ಧಾರವಾಡ

ಹಿಂದೆ ರಾಜಕೀಯಕ್ಕೆ ಒತ್ತು ಇರಲಿಲ್ಲ

Published On :

ಧಾರವಾಡ: ಕೆಲ ವರ್ಷಗಳ ಹಿಂದೆ ರಾಜಕೀಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿರಲಿಲ್ಲ. ಅಲ್ಲದೆ, ಹೇಳಿಕೊಳ್ಳುವಷ್ಟು ಸ್ಪರ್ಧೆಯೂ ಇರಲಿಲ್ಲ ಎಂದು ಸಿಎಸ್‌ಐ ಕಾಲೇಜಿನ ಪ್ರಾಧ್ಯಾಪಕ ಡಾ. ಶಂಭು ಹೆಗಡಾಳ ಹೇಳಿದರು.
ಇಲ್ಲಿನ ಎಪಿಎಂಸಿಯಲ್ಲಿ ದಲ್ಲಾಲ ಮತ್ತು ವ್ಯಾಪಾರಸ್ಥರ ಸಂಘ ಏರ್ಪಡಿಸಿದ್ದ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜಕೀಯ ವ್ಯವಸ್ಥೆ ಸ್ಪರ್ಧಾತ್ಮಕವಾಗಿ ಬೆಳೆದು ನಿಂತಿದ್ದು, ಅದಕ್ಕೆ ತಕ್ಕಂತೆ ರಾಜಕಾರಣಿಗಳು ಸಹ ಸಾಗಬೇಕಿದೆ.
ಅಲ್ಲದೆ, ರಾಜಕೀಯದ ಜೊತೆಗೆ ಸಾರ್ವಜನಿಕ ಬದುಕು ಬದಲಾಗಿದ್ದು, ಅವರ ಅನುಕೂಲಕ್ಕೆ ಮತ್ತು ಮೂಲಸೌಕರ್ಯ ಕಲ್ಪಿಸುವ ನಿಟ್ಟಿನ ರಾಜಕಾರಣಿಗಳು ಕಾರ್ಯನಿರ್ವಹಿಸಬೇಕು ಎಂದರು.
ಮೂಲ ಉದ್ಯೋಗವಾದ ಕೃಷಿ ಕ್ಷೇತ್ರ ನಿಂತ ನೀರಾಗಿದ್ದು, ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಜಾಗತಿಕ ಮಟ್ಟದ ಸುಳಿಯಲ್ಲಿ ಜನತೆ ಮೂಲವೃತ್ತಿ ಕೃಷಿಯನ್ನು ಸಾಕಷ್ಟು ಜನ ತಿರಸ್ಕರಿಸಿ ಅಗತ್ಯತೆಗಳಿಗೆ ತಕ್ಕ ಉದ್ಯೋಗ ಮಾಡುತ್ತಿದ್ದಾರೆ. ಇದರಿಂದಾಗಿ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಶಿವಶಂಕರ ಹಂಪಣ್ಣವರ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ. ಸಂಕೋಜಿ, ಮುತ್ತಣ್ಣ ಬಳ್ಳಾರಿ, ಬಿ.ಎಸ್. ದೊಡ್ಡಗೌಡರ, ಮೌನುದ್ದೀನ್ ಅಮ್ಮಿನಬಾವಿ, ಬಸವರಾಜ ತೆಗ್ಗಿ, ಬಿ.ಎಂ. ಹಕಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.