ರಾಜ್ಯ ಇಬ್ಭಾಗದ ಹೋರಾಟಕ್ಕೆ ಮುಂಚೆ ಸರ್ಕಾರ ಜಾಗೃತವಾಗಲಿ: ಪಾಪು
ಹುಬ್ಬಳ್ಳಿ: ತೆಲಂಗಾಣ ಮಾದರಿಯಂತೆ ಕರ್ನಾಟಕದಲ್ಲಿಯೂ ಪ್ರತ್ಯೇಕ ರಾಜ್ಯದ ಕೂಗು ಗಟ್ಟಿಗೊಳ್ಳುವ ಮುಂಚೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಸಮಗ್ರ ಕರ್ನಾಟಕದ ಅಭಿವೃದ್ಧಿ ಗಮನದಲ್ಲಿಟ್ಟು ಪಾರದರ್ಶಕ ಆಡಳಿತ ನಡೆಸಬೇಕೆಂದು ಹಿರಿಯ ಪತ್ರಕರ್ತ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಲಹೆ ನೀಡಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕೇವಲ ಬೆಂಗಳೂರು ಹಾಗೂ ಮೈಸೂರು ಪ್ರದೇಶಗಳಲ್ಲಷ್ಟೇ ಅಭಿವೃದ್ಧಿಗೆ ಪ್ರಾತಿನಿಧ್ಯ ನೀಡದೇ, ರಾಜ್ಯ ಇನ್ನಿತರ ಪ್ರದೇಶಗಳನ್ನೂ ಅಭಿವೃದ್ಧಿಗೊಳಿಸಲು ಚಿಂತಿಸಬೇಕು ಎಂದರು. ಹಳೆ ಮೈಸೂರು ಭಾಗದವರಿಗೆ ಸಮಗ್ರ ಕರ್ನಾಟಕದ ಭಾವನೆ ಇದುವರೆಗೂ ಮೂಡಿಲ್ಲ. ತಾವೇ ಶ್ರೇಷ್ಠರು, ರಾಜ್ಯದ ಇತರೆ ಭಾಗದವರು ತಮಗಿಂತ ಕೀಳೆಂಬ ಭಾವನೆ ಅವರಲ್ಲಿದೆ. ಇದುವರೆಗಿನ ಸರ್ಕಾರಗಳೂ ಹಳೆ ಮೈಸೂರು ಭಾಗಕ್ಕಷ್ಟೇ ಪ್ರಾತಿನಿಧ್ಯ ನೀಡುತ್ತ ಬಂದಿದ್ದರಿಂದ ರಾಜ್ಯದ ಇತರೆ ಪ್ರದೇಶಗಳು ಕಡೆಗಣಿಸಲ್ಪಟ್ಟಿವೆ. ಆಂಧ್ರಪ್ರದೇಶದಲ್ಲಿ ತೆಲಂಗಾಣ ಪ್ರದೇಶ ಕಡೆಗಣಿಸುತ್ತ ಬಂದಿದ್ದರಿಂದ ಅಲ್ಲಿ ಅಭಿವೃದ್ಧಿ ಮರೀಚಿಕೆಗೊಂಡಿತು. ಇದರಿಂದ ಅಸಮಾಧಾನಗೊಂಡ ಸಾರ್ವಜನಿಕರು ಪ್ರತ್ಯೇಕ ರಾಜ್ಯದ ಹೋರಾಟಕ್ಕಿಳಿದರು. ಅವರ ಹೋರಾಟಕ್ಕೀಗ ಇದೀಗ ಮನ್ನಣೆ ದೊರಕಿದೆ. ಕರ್ನಾಟಕದಲ್ಲಿಯೂ ಇಂಥ ಹೋರಾಟ ತೀವ್ರಗೊಳ್ಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದರು. ಆಂಧ್ರಪ್ರದೇಶ ಇಬ್ಭಾಗ ಮಾಡಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚಿಸುವ ಮೂಲಕ ಕೇಂದ್ರದ ಯುಪಿಎ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ. ಇದರಿಂದ ದೇಶದ ಇತರ ರಾಜ್ಯಗಳಲ್ಲಿಯೂ ಪ್ರತ್ಯೇಕತೆಯ ಕೂಗಿಗೆ ಪ್ರೋತ್ಸಾಹ ದೊರೆತಂತಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

