ಧಾರವಾಡ

ಕನ್ನಡ ಸಾಹಿತ್ಯದಲ್ಲಿ ಇಂಗ್ಲಿಷ್ ಪ್ರಭಾವ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 13
ಪ್ರಾಚೀನ ಹಾಗೂ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ಭಾಷೆಯ ಪ್ರಭಾವ ಹೆಚ್ಚಿತ್ತು. ಆದರೆ, ಆಧುನಿಕ ಸಾಹಿತ್ಯದ ಕನ್ನಡದಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವ ಗಾಢವಾಗಿದೆ ಎಂದು ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ಕೆ.ಆರ್. ದುರ್ಗಾದಾಸ ಅಭಿಪ್ರಾಯಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯ ಭಾಷೆ ಮತ್ತು ಸಾಹಿತ್ಯದ ಪುನರ್ ಮನನ ಕುರಿತು ಏರ್ಪಡಿಸಿದ್ದ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಬೇರೆ ಭಾಷೆಗಳು ಒಂದೊಂದು ವಿವಿಧ ರೀತಿಯಲ್ಲಿ ಅನ್ಯ ಭಾಷೆಗಳೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ ಭಾಷಾ ಶಿಕ್ಷಕರು ಕೇವಲ ತಮ್ಮ ಭಾಷೆಯನ್ನಲ್ಲದೆ ಬೇರೆ ಭಾಷೆಯನ್ನು ಸಹ ಗೌವರವದೊಂದಿಗೆ ಕಾಣಬೇಕು. ಬೇರೆ ಭಾಷೆಯವರೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ನಮ್ಮ ಮಾತಿನಿಂದ ಅನ್ಯ ಭಾಷಿಕರಿಗೆ ಯಾವ ಪರಿಣಾಮ ಬೀರುತ್ತದೆಂದು ಗಮನದಲ್ಲಿಟ್ಟುಕೊಂಡು ವ್ಯವಹರಿಸಬೇಕು ಎಂದು ಸಲಹೆ ನೀಡಿದರು.
ಜ್ಞಾನ ಹೆಚ್ಚಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಶಿಕ್ಷಕರ ಭಾಷೆಗೆ ಸಂಬಂಧಿಸಿದ ವಾಚನಗೋಷ್ಠಿಗಳನ್ನು ಸಂಗ್ರಹ ಮಾಡಿಕೊಳ್ಳಬೇಕು. ಅಲ್ಲದೇ, ತಮ್ಮ ಮನೆಗಳಲ್ಲಿ ಸ್ವಯಂ ಗ್ರಂಥಾಲಯವನ್ನು ಮಾಡಿಕೊಂಡು ಓದುವ ಮೂಲಕ ಅಪಾರ ಜ್ಞಾನ ಸಂಪತ್ತು ಗಳಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನಾರ್ಜನೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ಭಾಷೆಗೆ ಸಂಬಂಧಪಟ್ಟ ಇತ್ತೀಚಿನ ಪ್ರಕಟಣೆ ಹಾಗೂ ಸಂಗ್ರಹಣೆಗಳ ಬಗ್ಗೆ ಶಿಕ್ಷಕರ ಗಮನ ವಹಿಸಬೇಕು. ಶೈಕ್ಷಣಿಕವಾಗಿ ಪ್ರಸ್ತುತ ಕಲಿಕಾ ವಿಷಯದಲ್ಲಿ ಪ್ರತಿಯೊಬ್ಬರ ಮುಂದೆ ಸಾಕಷ್ಟು ಸವಾಲುಗಳಿವೆ. ಅಂತೆಯೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಎದುರಿಸಲು ಸಿದ್ಧರಾಗಿರಬೇಕು. ಅಲ್ಲದೇ, ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅವಶ್ಯಕವಾಗಿರಬೇಕು ಎಂದು ತಿಳಿಸಿದರು. ಶಿಬಿರದ ಸಂಯೋಜಕ ಹಾಗೂ ಕವಿವಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಬಿ. ಅರ್ಚಕ್ ಮಾತನಾಡಿದರು. ಉರ್ದು ವಿಭಾಗದ ಮುಖ್ಯಸ್ಥ ಡಾ. ಸಯ್ಯದ್ ಹುಸೇನ್, ಮರಾಠಿ ವಿಭಾಗದ ಮುಖ್ಯಸ್ಥ ಡಾ.ಬಿ.ಡಿ. ಗಾಯಕವಾಡ ಇದ್ದರು. ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯ ಪ್ರಭಾರಿ ನಿರ್ದೇಶಕ ಡಾ. ಆರ್. ನಝೀರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಶೈಲಜಾ ಭಟ್ ಪ್ರಾರ್ಥಿಸಿದರು. ಡಾ.ಎ. ಡೆವಿಡ್ ಸ್ವಾಗತಿಸಿದರು, ಎಸ್.ಎಸ್. ಸಂಗೊಳ್ಳಿ ನಿರೂಪಿಸಿದರು. ವಿ.ಎಂ. ಗುರುಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.