ಮೇಘನಾ ನಾಯಕಗೆ ಒಲಿದ ಟ್ವಿನ್ಸಿಟಿ ಐಡಲ್
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 6
ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಹೆಗಡೆ ಗ್ರೂಪ್ ಇತ್ತೀಚೆಗೆ ಏರ್ಪಡಿಸಿದ್ದ ಟ್ವಿನ್ಸಿಟಿ ಐಡಲ್ ಸಂಗೀತ ಸ್ಪರ್ಧೆಯಲ್ಲಿ ತಾಳ, ರಾಗ ಬದ್ದವಾಗಿ ಹಾಡಿ ಹಳಿಯಾಳದ ಮೇಘನಾ ನಾಯಕ ಪ್ರಥಮ ಸ್ಥಾನವನ್ನು ಪಡೆದರು.
ಫೈನಲ್ ಹಂತದಲ್ಲಿದ್ದ 20 ಯುವಕ-ಯುವತಿಯ ಸ್ಪರ್ಧೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ, ನಿರ್ದೇಶಕ ವಿ. ನಾಗೇಂದ್ರ ಪ್ರಸಾದ ಹಾಗೂ ಸಂಗೀತ ನಿರ್ದೇಶಕ ಎಂ. ನೀಲ ಅವರ ನಿರ್ಣಾಯಕತ್ವದಲ್ಲಿ ಮೇಘನಾ ನಾಯಕ ಟ್ವಿನ್ ಸಿಟಿ ಐಡಲ್ ಆಗಿ ಹೊರ ಹೊಮ್ಮಿದರು. ರು. 25 ಸಾವಿರ ನಗದು ಬಹುಮಾನ ತಮ್ಮದಾಗಿಸಿಕೊಂಡರು.
ದ್ವಿತೀಯ ಸ್ಥಾನವನ್ನು ರಾಣಿಬೆನ್ನೂರಿನ ಕುಮಾರ ಬಿ.ಎಚ್. ಹಾಗೂ ಧಾರವಾಡದ ಮಾನಸಾ ಗ್ರಾಮಪುರೋಹಿತ ತಲಾ ರು. 5 ಸಾವಿರ ಬಹುಮಾನದೊಂದಿಗೆ ಹಂಚಿಕೊಂಡರು. ತೃತೀಯ ಸ್ಥಾನವನ್ನು ನವಲಗುಂದದ ದೃಷ್ಟಿಹೀನ ವಿದ್ಯಾರ್ಥಿ ಜಗದೀಶ ಶಿರಗುಪ್ಪಿ ರು. 5 ಸಾವಿರ ಬಹುಮಾನ ಪಡೆದರು. ಸಮಾಧಾನಕರ ಬಹುಮಾನವನ್ನು ಧಾರವಾಡದ ಪವನ ಇಟಗಿ ಮತ್ತು ಅಳ್ನಾವರದ ಗೀತಾ ಬೋಗರಾಮಗೆ ದಕ್ಕಿತು.
ಸಮಾರಂಭದಲ್ಲಿ ಪ್ರತಿ ಯುವಕ ಅಥವಾ ಯುವತಿ ಹಾಡಿದ ಅನಂತರ ಮೂರು ಜನ ನಿರ್ಣಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಮಾತ್ರವಲ್ಲದೇ, ಧ್ವನಿ, ಲಯ ಹಾಗೂ ಸ್ವರ ಕುರಿತು ಯುವ ಸಂಗೀತಗಾರರಿಗೆ ಮಾರ್ಗದರ್ಶನ ಮಾಡಿದರು. ಬೆಂಗಳೂರು ಬಿಟ್ಟರೆ ಧಾರವಾಡದಲ್ಲಿ 2ನೇ ಬಾರಿಗೆ ಈ ರೀತಿ ಸಂಗೀತ ಪ್ರತಿಭೆಗಳನ್ನು ಹೊರ ತರುವ ನೈಜ ಕಾರ್ಯವನ್ನು ಹೆಗಡೆ ಗ್ರುಪ್ ಮಾಡುತ್ತಿದೆ. ಈ ಕಾರ್ಯಕ್ರಮದ ಮೂಲಕ ಯುವ ಸಂಗೀತಗಾರರು ಬೆಳಕಿಗೆ ಬರಲಿದ್ದಾರೆ ಎಂದು ಸಂಗೀತ ಕಟ್ಟಿ ಅಭಿಪ್ರಾಯಿಸಿದರು.
ಸಂಘಟಕರಾದ ಗಿರೀಶ ಹೆಗಡೆ, ಸತೀಶ ಹೆಗಡೆ, ಸಂತೋಷ ದೇವರೆಡ್ಡಿ, ಪ್ರಶಾಂತ ಗೊರವರ, ಮಂಜು ಗಬ್ಬೂರ, ಅನಿಲ ಕಲಾಲ, ಸುನೀಲ ಜಾ, ಸತೀಶ ಶಿಂಧೆ, ಬಾಸ್ಕೋ ಸೋಲೋಮನ್, ನಾಗರಾಜ, ಜಮೀರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

