ಧೂಳಿನ ತೊಂದರೆತಪ್ಪಿಸಲು ಪಾಲಿಕೆ ಕ್ರಮ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 6
ಅವಳಿ ನಗರದಲ್ಲಿ ವಾಹನಗಳ ಸಂಚಾರದಿಂದ ಏಳುತ್ತಿರುವ ಧೂಳು ಕಡಿಮೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವಳಿ ನಗರದಲ್ಲಿ ಇತ್ತೀಚೆಗೆ ಸುರಿದ ಮಳೆ ಹಾಗೂ ಒಳ ಚರಂಡಿ ಕಾಮಗಾರಿಯಿಂದ ಪ್ರಮುಖ ರಸ್ತೆಗಳ ಮೇಲೆ ಸಾಕಷ್ಟು ಮಣ್ಣು ಶೇಖರಣೆಯಾಗಿದೆ. ವಾಹನಗಳ ಸಂಚಾರದಿಂದ ಧೂಳು ಏಳುತ್ತಿದ್ದು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಆಯುಕ್ತ ಚೌಧರಿ ನಿರ್ದೇಶನ ನೀಡಿದರು.
ತಕ್ಷಣ ಸ್ವೀಫಿಂಗ್ ಮಶಿನ್ ಮೂಲಕ ಧೂಳು ಏಳುವ ಪ್ರದೇಶದ ರಸ್ತೆಗಳು ಮತ್ತು ಪ್ರಮುಖ ವರ್ತುಲಗಳನ್ನ್ನು ತ್ವರಿತವಾಗಿ ಸ್ವಚ್ಛತೆಗೊಳಿಸುವಂತೆ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರು, ಪರಿಸರ ಅಭಿಯಂತರಿಗೆ ಹಾಗೂ ಆರೋಗ್ಯ ಮೇಲ್ವಿಚಾರಕರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಈಗಾಗಲೇ ಎಲ್ಲ ವಲಯ ಕಚೇರಿಗಳಿಗೆ ನಿಯೋಜಿಸಿದ ನೋಡಲ್ ಅಧಿಕಾರಿಗಳು ಹಾಗೂ ಪಾಲಿಕೆಯ ವಿವಿಧ ವಿಭಾಗದ ಮುಖ್ಯಸ್ಥರಿಗೆ ಬೆಳಗಿನ ಜಾವದಲ್ಲಿ ಕಡ್ಡಾಯವಾಗಿ ಕ್ಷೇತ್ರ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆ ಕುರಿತು ಉಸ್ತುವಾರಿ ಮಾಡಿ ವರದಿ ನೀಡಲು ಆದೇಶಿಸಿದರು.
ಜು. 18ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಪಾಲಿಕೆಯ ವಲಯ ಕಚೇರಿ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ತಗ್ಗುಗಳನ್ನು ಮುಚ್ಚುವ ಕೆಲಸವನ್ನು ತ್ವರಿತವಾಗಿ ತೆಗೆದುಕೊಂಡು ಜನರಿಗೆ ಉತ್ತಮ ಸೇವೆ ನೀಡುವಂತೆ ಆಯುಕ್ತ ಚೌಧರಿ ತಿಳಿಸಿದರು.
ತುರ್ತು ಕೆಲಸಕ್ಕಾಗಿ ಪ್ರತಿ ವಿಭಾಗಕ್ಕೆ ರು. 5 ಲಕ್ಷದಂತೆ ಒಟ್ಟು ರು. 15 ಲಕ್ಷವನ್ನು ಆಯಾ ಕಾರ್ಯನಿರ್ವಾಹಕ ಅಭಿಯಂತರರಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ವಲಯ ಕಚೇರಿ ವ್ಯಾಪ್ತಿಯಲ್ಲಿ ತೆರೆದ ಚರಂಡ್ನಿ ಸ್ವಚ್ಛ ಮಾಡಲು ಸೂಚಿಸಿದ್ದು, ಪ್ರತಿ ದಿನ ತೆರೆದ ಚರಂಡಿ ಸ್ವಚ್ಛತೆ ಕುರಿತು ವರದ್ನಿ ಪಡೆಯಲಾಗುತ್ತಿದೆ. ರಸ್ತೆಗಳಲ್ಲಿರುವ ತಗ್ಗು ಗುಂಡಿಗಳನ್ನು ಮುಚ್ಚುವ ಕೆಲಸ ಕೆಲವೊಂದು ವಲಯ ಕಚೇರಿಗಳಲ್ಲಿ ಈಗಾಗಲೇ ಪ್ರಾರಂಭಿಸಿದ್ದು, ಉಳಿದ ವಲಯ ಕಚೇರಿ ವ್ಯಾಪ್ತಿಯಲ್ಲಿ ಕೂಡಲೇ ಕೆಲಸ್ನ ಪ್ರಾರಂಭಿಸಲು ಸೂಚಿಸಿದರು.
ಎಲ್ಲ ವಲಯ ಕಚೇರಿ ಸಹಾಯಕ ಆಯುಕ್ತರಿಗೆ ಮತ್ತು 3 ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಿಗೆ ಆ. 11ರೊಳಗೆ ಕೆಲಸ್ನ ಪೂರ್ಣಗೊಳಿಸಲು ಆಯುಕ್ತ ರಮಣದೀಪ ಚೌಧರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

