ಧಾರವಾಡ

ಬೀಳಗಿ ಅಭಿವೃದ್ಧಿಗೆ ವ್ಹಿಜನ್ 2020 ಯೋಜನೆ

Published On :

ಬೀಳಗಿ: ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಬೀಳಗಿ ವ್ಹಿಜನ್ 2020 ಯೋಜನೆ ರೂಪಿಸಿದ್ದು ಕ್ಷೇತ್ರ ಹಾಗೂ ತಾಲೂಕನ್ನು ಮಾದರಿ ಕ್ಷೇತ್ರವಾಗಿ ಕೃಷಿ, ಕೈಗಾರಿಕೆ, ಶಿಕ್ಷಣ, ಉದ್ಯಮ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ರಂಗದಲ್ಲೂ ಅನುಕರಣೀಯವಾಗಿಸುವುದರ ಜೊತೆ ಪ್ರತಿ ಗ್ರಾಮಕ್ಕೂ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿದ್ದಾಗಿ ರಾಜ್ಯದ ಬೃಹತ್ ಕೈಗಾರಿಕೆ ಸಚಿವ ಹಾಗೂ ಬೀಳಗಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಭರವಸೆ ನೀಡಿದ್ದಾರೆ.
ಭರದಿಂದ ಪ್ರಚಾರ ಆರಂಭಿಸಿರುವ ನಿರಾಣಿ ಶನಿವಾರ ಬಿಡುವಿನ ಮಧ್ಯೆ ಬೀಳಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ತಮ್ಮ ಮುಂದಿನ ಕನಸುಗಳನ್ನು ಬಿಚ್ಚಿಟ್ಟರು. ಇಡಿ ಬೀಳಗಿ ತಾಲೂಕನ್ನು ರಾಜ್ಯದಲ್ಲಿ ಮಾದರಿ ಮಾಡಲು ಹತ್ತು ಹಲವು ಕನಸುಗಳನ್ನು ಹೊತ್ತಿರುವುದಾಗಿ ತಿಳಿಸಿದರು. ಹಾಗೂ ಅದರ ಸಾಕಾರಕ್ಕಾಗಿ ಅಗತ್ಯ ಸಿದ್ಧತೆ. ಯೋಜನೆ ಜತೆ ನೀಲ ನಕ್ಷೆ ಸಹ ತಮ್ಮಲ್ಲಿರುವುದಾಗಿ ವಿವರಿಸಿದರು.
ಹಿರಿಯ ಎಂಜಿನಿಯರ್, ಆರ್ಥಿಕ ತಜ್ಞರು, ವಿಜ್ಞಾನಿಗಳು. ವ್ಯಾಪಾರಸ್ಥರು, ಉದ್ಯಮಿಗಳು, ಕೃಷಿ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರದ ತಜ್ಞರೊಂದಿಗೆ ಸಮಾಲೋಚನೆ ಮಾಡಿ ಬೀಳಗಿ ವ್ಹಿಜನ್ 2020 ರೂಪಿಸಿದ್ದೇನೆ. ಅದರಲ್ಲಿ ಬಡರೈತ, ವ್ಯಾಪಾರಿ, ಬಡ ವಿದ್ಯಾರ್ಥಿಗಳು, ಕೂಲಿಕಾರರು ಸೇರಿದಂತೆ ಎಲ್ಲರ ಬದುಕಿಗೆ ಆಸರೆ ಯಾಗುವ ಅಂಶಗಳಿವೆ. ಹಲವು ತಜ್ಞರು ಇದನ್ನು ಶ್ಲಾಘಿಸಿದ್ದಾರೆ. ಇದು ಮೊದಲು ಬೀಳಗಿ ತಾಲೂಕಿನಲ್ಲಿ ಅನುಷ್ಠಾನವಾಗಬೇಕು. ಬೀಳಗಿ ತಾಲೂಕಿನ ಜನರ ಋಣ ನನ್ನ ಮೇಲಿದೆ. ಎರಡು ಬಾರಿ ನನ್ನನ್ನು ಆಯ್ಕೆ ಮಾಡಿ ರಾಜ್ಯದ ರಾಜಕಾರಣದಲ್ಲಿ ಮಹತ್ವದ ಸ್ಥಾನ ನಿಭಾಯಿಸುವ ಜವಾಬ್ದಾರಿ ನೀಡಿದ್ದಾರೆ. ಅದನ್ನು ತಾವು ಸಹ ಸಮರ್ಥವಾಗಿ ನಿಭಾಯಿಸಿದ್ದೇನೆ. ಈ ವ್ಹಿಜನ್ 2020 ಬಳಿಕ ರಾಜ್ಯದಲ್ಲೂ ಜಾರಿಗೆ ತರುವ ಉದ್ದೇಶವಿದೆ ಮುಂದೊಂದು ದಿನ ಖಂಡಿತವಾಗಿಯೂ ಇದು ದೇಶಕ್ಕೆ ಮಾದರಿಯಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.
ಬಿಜಾಪುರದಲ್ಲಿ ರೂಪಿಸಿದ್ದೆ: ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ಇಂತಹ ವ್ಹಿಜನ್ 2020 ಯೋಜನೆಯನ್ನು ಬಿಜಾಪುರಕ್ಕೆ ರೂಪಿಸಿದ್ದೆ. ಈ ಯೋಜನೆ ನೆನೆಗುದಿಗೆ ಬಿದ್ದಿದೆ. ಮುಂಬರುವವರು ಅದನ್ನು ಕೈಗೆತ್ತಿಕೊಂಡರೆ ಅವರಿಗೆ ತಾವೂ ಸಹಕಾರ ನೀಡುವುದಾಗಿ ಹೇಳಿದ ಸಚಿವ ನಿರಾಣಿ, ನನ್ನನ್ನು ಎರಡು ಬಾರಿ ವಿಧಾನಸಭೆಗೆ ಕಳುಹಿಸಿ ಸಚಿವನನ್ನಾಗಿ ಮಾಡಿದ ಬೀಳಗಿ ಕ್ಷೇತ್ರದ ಜನತೆಯ ಋಣ ತೀರಿಸಲು ಮತ್ತು ಬೀಳಗಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಜನತೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ ಎರಡು ಬಾರಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳಂತೂ ಬೇರೆ ಬೇರೆ ರಾಜ್ಯ, ದೇಶಗಳಿಗೆ ಮಾದರಿಯಾದವು.  ಕರ್ನಾಟಕಕ್ಕೆ ಅಪಾರ ಪ್ರಮಾಣದ ಹೂಡಿಕೆ ಹರಿದು ಬಂದು ಸಾಕಷ್ಟು ಯುವಕರಿಗೆ ಉದ್ಯೋಗ ಲಭಿಸಿದೆ ಎಂದರು. ತಾವು ಕೈಗಾರಿಕೆ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಕೈಗಾರಿಕೆ ಕ್ರಾಂತಿಯಾಗಿದೆ. ರೈತ ಸ್ನೇಹಿ ಕೈಗಾರಿಕೆ ಆರಂಭಿಸಲಾಗಿದೆ ಎಂದು ನಿರಾಣಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.