ಸುದ್ದಿ ಸಂಕ್ಷೇಪ
ಪತ್ರಿಕೋದ್ಯಮದಲ್ಲಿ ಉದ್ಯೋಗಕ್ಕೆ ಬರವಿಲ್ಲ
ಧಾರವಾಡ: ಭಾಷೆ ಮತ್ತು ಕೌಶಲ್ಯದೊಂದಿಗೆ ಸಾಮಾನ್ಯ ಜ್ಞಾನ ಮತ್ತು ತ್ವರಿತಗತಿಯ ಸ್ಪಂದನೆ ಪತ್ರಿಕೋದ್ಯಮದಲ್ಲಿ ಮುಖ್ಯವಾಗಿದ್ದು, ಇಲ್ಲಿ ಉದ್ಯೋಗ ಅವಕಾಶಗಳಿಗೆ ಬರವಿಲ್ಲ ಎಂದು ಸ್ಪರ್ಧಾ ಸ್ಫೂರ್ತಿ ಮಾಸ ಪತ್ರಿಕೆಯ ಹಿರಿಯ ಸಂಪಾದಕ ಐ.ಜಿ. ಚೌಗಲಾ ಹೇಳಿದರು. ಕರ್ನಾಟಕ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪತ್ರಿಕೋದ್ಯಮ ಸಂಘ ಶನಿವಾರ ಏರ್ಪಡಿಸಿದ್ದ ಪತ್ರಿಕೋದ್ಯಮ ಕೌಶಲ್ಯ ಮತ್ತು ಉದ್ಯೋಗ ಅವಕಾಶಗಳು ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಪತ್ರಿಕಾ ವೃತ್ತಿಗೆ ಭಾಷೆಯೇ ಜೀವಾಳ ಮತ್ತು ಬಂಡವಾಳವಾಗಿದೆ. ಕನಿಷ್ಠ ಎರಡು ಭಾಷೆ ಬಲ್ಲ ಪತ್ರಕರ್ತನಿಗೆ ವಿಶೇಷವಾದ ಸ್ಥಾನಮಾನ ಲಭಿಸುತ್ತದೆ. ಆದ್ದರಿಂದ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಭಾಷೆಯ ಕಲಿಕೆ, ಬರವಣಿಗೆ ಮತ್ತು ಮಾತನಾಡುವ ವಿಶೇಷ ಕೌಶಲ್ಯ ಬೆಳೆಸಿಕೊಳ್ಳಬೇಕು. ಪತ್ರಕರ್ತರಾಗುವವರಿಗೆ ಸತ್ಯ ಸಂಗತಿಗಳನ್ನು ನೇರ ಮತ್ತು ದಿಟ್ಟವಾಗಿ ಹೇಳುವ ಮತ್ತು ಕೇಳುವ ಧೈರ್ಯವಿರಬೇಕು ಎಂದರು. ಕ್ರಿಯಾಶೀಲ ಪತ್ರಿಕೋದ್ಯಮ ಸದಾಕಾಲ ಮಾನ್ಯತೆ ಮತ್ತು ಗೌರವವನ್ನು ಪಡೆಯುತ್ತದೆ. ಬದ್ಧತೆಯಿಂದ ಕೆಲಸ ಮಾಡುವ ವರದಿಗಾರನಿಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತದೆ. ತಂತ್ರಜ್ಞಾನ ಆಧಾರಿತ ವರದಿಗಾರಿಕೆಯ ಜತೆಗೆ ಕ್ರಿಯಾಶೀಲತೆ ಮತ್ತು ಬದ್ಧತೆ ಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನದೊಂದಿಗೆ ಇವುಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉಪ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಎಂ.ಬಿ. ದಳಪತಿ, ಡಾ. ಮುಷ್ಠಿಗೇರಿ, ಡಾ. ಸುರೇಶ ಹಿರೇಮಠ ಇದ್ದರು. ಕಲಾವತಿ ಮಡ್ಲಿ ಪ್ರಾರ್ಥಿಸಿದರು. ವಾಣಿ ಸೊನ್ನ ಸ್ವಾಗತಿಸಿದರು. ಸಿ. ಬಸವರಾಜ ವಂದಿಸಿದರು. ರಾಚಪ್ಪ ದೊಡ್ಡೂರು ನಿರೂಪಿಸಿದರು.
ಭಾರತ ಜಾಗೃತಿ ಓಟ
ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆ ಸಮಿತಿ ವತಿಯಿಂದ ಸೆ. 11ರಂದು ನಗರದಲ್ಲಿ 'ಭಾರತ ಜಾಗೃತಿ ಓಟ' ವಿವೇಕ ಮ್ಯಾರಥಾನ್ ಆಯೋಜಿಸಲಾಗಿದೆ. ಬಿವಿಬಿ ಎಂಜಿನಿಯರಿಂಗ್ ಕಾಲೇಜು ಮುಂಭಾಗದಿಂದ ಹಾಗೂ ಹಳೇ ಹುಬ್ಬಳ್ಳಿ ಅಂಬೇಡ್ಕರ್ ಮೈದಾನದಿಂದ ಬೆಳಗ್ಗೆ 10.30ಕ್ಕೆ, ಶಿರೂರು ಪಾರ್ಕ್ನ ಸುಕೃತಿ ಕಾಲೇಜು ಮುಂಭಾಗ, ಮೂರು ಸಾವಿರ ಮಠದ ಮೈದಾನ, ಕೇಶ್ವಾಪೂರ ಸರ್ವೋದಯ ವೃತ್ತದಿಂದ ಹಾಗೂ ಅಕ್ಷಯ ಪಾರ್ಕ್ನಿಂದ 11 ಗಂಟೆಗೆ ಮ್ಯಾರಥಾನ್ ಪ್ರಾರಂಭಗೊಳ್ಳಲಿದೆ. ನಗರದ ಆರು ಸ್ಥಳಗಳಿಂದ ಪ್ರಾರಂಭಗೊಳ್ಳುವ ಈ ಮ್ಯಾರಥಾನ್ ನೆಹರು ಮೈದಾನಕ್ಕೆ ಬಂದು ಸೇರಲಿದೆ. ಮ್ಯಾರಥಾನ್ನಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ಮಾಹಿತಿಗೆ ಡಾ. ರಘು ಅಕಮಂಚಿ (94486 31998) ಅಥವಾ ವಿನಾಯಕ ತಲಗೇರಿ (94803 97682) ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

