ಪ್ರತಿಭಾ ಪುರಸ್ಕಾರ
ಧಾರವಾಡ: ದೇವಾಂಗ ಸಂಘದಿಂದ 2103ನೇ ಸಾಲಿನ ಎಸ್ಸೆಸ್ಸೆಲ್ಸಿ ಶೇ. 80, ಪಿಯುಸಿ ಪರೀಕ್ಷೆಯಲ್ಲಿ ಶೇ. 70 ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಿದೆ. ಆಸಕ್ತರು ಸೆ. 7ರೊಳಗೆ ಮಾಹಿತಿ ನೀಡಬೇಕು. ಹೆಚ್ಚಿನ ಮಾಹಿತಿಗೆ ಮೊ. 9945552004 ಸಂಪರ್ಕಿಸಿ ಎಂದು ಸಂಘದ ಗೌರವ ಕಾರ್ಯದರ್ಶಿ ಅಶೋಕ ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿನ್ನಾಭರಣ ಅಪಹರಣ
ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಶಿವಪುರ ಕಾಲೋನಿ ಬಳಿ ದೇವಸ್ಥಾನದಿಂದ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ 15 ಗ್ರಾಂ ಚಿನ್ನದ ಸರವನ್ನು ಅಪರಿಚಿತ ಬೈಕ್ ಸವಾರರಿಬ್ಬರು ಅಪಹರಿಸಿದ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿವಪುರ ಕಾಲೋನಿ ನಿವಾಸಿ ರಾಜಮಣಿ ಸಿ. ಪುರೋಹಿತ್ ಅವರು ದೇವಸ್ಥಾನದಿಂದ ರಾತ್ರಿ 7 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬೈಕ್ ಮೇಲೆ ಬಂದ ಯುವಕರಿಬ್ಬರು ಮಹಿಳೆಯ ಕೊರಳಿಗೆ ಕೈ ಹಾಕಿ ಕಿತ್ತುಕೊಳ್ಳುವ ಯತ್ನ ಮಾಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮಹಿಳೆ ಕೊರಳಿದ್ದ ತಾಳಿ ಮತ್ತು ಚೈನ್ನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಚೈನ್ ತುಂಡಾಗಿ 15 ಗ್ರಾಂ ಮಾತ್ರ ಕಳ್ಳರ ಕೈಸೇರಿದೆ ಎಂದು ದೂರು ನೀಡಿದ್ದಾರೆ.
ಹಾಡಹಗಲೇ ಕಳ್ಳತನ
ಹುಬ್ಬಳ್ಳಿ: ಇಲ್ಲಿನ ಶ್ರೀನಿವಾಸ ನಗರದಲ್ಲಿ ಸೋಮವಾರ ಬೆಳಗ್ಗೆ ಕಳ್ಳರು ಅಂದಾಜು ರು. 1.80 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶ್ರೀನಿವಾಸ ನಗರದ ಪ್ರಶಾಂತ ಶ್ರೀಪಾದರಾವ್ ಹುಬ್ಬಳ್ಳಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಪ್ರಶಾಂತ ಅವರು ಪಕ್ಕದ ಸಿದ್ಧಾರೂಢ ಮಠಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯೊಡತಿ ಮನೆ ಬಾಗಿಲು ತೆರೆದಿಟ್ಟು ಸ್ನಾನಕ್ಕೆ ಹೋಗಿದ್ದರು. ತೆರೆದ ಮನೆ ಬಾಗಿಲು ನೋಡಿ ಸಮಯ ಸಾಧಿಸಿ ಕಳ್ಳರು ಅಲ್ಮೇರಾದಲ್ಲಿದ್ದ 4 ತೊಲೆ ಮಂಗಳಸೂತ್ರ, 1 ತೊಲೆ ಚಿನ್ನದ ಸರ, ಅರ್ಧ ತೊಲೆಯ 2 ಉಂಗುರುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಎಸಿಪಿ ಜಿ.ಎಂ. ದೇಸೂರ, ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ಚಲವಾದಿ ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಅರ್ಜುನ ಜಡಿಯವರ
ಧಾರವಾಡ: ಗುಲಗಂಜಿಕೊಪ್ಪದ ನಿವಾಸಿಯಾಗಿದ್ದ ಅರ್ಜುನ ಶಂಕರಪ್ಪ ಜಡಿಯವರ (71) ಭಾನುವಾರ ನಿಧನ ಹೊಂದಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಗುರುಸಿದ್ದವ್ವಾ ಲೋಕೂರ
ನವಲಗುಂದ: ತಾಲೂಕಿನ ಗೊಬ್ಬರಗುಂಪಿಗ್ರಾಮದ ರೈತ ಮಹಿಳೆ ಗುರುಸಿದ್ದವ್ವಬಸಪ್ಪ ಲೋಕೂರ (80) ಭಾನುವಾರ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು, ಪುತ್ರಿ, ಅಪಾರ ಬಂದು ಬಳಗ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

