ಧಾರವಾಡ

ತಡವಾಗಿ ಬಂದ ದೆಹಲಿ-ಹುಬ್ಬಳ್ಳಿ ವಿಮಾನ

Published On :

ಹುಬ್ಬಳ್ಳಿ: ದೆಹಲಿ-ಹುಬ್ಬಳ್ಳಿ ಮಧ್ಯೆ ಗುರುವಾರದಿಂದ ಸಂಚಾರ ಪ್ರಾರಂಭಿಸಿದ ಮೊದಲ ಸ್ಪೈಸ್ ಜೆಟ್ ವಿಮಾನ ಹುಬ್ಬಳ್ಳಿ ನಿಲ್ದಾಣಕ್ಕೆ ಸುಮಾರು ಮೂರು ತಾಸು ತಡವಾಗಿ ಆಗಮಿಸಿತು.
ನಿಗದಿತ ಸಮಯದ ಪ್ರಕಾರ ಮಧ್ಯಾಹ್ನ 2.10ಕ್ಕೆ ದೆಹಲಿಯಿಂದ ಹುಬ್ಬಳ್ಳಿ ನಿಲ್ದಾಣಕ್ಕೆ ವಿಮಾನ ಬಂದಿಳಿಯಬೇಕಿತ್ತು. ಆದರೆ, ವಿಮಾನ ಹುಬ್ಬಳ್ಳಿ ನಿಲ್ದಾಣಕ್ಕೆ ಸಂಜೆ 5ಕ್ಕೆ ಬಂದಿಳಿದು, 5.20ಕ್ಕೆ ದೆಹಲಿಗೆ ಪುನಃ ಸಂಚಾರಿಸಿತು. ದೆಹಲಿಯಿಂದ ಬಂದ 78 ಸೀಟುಗಳ ಸಾಮರ್ಥ್ಯ ಹೊಂದಿರುವ ವಿಮಾನ ಪ್ರಯಾಣಿಕರಿಂದ ಭರ್ತಿಯಾಗಿದ್ದು, ದೆಹಲಿಯಿಂದ ನೇರವಾಗಿ ಸುಮಾರು 4 ರಿಂದ 6 ಪ್ರಯಾಣಿಕರು ಬಂದಿರುವ ಸಾಧ್ಯತೆ ಇದೆ.
ಮಾರ್ಗ ಮಧ್ಯೆ ಮುಂಬಯಿ ಹಾಗೂ ಜಬ್ಬಲಪುರ ನಿಲ್ದಾಣದಲ್ಲಿ ವಿಮಾನ ಇಳಿಯಲಿದೆ. ಹೀಗಾಗಿ ಮುಂಬಯಿ ಹಾಗೂ ಜಬಲಪುರಕ್ಕೆ ಪ್ರಯಾಣಿಸುವ ಪ್ರಯಾಣಿಕರೂ ವಿಮಾನದಲ್ಲಿದ್ದರು. ನಿತ್ಯ ಬೆಳಗ್ಗೆ 7.40ಕ್ಕೆ ದೆಹಲಿಯಿಂದ ಹೊರಡುವ ವಿಮಾನ ಮಧ್ಯಾಹ್ನ 2.10ಕ್ಕೆ ಹುಬ್ಬಳ್ಳಿ ತಲುಪುವುದು. ಮರಳಿ 2.40ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಸಂಚಾರ ಪ್ರಾರಂಭಿಸುವುದು. ಈ ಮೊದಲು ಮುಂಬೈವರೆಗೆ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಜಬಲಪೂರ ಮಾರ್ಗವಾಗಿ ದೆಹಲಿವರೆಗೆ ವಿಸ್ತರಿಸಲಾಗಿದೆ. ದೆಹಲಿ-ಹುಬ್ಬಳ್ಳಿ ಮಧ್ಯದ ಪ್ರಯಾಣ ಸುಮಾರು 6 ತಾಸುಗಳಾದ್ದಾಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಕೆ.ಎಂ. ಬಸವರಾಜು 'ಕನ್ನಡಪ್ರಭ'ಕ್ಕೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.