ಧಾರವಾಡ

ರಂಜಾನ್ ಹಬ್ಬ: ಸಾಮೂಹಿಕ ವಿಶೇಷ ಪ್ರಾರ್ಥನೆ

Published On :

ಧಾರವಾಡ: ಈದ್-ಉಲ್-ಫಿತರ್ (ರಂಜಾನ್) ಹಬ್ಬದ ಅಂಗವಾಗಿ ಶುಕ್ರವಾರ ಸಾವಿರಾರು ಮುಸ್ಲಿಂ ಬಂಧುಗಳು ಇಲ್ಲಿನ ಈದ್ಗಾ ಮೈದಾನಕ್ಕೆ ಆಗಮಿಸಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಗರದ ಜಾಮೀಯಾ ಮಸಜೀದ್‌ನ ವಿಶೇಷ ಧರ್ಮಗುರು ಮೌಲಾನಾ ಕಾಜೀಮ್ ಅಲಿ ಖತೀಬ ಅವರು ಪ್ರಾರ್ಥನೆ ಬೋಧಿಸಿದರು. ಮೊಹಲ್ಲಾ ಮುತವಲ್ಲಿಗಳಾದ ಖೈಸರ್ ಮಹ್ಮದ್ ಖತೀಬ, ಮೊಹಮ್ಮದ ಇಕ್ಬಾಲ್ ಮುಲ್ಲಾ, ಹಸನ ಅಲಿ ಪೀರಾ, ಮೆಹಬೂಬ್ ಪಾಷಾ, ಎ.ಎ. ಸೈಯದ್, ಶರ್ಫುದ್ದೀನ ಮುಲ್ಲಾ, ಶಹರದ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಉಪಾಧ್ಯಕ್ಷ ಖಲೀಲ ಅಹ್ಮದ ದಾಸನಕೊಪ್ಪ, ಕಾರ್ಯದರ್ಶಿ ಜಬ್ಬಾರ ನಿಪ್ಪಾಣಿ, ಸಹ ಕಾರ್ಯಕಾರ್ಶಿ ರಫೀಕ ಶಿರಹಟ್ಟಿ, ಆಡಳಿತ ಮಂಡಳಿ ಸದಸ್ಯರು, ಪಾಲಿಕೆ ಸದಸ್ಯ ಯಾಸೀನ ಹಾವೇರಿಪೇಟ, ಮುಖಂಡರಾದ ನಿಜಾಮುದ್ದೀನ ಶೇಖ್, ಕಲಂದರ ಮುಲ್ಲಾ, ಎಂ.ಎಸ್. ಫರಾಸ್, ಎಂ.ಎಸ್. ಇನಾಂದಾರ, ಬಸೀರ್ ಜಾಗೀರದಾರ, ಮಹಮ್ಮದಅಲಿ ಗೂಡುಬಾಯಿ, ಇರ್ಷಾದ್ ಬಿಸ್ತಿ ಇದ್ದರು.
ಪ್ರಾರ್ಥನೆ ನಂತರ ತಮ್ಮ ತಮ್ಮಲ್ಲಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಜೊತೆಗೆ ಇತರ ಧರ್ಮೀಯರೂ ಮುಸ್ಲಿಂ ಬಾಂಧವರಿಗೆ ಶುಭಾಶಯ ಹೇಳುತ್ತಿದ್ದುದು ಸೌಹಾರ್ದತೆಗೆ ಸಾಕ್ಷಿಯಾಗಿತ್ತು. ಈ ಹಬ್ಬದ ಅಂಗವಾಗಿ ಹೊಸ ಬಟ್ಟೆ ತೊಟ್ಟ ಮಕ್ಕಳು ವಿಶೇಷ ಭೋಜನ ಸವಿದರು. ಸಾವಿರಾರು ಜನ ಸೇರುವ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಧಾರವಾಡದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.