪಾರಸ್ಥರಿಗೆ ಅನವಶ್ಯಕ ಕಿರಿಕಿರಿ: ಆಕ್ರೋಶ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 19
ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಅಧಿಕಾರಿಗಳು ಬಟ್ಟೆ ವ್ಯಾಪಾರಸ್ಥರಿಗೆ ಅನವಶ್ಯಕ ಕಿರಿಕಿರಿ ಮಾಡುತ್ತಿದ್ದಾರೆಂದು ಧಾರವಾಡ ಬಟ್ಟೆ ವ್ಯಾಪಾರಸ್ಥರ ಸಂಘ ಆರೋಪಿಸಿದೆ.
ಸಂಘದ ಲಲಿತ ಭಂಡಾರಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಏ. 14ರಂದು ಕಾಮತ್ ಟೂರಿಸ್ಟ್ ವಾಹನದ ಮೂಲಕ ಬೆಂಗಳೂರಿನಿಂದ ಧಾರವಾಡಕ್ಕೆ ಸುಮಾರು ರು. 7 ಲಕ್ಷ ಮೊತ್ತದ ಸೀರೆಗಳನ್ನು ತರಿಸಲಾಗುತ್ತಿತ್ತು. ಅಗತ್ಯ ದಾಖಲೆಗಳು ಇದ್ದರು ಸಹ ಇಲ್ಲಿನ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜು ಬಳಿ ಚುನಾವಣಾ ಅಧಿಕಾರಿ ಚಂದ್ರಕಾಂತ ಲೋಕರೆ ಎಂಬುವರು ಈ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆಂದರು.
ಮೆಹತಾ ಸಾಡಿ, ಲಲಿತ ಸಾರಿ ಸೆಂಟರ್ ಹಾಗೂ ಎಸ್.ಕೆ. ಕ್ರಿಯೇಶನ್ಸ್ ಎಂಬುವರಿಗೆ ಸೇರಿದ ನಾಲ್ಕು ಹಾಗೂ ಐದು ಸಾವಿರ ಮೊತ್ತದ 400 ಸೀರೆಗಳನ್ನು ತರಿಸಲಾಗುತ್ತಿತ್ತು. ಈ ಸೀರೆಗಳಿಗೆ ಸಂಬಂಧಿಸಿದ ಬಿಲ್, ಟಿನ್ ನಂಬರ್ ಸೇರಿದಂತೆ ಇನ್ನಿತರ ದಾಖಲೆಗಳೆಲ್ಲವೂ ಸರಿಯಾಗಿದ್ದರೂ ಸಹ ಚಂದ್ರಕಾಂತ ಲೋಕರೆ ಎಂಬ ಅಧಿಕಾರಿಯು ವಿದ್ಯಾಗಿರಿ ಠಾಣೆ ಪೊಲೀಸರನ್ನು ಕರೆಯಿಸಿ ಈ ಸೀರೆಗಳನ್ನು ಜಪ್ತಿ ಮಾಡಿದ್ದಾರೆ. ಸಂಘದ ಸುಮಾರು 10 ಜನ ಹೋಗಿ ದಾಖಲೆ ತೋರಿಸಿದರೂ ಅದಕ್ಕೆ ಸ್ಪಂದಿಸದೇ ವಶಪಡಿಸಿಕೊಂಡಿರುವುದು ಯಾವ ನ್ಯಾಯ. ಬರುವ ದಿನಗಳಲ್ಲಿ ಮದುವೆಗಳಿದ್ದು, ಇದರಿಂದ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಿದೆ ಎಂದು ಲಲಿತ ಭಂಡಾರಿ ಬೇಸರ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿ ಸಮೀರ ಶುಕ್ಲ ಅವರನ್ನು ಭೇಟಿ ನೀಡಿ ಎಲ್ಲ ವಿಷಯ ತಿಳಿಸಿದಾಗ ಈ ಕುರಿತು ತನಿಖೆ ಮಾಡಲಾಗುವುದು ಎಂದರು. ಈ ಕುರಿತು ಏ. 20ರಂದು ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯಲಿದೆ. ನ್ಯಾಯ ನಮ್ಮ ಪರವಾಗಿ ಆದರೂ, ವ್ಯಾಪಾರಸ್ಥರಿಗೆ ಇಷ್ಟೊಂದು ಕಿರಿಕಿರಿ ಅಗತ್ಯವಿರಲಿಲ್ಲ. ದಾಖಲೆ ಇಲ್ಲದೇ ಸೀರೆಗಳನ್ನು ತಂದಿದ್ದರೆ ನಮ್ಮ ಮೇಲೆ ದೂರು ದಾಖಲಿಸಲಿ. ಯಾವ ತಪ್ಪು ಮಾಡದೇ ಸಾಮಾನ್ಯ ಜನರ ಮೇಲೆ ದೌರ್ಜನ್ಯ ಎಸಗುವುದು ಸರಿಯಲ್ಲ. ಜಿಲ್ಲಾ ಚುನಾವಣಾಧಿಕಾರಿಗಳು ದಯವಿಟ್ಟು ತಮ್ಮ ಅಧಿಕಾರಿಗಳಿಗೆ ಈ ಕುರಿತು ಮನವರಿಕೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಸಂಘದ ವಿಜಯ ಸುಲಾಖೆ, ಚಂಪಾಲಾಲ್ ಮೆಹತಾ, ಮೋಹನ್ ಓಸವಾಲ್, ಮಹೇಶ ಲಲ್ವಾನಿ, ಜಿ.ಕೆ. ಮೆಹತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.