ಕ್ಷೀರಭಾಗ್ಯ ಸದುಪಯೋಗ ಪಡೆಯಿರಿ: ಈಶ್ವರ
ಕುಂದಗೋಳ: ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ಷೀರಭಾಗ್ಯ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಎಸ್ಡಿಎಂಸಿ ಅಧ್ಯಕ್ಷ ಈಶ್ವರ ಬೇವಿನಮರದ ಮಕ್ಕಳಿಗೆ ಕರೆಕೊಟ್ಟರು.
ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಅನಿತಾ ದೊಡಮನಿ, ಸದಸ್ಯರಾದ ಮಾರುತಿ ನಾಗಣ್ಣವರ, ಮಾರುತಿ ಬೇವಿನಮರದ, ನಾಗರಾಜ ಗುಡೆಮ್ಮನವರ, ಬಸವರಾಜ ದೊಡಮನಿ, ಕೃಷ್ಣಾ ಕಾಲವಾಡ, ರತ್ನಾ ಗುಡೇಮ್ಮನವರ, ಸುನಂದಾ ಭೋವಿ, ಮಂಜುಳಾ ಜೋಗಮ್ಮನವರ, ರೇಷ್ಮಾ ಹನಸಿ, ಯಮನವ್ವ ಹರಣಶಿಕಾರಿ, ಲಕ್ಷ್ಮೀ ಲಮಾಣಿ, ಈರಪ್ಪ ನಾಗಣ್ಣವರ ಇದ್ದರು. ಮುಖ್ಯೋಪಾಧ್ಯಾಯ ಆರ್.ಎಸ್. ದೇವರಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ. ವಾಡೇಕರ ಸ್ವಾಗತಿಸಿದರು. ಡಿ.ಪಿ. ಗುಡಿಮನಿ ವಂದಿಸಿದರು. ವಿ.ಸಿ. ಪಟ್ಟಣಶಟ್ಟಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

