ಧಾರವಾಡ

ಸುದ್ದಿ ಸಂಕ್ಷೇಪ

Published On :

ನಾಳೆ ಜಾಗತಿಕ ಕಾನೂನು ಸಂವಾದ ಕಾರ್ಯಾಗಾರ
ಧಾರವಾಡ: ಇಲ್ಲಿನ ಅಲೆಕ್ಸಿಸ್ ಸೆಂಟರ್ ಫಾರ್ ಸ್ಟಡಿ ಆಂಡ್ ರಿಸರ್ಚ್ ಇನ್ ಲಾ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಸರ್. ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ವತಿಯಿಂದ ಇಲ್ಲಿನ ಕವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಆ. 29ರಿಂದ ಮೂರು ದಿನಗಳ ಕಾಲ ಜಾಗತಿಕ ಕಾನೂನು ಸಂವಾದ  ಎಂಬ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟಕ ಎಸ್.ಸಿ. ಮಾಳಗಿ, ದೇಶ ಹಾಗೂ ಹೊರ ದೇಶಗಳಿಂದ 100 ಜನರು ಭಾಗವಹಿಸುತ್ತಿದ್ದು, ಶಾಸನದ ಕರಡು, ಶಿಕ್ಷಣ, ಆರೋಗ್ಯ ರಕ್ಷಣೆ, ಅಂತಾರಾಷ್ಟ್ರೀಯ ಸಂಬಂಧ, ಮಹಿಳಾ ಸ್ವಾವಲಂಬನೆ ಕುರಿತು ಚರ್ಚೆ ನಡೆಯಲಿದೆ. 29ರಂದು ಮಧ್ಯಾಹ್ನ 3ಕ್ಕೆ ವಿಚಾರ ಸಂಕಿರಣವನ್ನು ಅಂತಾರಾಷ್ಟ್ರೀಯ ನ್ಯಾಯಾಧೀಶರ ಮಂಡಳಿಯ ಅಧ್ಯಕ್ಷ ಆದೀಶ ಅಗರವಾಲಾ ಉದ್ಘಾಟಿಸುವರು. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕವಿವಿ ಕುಲಪತಿ ಎಚ್.ಬಿ. ವಾಲೀಕಾರ ಭಾಗವಹಿಸುತ್ತಾರೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 98444 36034 ಸಂಪರ್ಕಿಸಬಹುದೆಂದು ಹೇಳಿದರು. ಹರ್ಷಾ ಪಾಟೀಲ, ಅಪೂರ್ವಾ ಭಟ್ ಸುದ್ದಿಗೋಷ್ಠಿಯಲ್ಲಿದ್ದರು.
ಚಿನ್ನಾಭರಣ ಕಳ್ಳತನ
ಹುಬ್ಬಳ್ಳಿ: ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದ ಮನೆಯೊಂದರ ಬೀಗ ಮುರಿದು ಕಳ್ಳರು ಅಂದಾಜು ರು. 25 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋನಿಯಾ ಗಾಂಧಿ ನಗರದ ಅಬ್ದುಲ್ ಹನೀಫ್ ಪುಣೆವಾಲಾ ಅವರ ಮನೆಯಲ್ಲಿ ಟ್ರಂಕ್ನಲ್ಲಿ ಇರಿಸಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರು ಮನೆ ಮಾಲೀಕ ಅಬ್ದುಲ್ ಪುಣೆವಾಲೆ ದೂರು ನೀಡಿದ್ದಾರೆ.
ಬೈಕ್ ಸವಾರನಿಗೆ ಹೃದಯಾಘಾತ: ಸಾವು
ಹುಬ್ಬಳ್ಳಿ: ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿಯೊಬ್ಬ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗೋಕುಲ ರಸ್ತೆಯಲ್ಲಿ ನಡೆದಿದೆ. ಹಳೇ ಹುಬ್ಬಳ್ಳಿ ಆನಂದ ನಗರ ನಿವಾಸಿ ವಿನಯ ಅಲಿಯಾಸ್ ಬಾಬು ವಿಕ್ಟರ್ ಸ್ಯಾಮುಯೆಲ್ (34) ಗೋಕುಲ್ ರಸ್ತೆಯ ಜೆ.ಪಿ. ನಗರ ಕ್ರಾಸ್ ಬಳಿ ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದು, ಆಘಾತದಿಂದಾಗಿ ತಕ್ಷಣ ಬೈಕ್ ಇಳಿದು ಕುಳಿತು ಸಾವರಿಸಿಕೊಳ್ಳುತ್ತಿದ್ದ ವೇಳೆ ಮೃತಪಟ್ಟಿದ್ದಾನೆ ಎಂದು ಹೆಲ್ಮೆನ್ ಸ್ಯಾಮುಯೆಲ್ ದೂರಿನಲ್ಲಿ ತಿಳಿಸಿದ್ದಾರೆ.
ಸುಶೀಲಾ ಉಡಿಕೇರಿ ನಿಧನ
ಧಾರವಾಡ: ಮೂಲತಃ ಸವದತ್ತಿ ತಾಲೂಕಿನ ಗುರ್ಲಹೊಸೂರಿನ ಇಲ್ಲಿನ ಸಿದ್ದೇಶ್ವರನಗರದ ನಿವಾಸಿಯಾಗಿದ್ದ ಸುಶೀಲಾ ಸಿದ್ದಪ್ಪಾ ಉಡಿಕೇರಿ (80) ನಿಧನ ಹೊಂದಿದ್ದಾರೆ. ನ್ಯಾಯವಾದಿ ಪ್ರಕಾಶ ಉಡಿಕೇರಿ ಸೇರಿದಂತೆ ಮೂವರು ಪುತ್ರರು, ಸೊಸೆಯಂದಿರು, ಮೊಮಕ್ಕಳು, ಅಪಾರ ಬಂಧು-ಬಳಗ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.