ಧಾರವಾಡ

ಎಂ.ಆರ್. ಪಾಟೀಲ ಪ್ರಚಾರ

Published On :

ಕುಂದಗೋಳ: ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ ಅವರು, ಅರಳಿಕಟ್ಟಿ, ಕರಡಿಕೊಪ್ಪ, ರಾಮಾಪೂರ, ಶರೇವಾಡ ಬಮ್ಮಸಮುದ್ರ, ಕಟ್ನೂರ ಗಿರಿಯಾಲ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.  ಈ ಸಂದರ್ಭ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಮಹೇಶಗೌಡ ಪಾಟೀಲ, ಕ್ಷೇತ್ರದಲ್ಲಿ ಪಕ್ಷದ ಪರ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಅಭ್ಯರ್ಥಿ ಗೆಲುವಿಗೆ ಪಣತೊಟ್ಟಿದ್ದಾರೆ. ದೇಶದಲ್ಲಿನ ಉಗ್ರರ ದಮನಕ್ಕೆ  ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿದೆ ಎಂದರು. ಇದೇ ವೇಳೆ ವಿವಿಧ ಪಕ್ಷಗಳ 40 ಯುವಕರು ಹಾಗೂ ಹೊಸದಾಗಿ ಮತದಾನದ ಹಕ್ಕು ಪಡೆದ 50ಕ್ಕೂ ಹೆಚ್ಚು ಯುವಕರು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ಜಿಪಂ ಸದಸ್ಯ ಟಿ.ಜಿ. ಬಾಲಣ್ಣವರ, ಮುಖಂಡರಾದ ಬಸನಗೌಡ ಶಿವನಗೌಡ್ರ, ಈರಣ್ಣ ಜಡಿ, ಗೌರಮ್ಮ ಹರಿಜನ, ವಿರುಪಾಕ್ಷಗೌಡ ಪಾಟೀಲ, ವೀರಭದ್ರಯ್ಯ ರಾಚನಗೌಡ್ರ, ನೇಮಿಚಂದ್ರ ಬಸಾಪೂರ ಎಂ.ಡಿ. ನಾಗರಳ್ಳಿ  ಸಂದರ್ಭದಲ್ಲಿದ್ದರು.
ಸಿಎಂ: ಮಂಗಳವಾರ ನಗರಕ್ಕೆ ಸಿಎಂ ಜಗದೀಶ್ ಶೆಟ್ಟರ್ ಆಗಮಿಸಲಿದ್ದು, ಎಂ.ಆರ್. ಪಾಟೀಲ ಪರ ಪ್ರಚಾರ ನಡೆಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.