ಐಸಿಎಆರ್ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಕುಮಟಾ: ಕೃಷಿ ವಿದ್ಯಾಲಯದ ಸ್ನಾತಕೋತ್ತರ ಡೀನ್ ಆಗಿ ಸೇವೆ ಸಲ್ಲಿಸುತ್ತಿರುವ ಸಸ್ಯರೋಗ ತಜ್ಞ ಡಾ.ಎಂ.ಕೆ. ನಾಯಕ್ರಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಿಂದ ಕೊಡಲ್ಪಡುವ 2012 ಸಾಲಿನ ಭಾರತ ರತ್ನ ಸಿ. ಸುಬ್ರಹ್ಮಣ್ಯಂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿದೆ. ಈ ಪ್ರಶಸ್ತಿಯನ್ನು ಕೇಂದ್ರ ಕೃಷಿ ಮಂತ್ರಿ ಶರದ್ ಪವಾರ ಅವರಿಂದ ಐ.ಸಿ.ಎ.ಆರ್. ನ 85ನೇ ಸಂಸ್ಥಾಪನೆ ದಿನದಂದು ನವದೆಹಲಿಯಲ್ಲಿ ಕೊಡಲಾಯಿತು. ಕಾರ್ಯಕ್ರಮವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು. ಪ್ರಶಸ್ತಿಯು ರು. 1 ಲಕ್ಷ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ. ಅಂತೆಯೇ, ದೇಶದ ವಿವಿಧ ವಿವಿಗಳಲ್ಲಿ ತಮ್ಮ ಶಿಕ್ಷಕ ಪ್ರತಿಭೆ ಧಾರೆಯೆರೆಯಲು ವಿಶೇಷ ಪ್ರವಾಸದ ಸಹಾಯಧನ ನೀಡಲಾಗುವುದು. ಡಾ. ನಾಯಕ್ ಅವರ ತಮ್ಮ 20 ವರ್ಷಗಳ ಶಿಕ್ಷಣ ಮತ್ತು ಸಂಶೋಧನ ಅನುಭವದಲ್ಲಿ ವಿವಿಧ ವಿಷಯಗಳನ್ನು ಬೋಧಿಸುವುದರೊಂದಿಗೆ ಸುಮಾರು 24 ಸ್ನಾತಕೋತ್ತರ ಪದವೀಧರ ಪ್ರಬಂಧಕ್ಕೆ ಮಾರ್ಗದರ್ಶಕರಾಗಿದ್ದಾರೆ.
ರಾಷ್ಟ್ರ ಮತ್ತು ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗಳ ಜೊತೆಗೆ ಹಲವಾರು ಪ್ರಮುಖ ಪ್ರಶಸ್ತಿ ಪಡೆದಿರುವ ಡಾ. ನಾಯಕ್ ಅವರು ಭಾರತ ಹಾಗೂ ಅಮೇರಿಕಾ ಸರ್ಕಾರದ ಪ್ರತಿಷ್ಠಿತ ಬ್ರೈಟ್ ಸಂದರ್ಶನ ಪ್ರಾಧ್ಯಾಪಕರಾಗಿ ಅಮೆರಿಕಾ 5 ವಿವಿಗಳಲ್ಲಿ ಭೋದನೆ ಅನುಭವ ಹೊಂದಿದ್ದಾರೆ. ಕೃಷಿ ವಿವಿಯ ಕುಲಪತಿ ಡಾ.ಬಿ.ವಿ. ಪಾಟೀಲ್ ವಿಜ್ಞಾನಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

